ಸನ್ನಿಲಿಯೋನ್ ಪದಚ್ಯುತಿ, ಪ್ರಿಯಾ ಪ್ರಕಾಶ್ ಗೆ ಪಟ್ಟಾಭಿಷೇಕ!

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 13: ಪ್ರೇಮಿಗಳ ದಿನಕ್ಕೂ ಮುನ್ನ ಸರ್ಚ್ ಇಂಜಿನ್ ಗೂಗಲ್ ನ ಹುಡುಕಾಟದಲ್ಲಿ ಮಾಜಿ ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಳನ್ನು ಕೆಳಕ್ಕೆ ದಬ್ಬಿ ಮಲ್ಲು ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್ ಅಗ್ರಸ್ಥಾನಕ್ಕೇರಿರುವ ಸುದ್ದಿ ಬಂದಿದೆ.

ಹುಬ್ಬೇರಿಸಿ, ಕಣ್ ಹೊಡೆದು ಎಲ್ಲರ ನಿದ್ದೆಗೆಡಿಸಿರುವ ಪ್ರಿಯಾ ವಾರಿಯರ್ ಈಗ ಜಾಗತಿಕ ಮಟ್ಟದಲ್ಲಿ ಸುದ್ದಿಯಲ್ಲಿದ್ದಾಳೆ.

ಕಣ್ ಮಿಟುಕು ಸುಂದರಿ ಪ್ರಿಯಾ ಬರೆದಳು ಹೊಸ ದಾಖಲೆ

ಸಾಮಾಜಿಕ ಜಾಲ ತಾಣಗಳಲ್ಲಿ ಜನಪ್ರಿಯತೆ ಗಳಿಸಿ ಟ್ರೆಂಡಿಂಗ್ ಆಗಿರುವ ಪ್ರಿಯಾ ಈಗ ಗೂಗಲ್ ಟ್ರೆಂಡಿಂಗ್ ನಲ್ಲೂ ಮುಂದಿದ್ದಾಳೆ.

Priya Prakash surpasses Sunny Leone as most searched actress

ಗ್ಯಾಲರಿ: ಕಣ್ ಮಿಟುಕು ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್

ಅದರಲ್ಲೂ ವ್ಯಾಲೆಂಟೇನ್ ದಿನಕ್ಕೂ ಮುನ್ನ ಹುಡುಗರು ಹುಡುಕುವ ಸರ್ಚ್ ಪದಗಳ ಪೈಕಿ ಸದಾ ಕಾಲ ಟಾಪ್ ಸ್ಥಾನದಲ್ಲಿರುತ್ತಿದ್ದ ಸನ್ನಿ ಲಿಯೋನ್ ಳನ್ನು ಪ್ರಿಯಾ ಹಿಂದಿಕ್ಕಿದ್ದಾಳೆ.

Priya Prakash surpasses Sunny Leone as most searched actress

ಜನಪ್ರಿಯ ಸೆಲೆಬ್ರಿಟಿಗಳಾದ ಸನ್ನಿ ಲಿಯೋನ್, ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್ ಹಾಗೂ ಅನುಷ್ಕಾ ಶರ್ಮ ಅವರ ಜತೆ ಪ್ರಿಯಾ ಪ್ರಕಾಶ್ ವಾರಿಯರ್ ಹೋಲಿಸಿ ನೋಡಿದರೆ ಎಲ್ಲರಿಗಿಂತ ಪ್ರಿಯಾ ಬಗ್ಗೆ ಹುಡುಕಾಟ ಅಧಿಕವಾಗಿದೆ ಎಂಬ ವರದಿ ಬಂದಿದೆ.

ತ್ರಿಶೂರಿನ 18 ವರ್ಷ ವಯಸ್ಸಿನ ಕಾಲೇಜು ಹುಡುಗಿ ಪ್ರಿಯಾ ಹಾವಭಾವ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಒರು ಅದಾರ್ ಲವ್ ಚಿತ್ರದ ಮಾಣಿಕ್ಯ ಮಲರಾಯಾ ಪೂವಿ ಹಾಡಿನ ದೃಶ್ಯದ ತುಣುಕು ಇನ್ಸ್ಟಾಗ್ರಾಮ್ ನಲ್ಲಿ 11 ಲಕ್ಷ ಬಾರಿ ವೀಕ್ಷಿಸಲ್ಪಟ್ಟಿದೆ. ಆಕೆ ಹಿಂಬಾಲಕರು 2.2 ಮಿಲಿಯನ್ ದಾಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The new internet sensation,Priya Prakash, whose video recently went viral on social media, has dethroned Sunny as the most-searched celebrity on search engine Google. The Malayalam actress became a celebrity overnight after a short clip from the song 'Manikya Malaraya Poovi' of upcoming Malayalam movie 'Oru Adaar Love'

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ