ಬರಾಕ್ ಹೋಗಾಕ್ ಮುಂಚೆ...ಮೊಸುಲ್ ನಲ್ಲಿ ಮನೆಗೆ ಮರಳಿದರು

Posted By:
Subscribe to Oneindia Kannada

ಅಮೆರಿಕದಲ್ಲಿ ಇನ್ನೇನು ಡೊನಾಲ್ಡ್ ಟ್ರಂಪ್ ಯುಗಾರಂಭವಾಗಲಿದೆ. ಅದಕ್ಕೂ ಮುನ್ನ ನಿರ್ಗಮಿಸಲಿರುವ ಬರಾಕ್ ಒಬಾಮ ವೈಟ್ ಹೌಸ್ ನಲ್ಲಿ ಸಭೆಯೊಂದನ್ನು ನಡೆಸಿದ್ದಾರೆ. ಸೇನೆಯ ಸರ್ವೋಚ್ಚ ನಾಯಕರು ಹಾಗೂ ಪ್ರಮುಖ ಕಾರ್ಯಾಚರಣೆಗಳಲ್ಲಿ ಭಾಗಿಯಾಗುವ ಕಾರ್ಯಪಡೆಯ ಸೇನಾ ಅಧಿಕಾರಿಗಳ ಅದರಲ್ಲಿ ಭಾಗವಹಿಸಿದ್ದಾರೆ.

ಗುರು ಗೋವಿಂದ್ ಸಿಂಗ್ ಮುನ್ನೂರೈವತ್ತನೇ ಜನ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಡಿಎಂಕೆಯಲ್ಲಿ ಈಗ ಬದಲಾವಣೆ ಪರ್ವ ಕಾಣಿಸಿಕೊಂಡಿದೆ. ಎಂ.ಕರುಣಾನಿಧಿ ಅವರ ಮಗ ಎಂ.ಕೆ.ಸ್ಟಾಲಿನ್ ಗೆ ಕಾರ್ಯಾಧ್ಯಕ್ಷ ಪಟ್ಟ ಕಟ್ಟಲಾಗಿದೆ. ಇರಾಕ್ ನ ಮೊಸುಲ್ ನಲ್ಲಿ ಐಎಸ್ ಉಗ್ರರ ಹಾವಳಿಗೆ ಹೆದರಿ ಮನೆ ಬಿಟ್ಟಿದ್ದವರನ್ನು ಅಲ್ಲಿನ ಸೇನೆ ವಾಪಸ್ ಕರೆತರುತ್ತಿದೆ.[2016ರಲ್ಲಿ ಗಮನ ಸೆಳೆದ 24 ಚಿತ್ರಗಳು]

ಐದು ರಾಜ್ಯಗಳ ಚುನಾವಣೆ ಘೋಷಣೆಯಾದ ಮೇಲೆ ನೀತಿ ಸಂಹಿತೆಯ ಬಗ್ಗೆಯೇ ಎಲ್ಲೆಡೆ ಚರ್ಚೆ. ಅದಕ್ಕೆ ಸಂಬಂಧಿಸಿದ ಹಾಗೆ-ಪರಿಸ್ಥಿತಿಯನ್ನು ತುಂಬ ಚೆನ್ನಾಗಿ ಬಿಂಬಿಸುವ ಉತ್ತರಪ್ರದೇಶದ ಫೋಟೋವೊಂದು ಸಿಕ್ಕಿದೆ. ಇನ್ನು ತೃಣಮೂಲ ಕಾಂಗ್ರೆಸ್ ನವರಿಗೆ ಸಂಸದ ಸುದಿಪ್ ಬಂಡೋಪಾಧ್ಯಾಯ ಬಂಧನ ಅಸಾಧ್ಯ ಸಿಟ್ಟು ತರಿಸಿದೆ. ಆ ಕಾರಣಕ್ಕೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಇನ್ನಷ್ಟು, ಮತ್ತಷ್ಟು ವಿಶೇಷ ಸುದ್ದಿಯ ಫೋಟೋ-ವಿವರಣೆ ನಿಮ್ಮೆದುರಿಗಿದೆ.

ಬರಾಕ್ ಹೋಗಾಕ್ ಮುಂಚೆ ಸಭೆ

ಬರಾಕ್ ಹೋಗಾಕ್ ಮುಂಚೆ ಸಭೆ

ಅಮೆರಿಕದ ಅಧ್ಯಕ್ಷ ಸ್ಥಾನದಿಂದ ಬರಾಕ್ ಒಬಾಮ ನಿರ್ಗಮಿಸುವುದಕ್ಕೆ ಇನ್ನೇನು ದಿನಗಳ ಲೆಕ್ಕಾಚಾರ ಬಾಕಿ ಇದೆ. ಬುಧವಾರದಂದು ವೈಟ್ ಹೌಸ್ ನಲ್ಲಿ ವಿಶೇಷ ಕಾರ್ಯಪಡೆಯ ಅಧಿಕಾರಿಗಳು, ಸೇನೆಯ ಸರ್ವೋಚ್ಚ ನಾಯಕರನ್ನು ಒಳಗೊಂಡ ಸಭೆಯನ್ನು ನಡೆಸಿದ್ದಾರೆ ಬರಾಕ್ ಒಬಾಮ.

ಇರಾಕ್ ನಲ್ಲಿ ತಪ್ಪು ನೋಡಿ ಸುಮ್ನೆ ಇರಾಕಿಲ್ಲ ಅಂದರೆ...

ಇರಾಕ್ ನಲ್ಲಿ ತಪ್ಪು ನೋಡಿ ಸುಮ್ನೆ ಇರಾಕಿಲ್ಲ ಅಂದರೆ...

ಇರಾಕಿ ಪತ್ರಕರ್ತೆ ಅಫ್ರಾ ಶಾಖಿ ಅಲ್-ಕೈಸ್ (ಮಧ್ಯದಲ್ಲಿ ಎಡಗಡೆ) ಅವರನ್ನು ಕಳೆದ ವಾರ ಅಪಹರಿಸಲಾಗಿತ್ತು. ಬಿಡುಗಡೆ ಆದ ನಂತರ ಇರಾಕ್ ನ ಬಾಗ್ದಾದ್ ನಲ್ಲಿ ಆಕೆಯನ್ನು ಆಪ್ತರು ಅಭಿನಂದಿಸಿದ್ದು ಹೀಗೆ. ಕಳೆದ ವಾರವಷ್ಟೇ ಬಾಗ್ದಾದ್ ನಲ್ಲಿರುವ ಆಕೆ ಮನೆಯಿಂದ ಅಪಹರಿಸಲಾಗಿತ್ತು. ಭ್ರಷ್ಟಾಚಾರದ ಪ್ರಬಲ ವಿರೋಧಿ ಕೈಸಿ. ಅಕೆಯ ಅಪಹರಣದ ಹೊಣೆಯನ್ನು ಯಾವುದೇ ಗುಂಪು ಕೂಡ ಹೊತ್ತಿಕೊಂಡಿಲ್ಲ.

ಝಗಮಗ ಸ್ವರ್ಣಮಂದಿರ್

ಝಗಮಗ ಸ್ವರ್ಣಮಂದಿರ್

ಗುರು ಗೋವಿಂದ್ ಸಿಂಗ್ ಅವರ 350ನೇ ಜನ್ಮ ಜಯಂತಿ ಅಂಗವಾಗಿ ಸಿಂಗಾರಗೊಂಡಿದ್ದ ಅಮೃತ್ ಸರ್ ನ ಸ್ವರ್ಣ ಮಂದಿರ ಬೆಳಕಿನಿಂದ ಝಗಮಗಿಸುತ್ತಿತ್ತು.

ಸಂಗೀತ ದಿಗ್ಗಜ ಜಸ್ ರಾಜ್ ಮತ್ತು ಮಕ್ಕಳು

ಸಂಗೀತ ದಿಗ್ಗಜ ಜಸ್ ರಾಜ್ ಮತ್ತು ಮಕ್ಕಳು

ಸಂಗೀತಗಾರ ಪಂಡಿತ್ ಜಸ್ ರಾಜ್ ತಮ್ಮ ಮಗಳು ದುರ್ಗಾ ಹಾಗೂ ಮಗನೊಂದಿಗೆ ಮುಂಬೈನಲ್ಲಿ ಸಂಗೀತಗೋಷ್ಠಿಗೆ ಪೂರ್ವಭಾವಿಯಾಗಿ ನಡೆಸಿದ ಪತ್ರಿಕಾಗೋಷ್ಠಿಗೆ ಬರುವಾಗ ಕಂಡು ಬಂದಿದ್ದು ಹೀಗೆ.

ಸ್ಟಾಲಿನ್ ಬಂದರು ದಾರಿ ಬಿಡಿ

ಸ್ಟಾಲಿನ್ ಬಂದರು ದಾರಿ ಬಿಡಿ

ಡಿಎಂಕೆ ಕಾರ್ಯಾಧ್ಯಕ್ಷರಾಗಿ ಎಂ.ಕೆ.ಸ್ಟಾಲಿನ್ ಆಯ್ಕೆ ಆದ ನಂತರ ಎಂ.ಕರುಣಾನಿಧಿ ಅವರ ಆಶೀರ್ವಾದ ಪಡೆದರು. ಕಳೆದ ನಲವತ್ತೆಂಟು ವರ್ಷದಲ್ಲಿ ಇದೇ ಮೊದಲ ಬಾರಿಗೆ ಪಕ್ಷದ ಸರ್ವ ಸದಸ್ಯರ ಸಭೆಯಲ್ಲಿ ಕರುಣಾನಿಧಿಯವರು ಪಾಲ್ಗೊಂಡಿರಲಿಲ್ಲ.

ತೃಣಮೂಲ ಸಂಸದರು ಕಿಡಿಕಿಡಿ

ತೃಣಮೂಲ ಸಂಸದರು ಕಿಡಿಕಿಡಿ

ಟಿಎಂಸಿ ಸಂಸದ ಸುದಿಪ್ ಬಂಡೋಪಾಧ್ಯಾಯ ಬಂಧನವನ್ನು ವಿರೋಧಿಸಿ ನವದೆಹಲಿಯ ಪ್ರಧಾನಿ ನಿವಾಸದ ಎದುರು ಪ್ರತಿಭಟನೆ ನಡೆಸಲು ಮೆರವಣಿಗೆಯಲ್ಲಿ ಹೊರಟ ತೃಣಮೂಲ ಕಾಂಗ್ರೆಸ್ ನ ಸಂಸದರನ್ನು ಪೊಲೀಸರು ವಶಕ್ಕೆ ಪಡೆದರು.

ಮರಳಿ ಮನೆಗೆ ಬಂದರು ಮೊಸುಲ್ ನಿವಾಸಿಗಳು

ಮರಳಿ ಮನೆಗೆ ಬಂದರು ಮೊಸುಲ್ ನಿವಾಸಿಗಳು

ಇರಾಕಿ ಸೈನಿಕರು ಹಾಗೂ ಐಎಸ್ ಉಗ್ರರ ಮಧ್ಯದ ಕದನದಲ್ಲಿ ಚೆಲ್ಲಾಪೆಲ್ಲಿಯಾಗಿದ್ದ ಇರಾಕಿಗಳನ್ನು ವಾಪಸ್ ಮನೆಗೆ ಕರೆತರುತ್ತಿದ್ದಾರೆ. ಅಂದಹಾಗೆ ಇದು ಇರಾಕ್ ನಲ್ಲಿರುವ ಪೂರ್ವ ಮೊಸುಲ್ ನ ದೃಶ್ಯ.

ಬೂಮ್ರಾಗೆ ಕ್ಲೀನ್ ಬೌಲ್ಡ್

ಬೂಮ್ರಾಗೆ ಕ್ಲೀನ್ ಬೌಲ್ಡ್

ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿಯ ಸೆಮಿ ಫೈನಲ್ ನ ನಾಲ್ಕನೇ ದಿನದಾಟದಲ್ಲಿ ಜಾರ್ಖಂಡ್ ನ ಬ್ಯಾಟ್ಸ್ ಮನ್ ರಾಹುಲ್ ಶುಕ್ಲಾ, ಗುಜರಾತ್ ನ ಬೌಲರ್ ಜಸ್ ಪ್ರೀತ್ ಬೂಮ್ರಾಗೆ ಕ್ಲೀನ್ ಬೌಲ್ಡ್ ಆದರು.

ನೆಲ ತಲುಪಿದ ಅಖಿಲೇಶ್ ಹೋರ್ಡಿಂಗ್, ಚುನಾವಣೇಲಿ ಹೇಗೋ ಏನೋ?

ನೆಲ ತಲುಪಿದ ಅಖಿಲೇಶ್ ಹೋರ್ಡಿಂಗ್, ಚುನಾವಣೇಲಿ ಹೇಗೋ ಏನೋ?

ಐದು ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಣೆ ಆದ ಕೂಡಲೇ ನೀತಿ ಸಂಹಿತೆ ಜಾರಿಯಾಗಿದೆ. ಐದು ರಾಜ್ಯಗಳ ಪೈಕಿ ಉತ್ತರಪ್ರದೇಶವೂ ಒಂದು. ಲಖನೌದಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರ ಹೋರ್ಡಿಂಗ್ ತೆಗೆಯುವುದರಲ್ಲಿ ನಿರತನಾಗಿದ್ದ ಕಾರ್ಮಿಕ ಕಂಡುಬಂದಿದ್ದು ಹೀಗೆ.

ಶೋಕದ ಮನೆಗೆ ಹೋಗಿಬಂದ ರವೀನಾ ಟಂಡನ್

ಶೋಕದ ಮನೆಗೆ ಹೋಗಿಬಂದ ರವೀನಾ ಟಂಡನ್

ಟರ್ಕಿಯ ಇಸ್ತಾಂಬುಲ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಮಾಜಿ ಸಂಸದ ಅಖ್ತರ್ ರಿಜ್ವಿ ಅವರ ಮಗ ಅಬಿಸ್ ರಿಜ್ವಿ ಅಂತ್ಯಸಂಸ್ಕಾರ ಮುಂಬೈನಲ್ಲಿ ನಡೆದು, ಅದರಲ್ಲಿ ನಟಿ ರವೀನಾ ಟಂಡನ್ ಮತ್ತು ಆಕೆ ಪತಿ ಅನಿಲ್ ತದಾನಿ ಭಾಗವಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Various national and international events represnt through PTI photos.
Please Wait while comments are loading...