ಬೊಂಬೆಯಂಥ ಶಿಲ್ಪಾಗೆ ಮುಂಬೈನಲ್ಲಿ ಇದೆಂಥ ಮೇಕಪ್!
ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯುಗಾರಂಭವಾಗಿದೆ. ಸೋಮವಾರ ಜನರ ಅಹವಾಲು ಸ್ವೀಕರಿಸುತ್ತಿದ್ದ ಅವರನ್ನು ಕಂಡಾಗ, ಸಂಸಾರಿಯ ಕುಟುಂಬಕ್ಕಿಂತ ಸನ್ಯಾಸಿಗೆ ಬಂಧುಗಳು ಹೆಚ್ಚು ಅನ್ನಿಸಿದ್ದು ಸುಳ್ಳಲ್ಲ. ತಮ್ಮ ಅಧಿಕಾರಾವಧಿಯಲ್ಲಿ ಆದಿತ್ಯನಾಥ್ ಏನೆಲ್ಲ ಬದಲಾವಣೆ ತರಬಹುದು ಎಂಬ ಬಗ್ಗೆ ಕುತೂಹಲವಂತೂ ಇದೆ.
ಇನ್ನು ನಟಿ ದೀಪಿಕಾ ಪಡುಕೋಣೆ ಹೃಷಿಕೇಶದಲ್ಲಿ ಗಂಗಾ ಆರತಿ ಪೂಜೆ ಮಾಡಿದ್ದಾರೆ. ಆಕೆ ಎಲ್ಲೆಲ್ಲಿ ಸುತ್ತಾಡಿದರೇನು ಭಾವನೆಗಳ ಮೂಲ ಬೇರು ಭಾರತದಲ್ಲಿದೆ. ಗಂಗಾ ಮಾತೆಯ ಸಾನ್ನಿಧ್ಯದಲ್ಲಿ ಪೂಜೆ ಮಾಡಿ, ಪುಳಕಿತರಾದರೇನೋ ದೀಪಿಕಾ! ಆ ಮೇಲೆ ಮುಂಬೈನ ಮೇಕಪ್ ಅಕಾಡೆಮಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ಪಾಲ್ಗೊಂಡಿದ್ದರು.[ಲಕ್ಷಾಂತರ ಮಂದಿಯ ತಾಯಿ-ದೇವರಿಗೆ 110, ಸಿದ್ದಗಂಗೆಯಲ್ಲಿ ಸಿದ್ದರಾಮಯ್ಯ]
ಬೊಂಬೆಗೆ ಅಲಂಕಾರ ಮಾಡುತ್ತಿರುವಂತೆ ಕಾಣುವ ಫೋಟೋ ಇಲ್ಲಿದೆ. ಆಕೆ ವಯಸ್ಸು...ಬೇಡ ಬಿಡಿ, ಹೆಣ್ಣುಮಕ್ಕಳ ವಯಸ್ಸು ಕೇಳಬಾರದು ಅನ್ನೋದಿರಲಿ, ಆ ಬಗ್ಗೆ ಮಾತು ಕೂಡ ಆಡಬಾರದು. ಹಳೇ ಪ್ರಕರಣವೊಂದಕ್ಕೆ ಸಂಬಂಧ ಪಟ್ಟ ಹಾಗೆ ಎಂಡಿಎಂಕೆ ಮುಖ್ಯಸ್ಥ ವೈಕೋ ಅವರನ್ನು ಚೆನ್ನೈ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ವಹಿಸಿದೆ.
ಇನ್ನಷ್ಟು ಚಿತ್ರ ಹಾಗೂ ಸುದ್ದಿಯ ಹೂರಣ ನಿಮ್ಮ ಮುಂದಿದೆ.

ಬೆನ್ನ ಮೇಲೆ ನಡಿಗೆ
ಭಕ್ತಿ ಹಾಗೂ ನಂಬಿಕೆಯನ್ನು ಪ್ರಶ್ನಿಸುವುದು, ಗುಮಾನಿ ಪಡೋದು ಬಹಳ ಅಪಾಯಕಾರಿ ಅನ್ನಿಸುತ್ತದೆ. ಈ ಚಿತ್ರವನ್ನೇ ನೋಡಿ, ಗಂಜಾಂನಲ್ಲಿ ಸೋಮವಾರ ದಂಡ ಯಾತ್ರೆ ಸಂದರ್ಭದಲ್ಲಿ ಪುರೋಹಿತರೊಬ್ಬರು ಭಕ್ತರ ಮೇಲೆ ನಡೆದುಹೋದ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ. ಸರಿ-ತಪ್ಪುಗಳನ್ನು ಏನು ಆಲೋಚಿಸುವುದಕ್ಕೆ ಸಾಧ್ಯ?

ದೀಪಿಕಾ ಆರತಿ
ಇಡೀ ಜಗತ್ತನ್ನೇ ಸುತ್ತಿ ಬರುತ್ತಿರುವ ಸಂದರಿ, ನಟಿ ದೀಪಿಕಾ ಪಡುಕೋಣೆ ಹೃಷಿಕೇಶದಲ್ಲಿ ಸೋಮವಾರ ಗಂಗಾ ಆರತಿ ಸಮರ್ಪಿಸಿದರು.

ಗಾಯಾಳು ರೋದನ
ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಮೆಟ್ರೋ ನಿಲ್ದಾಣದಲ್ಲಿ ಆದ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವರ ರೋದನ ಮನ ಕಲುಕುವಂತಿತ್ತು.

ಬೊಂಬೆಗೆ ಮೇಕಪ್
ಮುಂಬೈನಲ್ಲಿ ಮೇಕಪ್ ಅಕಾಡೆಮಿ ಉದ್ಘಾಟನೆ ವೇಳೆ ಮಂಗಳೂರು ಚೆಲುವೆ- ನಟಿ ಶಿಲ್ಪಾ ಶೆಟ್ಟಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಭಂಗಿಯಿದು.

ವೈಕೋ ನ್ಯಾಯಾಂಗ ಬಂಧನ
ಹಳೇ ಪ್ರಕರಣವೊಂದಕ್ಕೆ ಸಂಬಂಧಿಸಿದ ಹಾಗೆ ಎಂಡಿಎಂಕೆ ಮುಖ್ಯಸ್ಥ ವೈಕೋ ಸೋಮವಾರ ಚೆನ್ನೈನ ಕೋರ್ಟ್ ಗೆ ಶರಣಾದ ನಂತರ ಹದಿನೈದು ದಿನಗಳ ನ್ಯಾಯಾಂಗ ಬಂಧನಕ್ಕೆ ಅವರನ್ನು ಒಪ್ಪಿಸಲಾಯಿತು.

ಜನತಾ ದರ್ಬಾರ್
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಖನೌದಲ್ಲಿ ಸೋಮವಾರ ಜನತಾ ದರ್ಬಾರ್ ವೇಳೆ ಅಹವಾಲುಗಳನ್ನು ಆಲಿಸಿದರು.

ಚೆಲುವೆಯ ನೋಟ ಚೆನ್ನ
ಗುವಾಹತಿಯಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಚೆಲುವೆಯೊಬ್ಬಳ ಮಾದಕ ನೋಟ ಬೀರಿ, ಎಲ್ಲರ ಕಣ್ಮನ ಸೆಳೆದ ದೃಶ್ಯವಿದು.












Click it and Unblock the Notifications