Property: ಆಸ್ತಿ ಹಸ್ತಾಂತರ; ವಿಲ್ ನೋಂದಣಿ ವಿಧಾನಗಳು ಹಾಗೂ ಮಹತ್ವ ತಿಳಿಯಿರಿ
Property: ಬಹುತೇಕ ತಂದೆ-ತಾಯಂದಿರು ಕೊನೇವರೆಗೂ ಮಕ್ಕಳ ಬದುಕು ಮುಂದಿನ ದಿನಗಳಲ್ಲಿ ಚೆನ್ನಾಗಿರಲೆಂದೇ ತುಂಬಾ ಶ್ರಮಿಸುತ್ತಿರುತ್ತಾರೆ. ಅಲ್ಲದೆ, ಆಸ್ತಿ, ಮನೆ, ಹಣವನ್ನು ಕೂಡ ಮಾಡಿರುತ್ತಾರೆ. ಅದು ಕೊನೇಗಾಲದಲ್ಲಿ ಯಾರು ತಮ್ಮನ್ನು ಚೆನ್ನಾಗಿ ನೋಡಿಕೊಂಡಿರುತ್ತಾರೆಯೋ ಅಥವಾ ಕಷ್ಟದ ಕಾಲದಲ್ಲಿ ತಮ್ಮ ಜೊತೆ ನಿಂತ ತಮ್ಮಿಷ್ಟದವರ ಹೆಸರಲ್ಲಿ ವಿಲ್ ಬರೆದಿರುವ ಉದಾಹರಣೆಗಳಿವೆ. ಹಾಗಾದ್ರೆ ವಿಲ್ ಮಾಡುವ ವಿಧಾನಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಜೀವನದ ಕೊನೆಯ ಆಶಯಯವನ್ನು ವ್ಯಕ್ತಪಡಿಸುವ, ಮಾಡಿದ ಆಸ್ತಿ ಹಸ್ತಾಂತರಿಸುವ ಕಾನೂನು ಪ್ರಕ್ರಿಯಗೆ ವಿಲ್ ಎಂದು ಕರೆಯುತ್ತಾರೆ. ಆಸ್ತಿ ಹಂಚಿಕೆ, ಆಸ್ತಿ ಉತ್ತರಾಧಿಕಾರ ಹಾಗೂ ಮತ್ತಷ್ಟು ವಿಷಯಗಳ ಬಗ್ಗೆ ಅಂತಿಮ ಇಚ್ಛೆಯ ಅಧಿಕೃತ ದಾಖಲೆಯನ್ನು ರಚಿಸಲು ಸೂಕ್ತ ಅಧಿಕಾರಿಗಳೊಂದಿಗೆ ವಿಲ್ ದಾಖಲಿಸಿರಬೇಕು.

ವಿಲ್ ನೋಂದಣಿ ನಿಮ್ಮ ಆಸ್ತಿ ಹಂಚಿಕೆ ಯೋಜನೆಗಳಿಗೆ ಸೂಕ್ತ ಭದ್ರತೆ ಒದಗಿಸುತ್ತದೆ. ಆಸ್ತಿ ವಿವಾದಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಯಾರಿಗೆ ಆಸ್ತಿ ಕೊಡಲು ಬಯಸುತ್ತೀರೋ ಅವರಿಗೆ ಆಸ್ತಿ ಹಕ್ಕುಪತ್ರ ಹಂಚಿಕೆಯ ವರ್ಗಾವಣೆಯನ್ನು ಸುಲಭಗೊಳಿದುತ್ತದೆ. ವಿಲ್‌ಗಳನ್ನು ನೋಂದಣಿ ಕಾಯಿದೆ, 1908ರ ಅಡಿಯಲ್ಲಿ ಭಾರತದಲ್ಲಿ ನೋಂದಾಯಿಸಬೇಕು.
ನೋಂದಣಿಗೆ ಅರ್ಜಿ ಸಲ್ಲಿಕೆ ಮಾಡಿದಾಗ, ಈ ಕಾಯಿದೆಯು ವಿಲ್‌ಗಳನ್ನು ಸಂಬಂಧಿಸಿದ ನೋಂದಣಾ ಅಧಿಕಾರಿಯಿಂದ ದಾಖಲಿಸಬೇಕು. ಉತ್ತರಾಧಿಕಾರಿಗೆ ವಿಲ್ ಮಾಡಿ ಇಡಲೇಬೇಕೆಂಬ ಕಡ್ಡಾಯ ಕಾನೂನು ಇಲ್ಲದಿದ್ದರೂ, ವಿಲ್ ರಿಜಿಸ್ಟರ್ ಆಗಿಬಿಟ್ಟರೆ ಭವಿಷ್ಯದ ಹಾದಿ ಸುಗಮ ಆಗುತ್ತದೆ. ಇದರಿಂದ ಹಲವು ಪ್ರಯೋಜನ ಕೂಡ ಇವೆ. ಕೌಟುಂಬಿಕ ಪರಂಪರೆಯನ್ನ ರಕ್ಷಣೆ ಮಾಡಲು ಹಾಗೂ ಅನಗತ್ಯ ತೊಂದರೆಗಳಿಲ್ಲದೆ ಉತ್ತರಾಧಿಕಾರಿಗಳು ಆಸ್ತಿಯನ್ನು ಪಡೆಯುವುದನ್ನು ವಿಲ್ ಖಚಿತಪಡಿಸುತ್ತದೆ. ಇದು ಆಸ್ತಿದಾರನ ಮೇಲೆ ನಿರ್ಧರಿತವಾಗಿರುತ್ತದೆ.
ವಿಲ್ ನೋಂದಣಿ ಮಾಡಿಸುವ ವಿಧಾನಗಳು
* ನಿಮ್ಮ ವಿಲ್ ನೋಂದಾಯಿಸಲು ನೀವು ವಾಸಿಸುವ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಉಪ-ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಬೇಕು
* ವಿಲ್ ನೋಂದಣಿ ಪ್ರಕ್ರಿಯೆ ಕೆಳಗಿನ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಕೆ ಮಾಡುವುದನ್ನು ಒಳಗೊಂಡಿದೆ
* ಸಣ್ಣ ಮೊತ್ತದ ನೋಂದಣಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ
ವಿಲ್‌ಗೆ ಬೇಕಾಗುವ ದಾಖಲೆಗಳು
* ವಿಲ್ ಮಾಡಿಸುವ ವ್ಯಕ್ತಿಯ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು. ಕೆಲವು ಕಡೆ ಭಾವಚಿತ್ರಗಳು ಮತ್ತು ಹೆಬ್ಬೆರಳಚ್ಚನ್ನು ಎಲೆಕ್ಟ್ರಾನಿಕ್ ಆಗಿ ಸೆರೆ ಹಿಡಿಯಲಾಗುತ್ತದೆ
* ವಿಲ್ ಮಾಡಿಸುವ ವ್ಯಕ್ತಿ ಮಾನಸಿಕವಾಗಿ ಸದೃಢವಾಗಿದ್ದಾರೆ ಎಂದು ಹಾಗೂ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಪೂರ್ಣ ಸಮರ್ಥರಾಗಿದ್ದಾರೆ ಎಂದು ಪ್ರಮಾಣೀಕರಿಸುವ MBBS/MD ವೈದ್ಯರಿಂದ ಲಿಖಿತ ರೂಪದ ವೈದ್ಯಕೀಯ ಪ್ರಮಾಣಪತ್ರ ಬೇಕು.
* ವಿಲ್ ಮಾಡಿಸುವ ವ್ಯಕ್ತಿ ಸಹಿ ಮಾಡಿದ ಮೂಲ ವಿಲ್.
* ಎರಡು ಸಾಕ್ಷಿ ನೀಡುವವರು ಸಹಿ ಮಾಡಲು ಉಪ ರಿಜಿಸ್ಟ್ರಾರ್ ಕಚೇರಿಯಲ್ಲಿ ಹಾಜರಿರಬೇಕು.
* ಅವರು ತಮ್ಮ ಫೋಟೋ ಪುರಾವೆಯನ್ನು ಸಹ ಒದಗಿಸಬೇಕು.
* ವಿಲ್ ಮಾಡಿಸುವ ವ್ಯಕ್ತಿ ಮತ್ತು ಎರಡು ಸಾಕ್ಷಿಗಳ ಗುರುತಿನ ಪುರಾವೆ ಒದಗಿಸಬೇಕು.
* ವಿಳಾಸದ ದಾಖಲೆ ನೀಡಬೇಕು.
* ಎರಡು ಸಾಕ್ಷಿಗಳ ಪಾನ್ ಕಾರ್ಡ್ ತರಬೇಕಾಗುತ್ತದೆ
* ನೋಂದಣಿ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದ ಬಳಿಕ ಉಪ ರಿಜಿಸ್ಟ್ರಾರ್ ಅವರಿಂದ ನೋಂದಣಿ ಪ್ರಮಾಣಪತ್ರ ಪಡೆಯಬಹುದು.
* ಈ ಪ್ರಮಾಣ ಪತ್ರವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು.
* ಉಲ್ಲೇಖಕ್ಕಾಗಿ ಕುಟುಂಬದ ಸದಸ್ಯರಿಗೆ ಮತ್ತು ನೇಮಕಗೊಂಡ ಕಾರ್ಯನಿರ್ವಾಹಕರಿಗೆ ಈ ವಿಲ್ ಪ್ರತಿಗಳನ್ನು ನೀಡಿದರೆ ಉತ್ತಮ.
ವಿಲ್ ಪ್ರಯೋಜನೆಗಳೇನು?
ಭಾರತದಲ್ಲಿ ವಿಲ್ ನೋಂದಣಿಯಿಂದ ಹಲವು ಪ್ರಯೋಜನಗಳಿದ್ದು, ಜೀವನಮಾನ ಪೂರ್ತಿ ಕಷ್ಟಪಟ್ಟು ಒಗ್ಗೂಡಿಸಿದ ಆಸ್ತಿ ತಮ್ಮ ಕಾಲಾನಂತರ ಬೇರೆಯವರ ಪಾಲಾಗಾದೇ ಸೂಕ್ತರ ಪಾಲಾಗುವುದನ್ನು ಈ ವಿಲ್ ಖಚಿತಪಡಿಸುತ್ತದೆ.
* ವಿವಾದಗಳಿಗೆ ಬ್ರೇಕ್: ನೋಂದಾಯಿತ ವಿಲ್ ಫಲಾನುಭವಿಗಳ ನಡುವೆ ವಿವಾದಗಳನ್ನು ಸೃಷ್ಟಿಯಾಗದಂತೆ ನೋಡಿಕೊಳ್ಳುತ್ತದೆ. ನಿಮ್ಮ ಉದ್ದೇಶಗಳ ಸ್ಪಷ್ಟ ಮತ್ತು ಕಾನೂನುಬದ್ಧ ದಾಖಲೆಯನ್ನು ಒದಗಿಸುತ್ತದೆ. ವಿಲ್ ಸ್ಪಷ್ಟವಾಗಿದ್ದರೆ ಅದರ ಮೇಲೆ ಕಾನೂನು ಹೋರಾಟ ತುಂಬಾ ಕಷ್ಟ ಆಗುತ್ತದೆ.
* ಆಸ್ತಿ ಹಸ್ತಾಂತರ ಸುಲಭ: ಪ್ರೊಬೇಟ್ ಎಂಬುದು ನ್ಯಾಯಾಲಯದಲ್ಲಿ ವಿಲ್ ಅನ್ನು ಮಾನ್ಯಗೊಳಿಸುವ ಕಾನೂನು ಪ್ರಕ್ರಿಯೆ. ನೋಂದಾಯಿತ ವಿಲ್ ಸಾಮಾನ್ಯವಾಗಿ ನೋಂದಾಯಿಸದ ವಿಲ್‌ಗೆ ಹೋಲಿಕೆ ಮಾಡಿದರೆ ಬೇಗ ಹಾಗೂ ಸುಗಮವಾದ ಪ್ರೊಬೇಟ್ ಪ್ರಕ್ರಿಯೆಯನ್ನು ಹೊಂದಿರುತ್ತದೆ. ಉತ್ತರಾಧಿಕಾರಿಗೆ ಆಸ್ತಿ ಹಸ್ತಾಂತರಕ್ಕೆ ತೆಗದುಕೊಳ್ಳುವ ಸಮಯ ಹಾಗೂ ಕಾನೂನು ವೆಚ್ಚಗಳನ್ನು ಉಳಿಸುತ್ತದೆ.
* ಆಸ್ತಿ ರಕ್ಷಣೆ: ವಿಲ್ ನೋಂದಣಿಯು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನ ರಕ್ಷಿಸುತ್ತದೆ. ಅವನ್ನು ನಿಮ್ಮ ಇಚ್ಛೆಯಂತೆಯೇ ಹಂಚಲಾಗುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ಆಸ್ತಿ ಪ್ರಮಾಣ ಗಣನೀಯವಾಗಿದ್ದರೆ ಅಥವಾ ಇರುವ ಆಸ್ತಿ ಬಗ್ಗೆ ಗೊಂದಲಗಳು ಇದ್ದರೆ ಇಂತಹ ರಕ್ಷಣೆ ನಿರ್ಣಾಯಕ ಪಾತ್ರ ವಹಿಸಿದೆ.
* ದಾಖಲೆಗಳ ಸಂರಕ್ಷಣೆ: ನೋಂದಣಿಯು ವಿಲ್‌ನ ಅಧಿಕೃತ ದಾಖಲೆಯನ್ನು ರಚಿಸುತ್ತದೆ. ನಂತರ ರಿಜಿಸ್ಟ್ರಾರ್‌ನೊಂದಿಗೆ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ಇದು ವಿಲ್ ಕಳೆದು ಹೋಗುವ, ನಾಶವಾಗುವ ಅಥವಾ ಅದು ಮಿಸ್ ಯೂಸ್ ಆಗುವ ಅಪಾಯವನ್ನು ತಡೆಯುತ್ತದೆ.
* ಆಸ್ತಿ ವರ್ಗಾವಣೆ ಸುಲಭ: ನೋಂದಾಯಿತ ವಿಲ್ ನಿಮ್ಮ ಕಾನೂನು ಉತ್ತರಾಧಿಕಾರಿಗಳು ಮತ್ತು ಫಲಾನುಭವಿಗಳಿಗೆ ಹೆಚ್ಚು ಲಭ್ಯ. ದೀರ್ಘ ಕಾನೂನು ಪ್ರಕ್ರಿಯೆಗೆ ಒಳಗಾಗದೇ ಅಧಿಕಾರಿಗಳಿಂದ ವಿಲ್‌ನ ಪ್ರಮಾಣೀಕೃತ ಪ್ರತಿ ಪಡೆದು, ಆಸ್ತಿಯನ್ನು ತಮ್ಮದಾಗಿಸಿಕೊಳ್ಳಬಹುದು.
ನಿಮ್ಮ ವಿಲ್ ಕಾನೂನುಬದ್ಧವಾಗಿ ನೋಂದಾಯಿಸಲ್ಪಟ್ಟಿದೆ ಎಂದು ತಿಳಿದಿರುವುದು ನಿಮಗೆ ಮತ್ತು ನಿಮ್ಮ ಕುಟುಂಬದ ಸದಸ್ಯರಿಗೆ ಮನಃಶಾಂತಿಯನ್ನು ನೀಡುತ್ತದೆ. ಅಲ್ಲದೆ, ಆಸ್ತಿಯನ್ನು ನಿಮ್ಮ ಇಚ್ಛೆಗಳ ಪ್ರಕಾರ ನಿರ್ವಹಿಸಲಾಗುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ಒಟ್ಟಿನಲ್ಲಿ ಇದರಿಂದ ಯಾವುದೇ ಕಿರಿಕಿರಿಯೂ ಸಹ ಇರುವುದಿಲ್ಲ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ವಿಲ್ ಬರೆಯುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ಯಾಕೆಂದ್ರೆ ಅವರಿಷ್ಟದವರಿಗೆ ಹಾಗೂ ಕಷ್ಟಕಾಲದಲ್ಲಿ ನಿಂತವರ ಹೆಸರಲ್ಲಿ ವಿಲ್ ಬರೆದಿರುವ ಉದಾಹರಣೆಗಳಿವೆ. ಇಲ್ಲದಿದ್ದರೆ, ಆಸ್ತಿ ಕಂಡವರ ಪಾಲು ಆಗಿಬಿಡುತ್ತದೆ. ಆದ್ದರಿಂದ ಈ ವಿಲ್ ನಿಯಮ ತುಂಬಾ ಮುಖ್ಯವಾಗಿದೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications