ಕೊರೊನಾ ವೈರಸ್ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್

ನವದೆಹಲಿ, ಮಾರ್ಚ್ 3: ಕೊರೊನಾ ವೈರಸ್ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಯಾರೂ ಕೂಡ ಕೊರೊನಾ ವೈರಸ್ (ಕೊವಿಡ್ 19)ಗೆ ಭಯ ಪಡಬೇಕಿಲ್ಲ. ಧೈರ್ಯವಾಗಿರಿ ಎಂದು ನಾಡಿನ ಜನತೆಗೆ ಸಾಮಾಧಾನ ಹೇಳಿದ್ದಾರೆ.

ಹಾಗೆಯೇ ಕೊರೊನಾ ವೈರಸ್‌ನಿಂದ ದೂರವಿರುವುದು ಹೇಗೆ ಎನ್ನುವ ಕೆಲವು ಟಿಪ್ಸ್ ಗಳನ್ನು ಕೂಡ ನೀಡಿದ್ದಾರೆ. ನೀವು ಕೊರೊನಾದಿಂದ ದೂರವಿರಬೇಕಾದರೆ ಪದೇ ಪದೇ ನಿಮ್ಮ ಕೈಗಳನ್ನು ತೊಳೆದುಕೊಳ್ಳುತ್ತಿರುಬೇಕು.

Modi

ಕೆಮ್ಮು, ಕಫ, ಶೀತ, ಜ್ವರ ಬಂದವರಿಂದ ದೂರವಿರಬೇಕು. ಹಾಗೆಯೇ ಪದೇ ಪದೇ ನಿಮ್ಮ ಕಣ್ಣು , ಮೂಗು ಹಾಗೂ ಬಾಯಿಯನ್ನು ಮುಟ್ಟಿಕೊಳ್ಳಬಾರದು ಎಂದು ಹೇಳಿದ್ದಾರೆ.

ಕೊರೊನಾ ವೈರಸ್ ಕುರಿತು ದೇಶದಲ್ಲಿ ಎಚ್ಚರವಹಿಸಲಾಗಿದೆ. ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆ, ಸಚಿವರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಬೇರೆ ದೇಶಗಳಿಂದ ಭಾರತಕ್ಕೆ ಬರುವವರ ತಪಾಸಣೆಯೂ ನಡೆಯುತ್ತಿದೆ. ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಈಗಾಗಲೇ ತೆಲಂಗಾಣ, ರಾಜಸ್ಥಾನ, ದೆಹಲಿಯಲ್ಲಿ ತಲಾ ಒಂದೊಂದು ಪ್ರಕರಣ ದೃಢಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+