ಕೇರಳ ಅತ್ಯಾಚಾರ ಸಂತ್ರಸ್ತೆ ಆರೋಪದ ತನಿಖೆಗೆ ಆದೇಶ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ನವೆಂಬರ್ 4: ಕೇರಳದಲ್ಲಿ ಪೊಲೀಸರ ಅಮಾನವೀಯ ವರ್ತನೆ ಬಗ್ಗೆ ಅತ್ಯಾಚಾರ ಸಂತ್ರಸ್ತೆಯೊಬ್ಬರು ಮಾಡಿದ್ದ ಅರೋಪದ ಬಗ್ಗೆ ತನಿಖೆ ನಡೆಸುವುದಕ್ಕೆ ಆದೇಶಿಸಲಾಗಿದೆ.ದೂರು ನೀಡಲು ಹೋದ ಸಂತ್ರಸ್ತೆಗೆ ಅವಮಾನ ಆಗುವಂಥ ಹಾಗೂ ಅಸಹ್ಯ ಎನಿಸುವಂಥ ಪ್ರಶ್ನೆಗಳನ್ನು ಪೊಲೀಸರು ಕೇಳಿದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಅಲ್ಲಿನ ಡಿಜಿಪಿ ಆದೇಶ ನೀಡಿದ್ದಾರೆ.

ಅತ್ಯಾಚಾರದ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದಾಗ, ಯಾವ ಅತ್ಯಾಚಾರ ಆರೋಪಿಯಿಂದ ಹೆಚ್ಚಿನ ಸಂತೋಷ ದೊರೆಯಿತು ಎಂದು ಪೊಲೀಸರು ಕೇಳಿದರು ಎಂದು ಸಂತ್ರಸ್ತೆ ಆರೋಪಿಸಿದ್ದರು. ಈ ಅವಮಾನದಿಂದ ನೊಂದ ಆಕೆ, ತನ್ನ ದೂರನ್ನೇ ಹಿಂಪಡೆದಿದ್ದರು. ಆ ಮಹಿಳೆಯ ಗಂಡನ ಸ್ನೇಹಿತರೇ ಅತ್ಯಾಚಾರ ಎಸಗಿದ್ದರು.['ಅತ್ಯಾಚಾರಿಗಳ ಪೈಕಿ ಹೆಚ್ಚು ಸಂತೋಷ ಕೊಟ್ಟವರು ಯಾರು?']

rape victim

ಪೊಲೀಸರ ಪ್ರಶ್ನೆಗಳು, ಆ ಅವಮಾನ ಸಹಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಮೂವತ್ತೆರಡು ವರ್ಷದ ಮಹಿಳೆ ತಿರುವನಂತಪುರದಲ್ಲಿ ಮಾಧ್ಯಮದವರ ಎದುರು ನೋವು ತೋಡಿಕೊಂಡಿದ್ದರು. ಈ ವಿಚಾರವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದವರು ಅಲ್ಲಿನ ಕಂಠದಾನ ಕಲಾವಿದೆ ಭಾಗ್ಯಲಕ್ಷ್ಮಿ.

ಭಾಗ್ಯಲಕ್ಷ್ಮಿ ಅವರ ಬಳಿ ಸಂತ್ರಸ್ತೆಯೇ ತಾನು ಎದುರಿಸಿದ ಸನ್ನಿವೇಶ ವಿವರಿಸಿದ್ದರು. ಕೇರಳದಲ್ಲಿ ಅತ್ಯಾಚಾರಕ್ಕೀಡಾಗಿ ಆ ನಂತರ ಸಾವನ್ನಪ್ಪಿದ ಜೀಶಾ ಹಾಗೂ ಸೌಮ್ಯಾ ಬಗ್ಗೆ ಪ್ರಸ್ತಾಪಿಸಿದ್ದ ಲಕ್ಷ್ಮಿ, ಒಂದು ವೇಳೆ ಅವರು ಬದುಕಿದ್ದರೆ ಪೊಲೀಸರಿಂದ ಹೇಗೆಲ್ಲ ದೌರ್ಜನ್ಯ ನಡೀತ್ತಿತ್ತೋ ಎಂದು ಬರೆದಿದ್ದರು.[ಮೋನಿಕಾ ಹತ್ಯೆಗೆ ಮುನ್ನ ಅಶ್ಲೀಲ ವಿಡಿಯೋ ತೋರಿಸಿದ್ದ ರಾಜ್]

ತ್ರಿಸ್ಸೂರ್ ನ ತಮ್ಮ ಮನೆಯಲ್ಲಿ ಒಬ್ಬರೇ ಇದ್ದಾಗ ಬಂದ ಆಕೆಯ ಗಂಡನ ನಾಲ್ವರು ಸ್ನೇಹಿತರು, ಸುಳ್ಳು ಹೇಳಿ ಎಲ್ಲಿಗೋ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಎರಡು ವರ್ಷದ ನಂತರ ಆ ವಿಚಾರವನ್ನು ಆಕೆ ಹೇಳಿಕೊಂಡಾಗ ದೂರು ದಾಖಲಿಸುವಂತೆ ಆ ಮಹಿಳೆಯ ಪತಿ ತಿಳಿಸಿದ್ದರು. ದೂರು ದಾಖಲಿಸಲು ತೆರಳಿದಾಗ ಪೊಲೀಸರು ಅಮಾನವೀಯವಾಗಿ ವರ್ತಿಸಿದರು ಎಂದು ಮಹಿಳೆ ದೂರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Kerala police has ordered a probe into the alleged insensitive behaviour by the police while dealing with a rape victim. The Director General of Police ordered that a probe be held into the allegations made by the victim who accused the police of humiliating her and insensitive behaviour.
Please Wait while comments are loading...