ಬಿಹಾರದಲ್ಲಿ ಫಿರ್ ಏಕ್ ಬಾರ್ ಎನ್‌ಡಿಎ ಸರ್ಕಾರ್ ಎಂದ ಪ್ರಧಾನಿ ನರೇಂದ್ರ ಮೋದಿ!
ಬಿಹಾರದಲ್ಲಿ ಮೊದಲ ಹಂತದ ವಿಧಾನಸಭೆ ಚುನಾವಣೆ ಮುಕ್ತಾಯವಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ಮುಂದುವರಿಸಿದ್ದಾರೆ. ಬಿಹಾರದಲ್ಲಿ ಗುರುವಾರ ಮೊದಲ ಹಂತದ ಮತದಾನ ನಡೆದಿದ್ದು. ದಾಖಲೆಯ ಮತದಾನವಾಗಿದೆ. ಮೊದಲ ಹಂತದಲ್ಲಿ ಆಗಿರುವ ದಾಖಲೆಯ ಮತದಾನವು, ಜನರು ಎನ್‌ಡಿಎ ಸರ್ಕಾರವನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಉತ್ಸುಕರಾಗಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಬಿಹಾರದ ಜನತೆ ಪ್ರತಿಪಕ್ಷಗಳ "ಸುಳ್ಳುಗಳ ಪ್ಯಾಕೇಜ್" ಅನ್ನು ತಿರಸ್ಕರಿಸಿದ್ದಾರೆ. ಗುರುವಾರ ನವೆಂಬರ್ 06ರಂದು ಮೊದಲ ಹಂತದಲ್ಲಿ ಮತದಾನವಾದ 121 ಸ್ಥಾನಗಳಲ್ಲಿ 64.66% ರಷ್ಟು ಮತದಾನದ ದಾಖಲೆ ಸೃಷ್ಟಿಯಾಗಿದೆ. ಇದು ರಾಜ್ಯದ ಇತಿಹಾಸದಲ್ಲಿಯೇ ಅತಿ ಹೆಚ್ಚು. ಬಿಹಾರವು ಇದುವರೆಗಿನ ಅತ್ಯಧಿಕ ಮತದಾನಕ್ಕೆ ಸಾಕ್ಷಿಯಾಗಿದೆ. ಮೊದಲ ಹಂತದಲ್ಲಿ ಸುಮಾರು 65 ಪ್ರತಿಶತದಷ್ಟು ಮತದಾನ ದಾಖಲಾಗಿದೆ ಎಂದು ಪ್ರಧಾನಿ ನರೇಂದ್ರ ಅವರು ಹೇಳಿದ್ದಾರೆ. ಬಿಹಾರದ ಔರಂಗಾಬಾದ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಅವರು ಮಾತನಾಡಿದ್ದು, ದಾಖಲೆಯ ಮತದಾನವು ಬಿಹಾರದ ಜನರು ಎನ್‌ಡಿಎ ಸರ್ಕಾರವನ್ನು ಮರಳಿ ಅಧಿಕಾರಕ್ಕೆ ತರುವುದಕ್ಕೆ ಉತ್ಸುಕರಾಗಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ ಎಂದಿದ್ದಾರೆ.

ಬಿಹಾರದ ಚುನಾವಣೆ ರ‍್ಯಾಲಿಯಲ್ಲಿ ವಿರೋಧ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಹರಿಹಾಯ್ದಿದ್ದು, ಜನರು ಯಾವುದೇ ಬೆಲೆ ತೆತ್ತಾದರೂ ಸರಿ ಇನ್ನೊಂದು ಬಾರಿ ಜಂಗಲ್ ರಾಜನ ಆಡಳಿತ ಬೇಡ ಎಂದು ಬಯಸಿರುವುದು ನೆನ್ನೆಯ ಮತದಾನದಲ್ಲಿ ಸಾಬೀತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವೂ ಸಹ (ಆರ್‌ಜೆಡಿ) ಭರವಸೆಗಳಲ್ಲಿ ನಂಬಿಕೆ ಇರಿಸಿದಂತೆ ಇಲ್ಲ. ಕಾಂಗ್ರೆಸ್ - ಆರ್‌ಜೆಡಿಯ ಪ್ರಣಾಳಿಕೆಯ ಬಗ್ಗೆ ಮಾತನಾಡುವುದೇ ಇಲ್ಲ. ಬಿಹಾರ ಆರ್‌ಜೆಡಿಯ ಸುಳ್ಳಿನ ಪ್ಯಾಕೇಜ್ ಅನ್ನು ತಿರಸ್ಕರಿಸಿದೆ. ಬಿಹಾರದ ಮತದಾರರು ನರೇಂದ್ರ-ನಿತೀಶ್ ಅವರ ಟ್ರ್ಯಾಕ್ ರೆಕಾರ್ಡ್‌ನಲ್ಲಿ ನಂಬಿಕೆ ಇರಿಸಿದ್ದಾರೆ. ಮೊದಲ ಹಂತದ ಮತದಾನ "ಫಿರ್ ಏಕ್ ಬಾರ್, ಎನ್‌ಡಿಎ ಸರ್ಕಾರ್" / ಇನ್ನೊಮ್ಮೆ ಎನ್‌ಡಿಎ ಸರ್ಕಾರ ರಚನೆ ಆಗುವುದು ಖಚಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಬಿಹಾರದಲ್ಲಿ ಮೊದಲ ಹಂತದ ಮತದಾನವು ಹೆಚ್ಚಾಗಿ ಶಾಂತಿಯುತವಾಗಿ ನಡೆದಿದೆ. ಇದು ಉತ್ತಮ ಆಡಳಿತ ಮತ್ತು ಜಂಗಲ್ ರಾಜ್ ನಡುವಿನ ಪ್ರಮುಖ ವ್ಯತ್ಯಾಸವಾಗಿದೆ ಎಂದಿದ್ದಾರೆ. ಮುಂದುವರಿದು ಬಿಹಾರದ ಪ್ರತಿಯೊಂದು ವರ್ಗವು ಯಾವುದೇ ಅಡೆತಡೆಯಿಲ್ಲದೆ ಮತ ಚಲಾಯಿಸಿದೆ. ಬೂತ್‌ಗಳನ್ನು ಲೂಟಿ ಮಾಡಿದ, ಮತದಾನದ ದಿನಗಳಲ್ಲಿ ಗುಂಡುಗಳನ್ನು ಹಾರಿಸಿದ, ಬಾಂಬ್ ಸ್ಫೋಟ ನಡೆಯುತ್ತಿದ್ದ ಸಮಯವಿತ್ತು. ಅಲ್ಲದೇ ದಲಿತರು ಮತ್ತು ಹಿಂದುಳಿದ ವರ್ಗಗಳ ಧ್ವನಿಯನ್ನು ಹತ್ತಿಕ್ಕಲಾದ ಜಂಗಲ್ ರಾಜನ ಆಳ್ವಿಕೆ ಇತ್ತು ಎಂದಿದ್ದಾರೆ. ಇನ್ನು ಬಿಹಾರದಲ್ಲಿ ಎರಡನೇ ಹಂತದ ಮತದಾನ ಮುಂದಿನ ಮಂಗಳವಾರ (ನವೆಂಬರ್ 12ಕ್ಕೆ) ನಡೆಯಲಿದೆ.












Click it and Unblock the Notifications