ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಎಚ್ ಎಎಲ್ ಗೆ 1 ಲಕ್ಷ ಕೋಟಿಯ ಆರ್ಡರ್ ಕೊಟ್ಟಿದ್ದಕ್ಕೆ ದಾಖಲೆ ತೋರಿಸಿ, ಇಲ್ಲ ರಾಜೀನಾಮೆ ನೀಡಿ'

|
Google Oneindia Kannada News

ನವದೆಹಲಿ, ಜನವರಿ 6: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸಾರ್ವಜನಿಕ ವಲಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಗೆ(ಎಚ್ ಎಎಲ್) 1 ಲಕ್ಷ ಕೋಟಿ ರುಪಾಯಿ ಮೌಲ್ಯದ ಆರ್ಡರ್ ಗಳನ್ನು ನೀಡಿರುವುದರ ಬಗ್ಗೆ ಸಂಸತ್ ಮುಂದೆ ದಾಖಲೆ ಇಡಬೇಕು. ಇಲ್ಲದಿದ್ದರೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಎರಡು ದಿನಗಳ (ಶುಕ್ರವಾರ) ಹಿಂದೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮಾಡಿಕೊಂಡ ಸಮರ್ಥನೆ ಬಗ್ಗೆ ಮಾಧ್ಯಮಗಳ ವರದಿಯನ್ನು ಉದಾಹರಿಸಿರುವ ಅವರು, ಅಂಥ ಯಾವ ಆರ್ಡರ್ ಅನ್ನು ಎಚ್ ಎಎಲ್ ಗೆ ನೀಡಿಲ್ಲ ಎಂದಿದ್ದಾರೆ.

‘Prove order given to HAL or resign’: Rahul Gandhi to defence minister

ಎಚ್‌ಎಎಲ್ ಬಗ್ಗೆ ರಾಹುಲ್ ಗಾಂಧಿ ಮೊಸಳೆ ಕಣ್ಣೀರು: ನಿರ್ಮಲಾ ಸೀತಾರಾಮನ್ಎಚ್‌ಎಎಲ್ ಬಗ್ಗೆ ರಾಹುಲ್ ಗಾಂಧಿ ಮೊಸಳೆ ಕಣ್ಣೀರು: ನಿರ್ಮಲಾ ಸೀತಾರಾಮನ್

ನೀವು ಒಂದು ಸುಳ್ಳು ಹೇಳಿದರೆ ಅದನ್ನು ಮುಚ್ಚುವ ಸಲುವಾಗಿ ಹೆಚ್ಚು ಸುಳ್ಳುಗಳನ್ನು ಹೇಳುತ್ತಾ ಹೋಗಬೇಕಾಗುತ್ತದೆ. ಪ್ರಧಾನಿ ಮೋದಿ ಅವರ ರಫೇಲ್ ಸುಳ್ಳು ಮುಚ್ಚುವ ಪ್ರಯತ್ನದಲ್ಲಿ ರಕ್ಷಣಾ ಸಚಿವೆ ಸಂಸದೆಗೆ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ಎಚ್ ಎಎಲ್ ಗೆ 1 ಲಕ್ಷ ಕೋಟಿ ರುಪಾಯಿ ಸರಕಾರದ ಆರ್ಡರ್ ನೀಡಿದ ದಾಖಲೆಗಳನ್ನು ಸಂಸತ್ ಮುಂದೆ ನಾಳೆ (ಸೋಮವಾರ) ನಿರ್ಮಲಾ ಸೀತಾರಾಮನ್ ಇಡಬೇಕು ಅಥವಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

'ಮೂರು' ಮರೆತ ರಾಹುಲ್ ಗಾಂಧಿ, ಕಾಲೆಳೆದ ಟ್ರೋಲ್ ಹೈಕ್ಳು!'ಮೂರು' ಮರೆತ ರಾಹುಲ್ ಗಾಂಧಿ, ಕಾಲೆಳೆದ ಟ್ರೋಲ್ ಹೈಕ್ಳು!

ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಕೂಡ ಟ್ವೀಟ್ ಮಾಡಿದ್ದು, ಸುಳ್ಳು ಹೇಳಿದ ರಕ್ಷಣಾ ಸಚಿವೆಯ ಬಣ್ಣ ಬಯಲಾಗಿದೆ. ಸರಕಾರದಿಂದ ಒಂದು ಲಕ್ಷ ಕೋಟಿ ರುಪಾಯಿಯ ಆರ್ಡರ್ ಕೊಟ್ಟಿರುವುದಾಗಿ ರಕ್ಷಣಾ ಸಚಿವೆ ಸಮರ್ಥಿಸಿಕೊಳ್ಳುತ್ತಾರೆ. ಆದರೆ ಒಂದು ಪೈಸೆ ಕೂಡ ಬಂದಿಲ್ಲ ಎಂದು ಎಚ್ ಎಎಲ್ ಹೇಳುತ್ತಿದೆ. ಒಂದು ಆರ್ಡರ್ ಗೂ ಸಹಿ ಹಾಕಿಲ್ಲ ಎನ್ನುತ್ತಿದೆ. ಇದೇ ಮೊದಲ ಸಲ ಸಿಬ್ಬಂದಿ ವೇತನ ಪಾವತಿ ಸಾವಿರ ಕೋಟಿ ಸಾಲ ಮಾಡಿದೆ ಎಂದಿದ್ದಾರೆ.

English summary
Congress President Rahul Gandhi on Sunday demanded that Defence Minister Nirmala Sitharaman place documents before Parliament to prove her claim that the Modi government has given Rs 1 lakh crore worth of orders to defence PSU Hindustan Aeronautics Limited or resign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X