ಪ್ರಧಾನಿ ನರೇಂದ್ರ ಮೋದಿಗೆ ಸಿಯೋಲ್ ಶಾಂತಿ ಪ್ರಶಸ್ತಿ
Recommended Video

ನವದೆಹಲಿ, ಅಕ್ಟೋಬರ್ 24 : 2018ರ ಸಿಯೋಲ್ ಶಾಂತಿ ಪ್ರಶಸ್ತಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನಿ ಮೋದಿ ಶಾಂತಿ ಪ್ರಶಸ್ತಿಗೆ ಆಯ್ಕೆಯಾದ 14ನೇ ಜಾಗತಿಕ ನಾಯಕರಾಗಿದ್ದಾರೆ.
ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕ್ವೋನ್ ಇ ಹ್ಯೋಕ್ ಅವರು ಪಶಸ್ತಿ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ. ಕಳೆದ ಗುರುವಾರ ಸಿಯೋಲ್‌ನಲ್‌ನಲ್ಲಿ ಶಾಂತಿ ಪ್ರಶಸ್ತಿಯ ಆಯ್ಕೆ ಸಮಿತಿಯ ಅಂತಿಮ ಸಭೆ ನಡೆದಿತ್ತು.
12 ಸದಸ್ಯರ ತಂಡ ವಿವಿಧ ದೇಶಗಳ ಮುಖ್ಯಸ್ಥರು, ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಪತ್ರಕರ್ತರು, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಹೀಗೆ 100 ಗಣ್ಯರ ಪಟ್ಟಿಯನ್ನು ಅಧ್ಯಯನ ಮಾಡಿತ್ತು. ಅಂತಿಮವಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ.

ಭಾರತದ ಜನರ ಜೀವನ ಮಟ್ಟ ಸುಧಾರಿಸಲು ನಡೆಸಿದ ಪ್ರಯತ್ನ, ಮಾನವ ಕಲ್ಯಾಣ ಸುಧಾರಣೆ ಮತ್ತು ವಿಶ್ವಶಾಂತಿಗಾಗಿ ನಡೆಸಿದ ಪ್ರಯತ್ನ, ನಾನಾ ದೇಶಗಳ ಜೊತೆ ಆರ್ಥಿಕ ಸಹಕಾರ ಸ್ಥಾಪನೆ ಮಾಡಲು ನಡೆಸಿದ ಪ್ರಯತ್ನಗಳಿಗಾಗಿ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿಗೆ ಅತ್ಯಂತ ಅರ್ಹ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ ಎಂದು ಕ್ವೋನ್ ಇ ಹ್ಯೋಕ್ ಅವರು ಹೇಳಿದ್ದಾರೆ. ನರೇಂದ್ರ ಮೋದಿ ಸಿಯೋಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾದ 14ನೇ ಜಾಗತಿಕ ನಾಯಕರಾಗಿದ್ದಾರೆ.
ನೋಟು ನಿಷೇಧ ಮತ್ತು ಸರ್ಜಿಕಲ್ ದಾಳಿ, ಸ್ವಚ್ಛ ಭಾರತದಂತದ ಮೋದಿ ಕಾರ್ಯಗಳನ್ನು ಆಯ್ಕೆ ಸಮಿತಿ ಶ್ಲಾಘಿಸಿದೆ. ಸಿಯೋಲ್ ಶಾಂತಿ ಪ್ರಶಸ್ತಿ ಪ್ರಶಸ್ತಿ ಫಲಕ ಮತ್ತು 2 ಲಕ್ಷ ಡಾಲರ್ ಗೌರವ ಧನವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಗುತ್ತದೆ.












Click it and Unblock the Notifications