ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿತನ ಮೂಲಭೂತ ಹಕ್ಕಲ್ಲ – ಸುಪ್ರಿಂ ಮಹತ್ವದ ತೀರ್ಪು : 9 ಅಂಶಗಳು

By Sachhidananda Acharya
|
Google Oneindia Kannada News

ನವದೆಹಲಿ, ಜುಲೈ 19: 'ಖಾಸಗಿ ಹಕ್ಕು ಪರಿಪೂರ್ಣವಲ್ಲ, ಇದರಡಿಯಲ್ಲಿ ಎಲ್ಲವನ್ನೂ ಸೇರಿಸಲು ಸಾಧ್ಯವಿಲ್ಲ' ಎಂದು ಸುಪ್ರಿಂ ಕೋರ್ಟಿನ 9 ಸದಸ್ಯರ ನ್ಯಾಯಪೀಠ ಹೇಳಿದೆ. ಈ ಮೂಲಕ 55 ವರ್ಷಗಳ ನಂತರ 'ಖಾಸಗಿತನ ಮೂಲಭೂತ ಹಕ್ಕಲ್ಲ' ಎಂದು ಸುಪ್ರಿಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಆಧಾರ್ ಕಾರ್ಡ್ ಭಾರತೀಯರಿಗೆ ಕಡ್ಡಾಯ ಮಾಡುವ ತೀರ್ಮಾನವನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಸುಪ್ರಿಂ ಕೋರ್ಟಿನ ಈ ತೀರ್ಮಾನದೊಂದಿಗೆ ಅರ್ಜಿದಾರರಿಗೆ ಹಿನ್ನಡೆಯಾಗಿದೆ ಮತ್ತು ಆಧಾರ್ ಕಾರ್ಡ್ ಕಡ್ಡಾಯ ಮಾಡಲು ಇದ್ದ ಅಡ್ಡಿ ನಿವಾರಣೆಯಾಗಿದೆ.

Privacy is not a basic right for citizens said Supreme Court

1. ಇಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯಮ್, ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕು ನೈಸರ್ಗಿಕ ಹಕ್ಕು. "ಖಾಸಗಿತನ ಎನ್ನುವುದು ಸ್ವಾತಂತ್ರ್ಯ ಮತ್ತು ಗೌರವ ಎರಡನ್ನೂ ಒಳಗೊಳ್ಳುತ್ತದೆ. ಇದು ಸಂವಿಧಾನ ಹೃದಯ ಮತ್ತು ಆಶಯ," ಎಂದು ವಾದಿಸಿದರು.

2. ಇದಕ್ಕೆ ಉತ್ತರ ನೀಡಿದ ಕೇಂದ್ರ ಸರಕಾರ, ಖಾಸಗಿತನದ ಹಕ್ಕು ಸಂವಿಧಾನದಲ್ಲಿ ಇಲ್ಲ. ಮತ್ತು ಜೀವಿಸುವ ಹಕ್ಕಿಗೂ ಖಾಸಗಿತನಕ್ಕೂ ಸಂಬಂಧವಿಲ್ಲ ಎಂದು ವಾದಿಸಿತು.

3. ನಿನ್ನೆಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಜೆ ಚೆಲಮೇಶ್ವರ್, "ಪತ್ರಿಕಾ ಸ್ವಾತಂತ್ರ್ಯ ಕೂಡಾ ಸಂವಿಧಾನದಲ್ಲಿರಲಿಲ್ಲ. ಹೀಗಿದ್ದೂ ನ್ಯಾಯಾಲಯ ಅಭಿವ್ಯಕ್ತಿ ಸ್ವಾತಂತ್ರ್ಯದಡಿಯಲ್ಲಿ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಸೇರಿಸಿದೆ," ಎಂದು ಕೇಂದ್ರಕ್ಕೆ ಮರು ಪ್ರಶ್ನೆ ಎಸೆದಿದ್ದರು.

4. ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದ ಸಿಪಿಎಂನ ಸೀತಾರಾಮ್ ಯೆಚೂರಿ, "ನಮ್ಮ ಸರಕಾರ ಹೇಗಿದೆ ಎಂದರೆ ಟಾಪ್ ಸುಸ್ತಿದಾರರ ಹೆಸರನ್ನು ಖಾಸಗಿತನ ಎಂದು ಹೇಳಿ ಬಹಿರಂಗಪಡಿಸುವುದಿಲ್ಲ. ಆದರೆ ಸಾಮಾನ್ಯ ಜನರಿಗೆ ಖಾಸಗಿತನವಿಲ್ಲ. ಸಾಮಾನ್ಯ ಜನರ ಖಾಸಗಿತನದ ಹಕ್ಕನ್ನು ಯಾವುದೇ ಸರಕಾರ ಮೊಟಕುಗೊಳಿಸಲು ಸಾಧ್ಯವಿಲ್ಲ. ಪ್ರತಿ ಭಾರತೀಯರ ಗೌರವವೂ ಮುಖ್ಯ," ಎಂದಿದ್ದರು.

5. ಈ ಹಿಂದೆ 1954ರಲ್ಲಿ 8 ನ್ಯಾಯಮೂರ್ತಿಗಳ ಪೀಠ ಹಾಗೂ 1962ರಲ್ಲಿ 6 ನ್ಯಾಯಮೂರ್ತಿಗಳ ಪೀಠ ಖಾಸಗಿತನದ ಹಕ್ಕು ಎಂಬುದೇ ಇಲ್ಲ ಎಂದು ಹೇಳಿತ್ತು. ಇದು ಸರಿಯೋ ತಪ್ಪೋ ಎಂಬುದನ್ನು 9 ನ್ಯಾಯಮೂರ್ತಿಗಳ ಪೀಠ ನಿರ್ಧರಿಸಬೇಕು ಎಂದು ಸುಪ್ರಿಂ ಕೋರ್ಟ್ ಹೇಳಿತ್ತು. ಅದರಂತೆ ಇಂದು ಸುಪ್ರಿಂ ಕೋರ್ಟ್ ತನ್ನ ತೀರ್ಪು ಹೊರಹಾಕಿದೆ.

6. ಸುಪ್ರಿಂ ಕೋರ್ಟಿಗೆ ಅರ್ಜಿ ಸಲ್ಲಿಸಿದವರೆಲ್ಲಾ ಖಾಸಗಿತನ ಮೂಲಭೂತ ಹಕ್ಕು ಹೌದೋ ಎಂಬುದನ್ನು ಪ್ರಶ್ನಿಸಿದ್ದರು. ಒಂದೊಮ್ಮೆ ಹೌದು ಎಂದಾದರೆ ಮಾತ್ರ ಆಧಾರ್ ಕಡ್ಡಾಯವನ್ನು ಪ್ರಶ್ನಿಸಲು ಸಾಧ್ಯವಾಗುತ್ತಿತ್ತು.

7.ಕಣ್ಣಿನ ಸ್ಕ್ಯಾನ್ ಮತ್ತು ಬೆರಳಚ್ಚುಗಳನ್ನು ಸರಕಾರವೊಂದು ಪಡೆದುಕೊಳ್ಳುವುದು ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. ಈ ಸಂಬಂಧ 2015ರಲ್ಲಿ ವಾದ ಮಂಡಿಸಿದ್ದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಭಾರತೀಯರಿಗೆ ಖಾಸಗಿತನ ಎಂಬ ಮೂಲಭೂತ ಹಕ್ಕೇ ಇಲ್ಲ ಎಂದು ವಾದಿಸಿದ್ದರು.

8. ಈ ಹಿಂದೆ ಸುಪ್ರಿಂ ಕೋರ್ಟ್ ಜೀವಿಸುವ ಹಕ್ಕನ್ನು ಶುದ್ಧವಾದ ಗಾಳಿ ಸೇವಿಸುವ, ನಿದ್ರಿಸುವ ಹಕ್ಕಿಗೂ ವಿಸ್ತರಣೆ ಮಾಡಿತ್ತು.
9. ಒಂದೊಮ್ಮೆ ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿದ್ದಲ್ಲಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಎಲ್ಲಾ ದೂರುಗಳೂ ಈ ಹಿಂದಿನ ಮೂರು ಅಥವಾ ಐದು ಸದಸ್ಯರ ನ್ಯಾಯಪೀಠಕ್ಕ ವರ್ಗಾವಣೆಯಾಗುತ್ತಿತ್ತು.

English summary
After the long judicial battle nine-judge bench of the Supreme Court decided that privacy is not a basic right for citizens. The right to privacy is not absolute and cannot be catalogued as it includes everything Supreme Court bench said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X