ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿರಾ ಹೆಸರು ಪ್ರಸ್ತಾಪಿಸಿ ಕಾಂಗ್ರೆಸ್ ಮೇಲೆ ಮೋದಿ ವಾಗ್ದಾಳಿ

|
Google Oneindia Kannada News

ಬೆಂಗಳೂರು, ಮಾರ್ಚ್ 09 : 'ಸದೃಢವಾದ ಆಡಳಿತ ನಡೆಸಲು ನಮಗೆ ಹೊಸ ನೀತಿಯ ಅಗತ್ಯವಿದೆ. ರಾಜ್ಯಸಭೆ ಮತ್ತು ಲೋಕಸಭೆ ಒಟ್ಟಾಗಿ ಕೆಲಸ ಮಾಡಬೇಕು. ರಾಜ್ಯಸಭೆಯಲ್ಲಿ ಬಾಕಿ ಇರುವ ವಿಧೇಯಕಗಳನ್ನು ಪಾಸು ಮಾಡಲು ಪ್ರತಿಪಕ್ಷಗಳು ಸಹಕಾರ ನೀಡಬೇಕು' ಎಂದು ನರೇಂದ್ರ ಮೋದಿ ಹೇಳಿದರು.

ಗುರುವಾರ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 'ದೇಶದ ಸಮಸ್ಯೆ ಬಗೆಹರಿಸುವತ್ತ ನಾವು ಗಮನಹರಿಸೋಣ ಎಂದು ಕರೆ ನೀಡಿದರು'. [ಲೋಕಸಭೆಯಲ್ಲಿ ಮೋದಿ ಭಾಷಣ : ಮುಖ್ಯಾಂಶಗಳು]

narendra modi

ಮೋದಿ ಭಾಷಣದ ಮುಖ್ಯಾಂಶಗಳು

* ಲೋಕಸಭೆಯಲ್ಲಿ ಅಂಗೀಕಾರವಾದ ವಿಧೇಯಕಗಳನ್ನು ರಾಜ್ಯಸಭೆಯಲ್ಲಿಯೂ ಅಂಗೀಕಾರಗೊಳಿಸಲು ಪ್ರಯತ್ನಿಸೋಣ. ಈ ವಿಧೇಯಕಗಳು ದೇಶದ ಅಭಿವೃದ್ಧಿಗೆ ಸಹಾಯಕವಾಗಲಿವೆ. [ಸಂಸತ್ತಿನಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?]

* ಮನಮೋಹನ್ ಸಿಂಗ್ ಅವರಂತೆ ನಾನು ಆರ್ಥಿಕ ತಜ್ಞನಲ್ಲ. ಆದ್ದರಿಂದ ನನಗೆ ಅಷ್ಟು ಜ್ಞಾನವಿಲ್ಲ. ಆದರೂ ನನಗೂ ಸ್ವಲ್ಪ ತಿಳಿದಿದೆ. 2022ರ ವೇಳೆಗೆ ರೈತರ ಆದಾಯವನ್ನು ಹೆಚ್ಚಿಸುವುದು ನಮ್ಮ ಗುರಿ.

* ಸ್ವಚ್ಛತೆ ಎಂಬುದು ಸಾಮೂಹಿಕ ಅಭಿಯಾನವಾಗುತ್ತಿದೆ. ಲೋಕಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆಯಿತು. ಸರ್ಕಾರವನ್ನು ಟೀಕೆ ಮಾಡಬಹುದು. ಆದರೆ, ಅದು ಜಾರಿಗೆ ತಂದ ಯೋಜನೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ.

* 'ಪ್ರಪಂಚದಲ್ಲಿ ಎರಡು ರೀತಿಯ ಜನರಿರುತ್ತಾರೆ ಒಬ್ಬರು ದುಡಿಯುವವರಾದರೆ ಮತ್ತೊಬ್ಬರು ಅದರ ಶ್ರೇಯವನ್ನು ಪಡೆಯುತ್ತಾರೆ. ಮೊದಲ ವರ್ಗಕ್ಕೆ ಹೆಚ್ಚು ಸ್ಪರ್ಧಿಗಳು ಇರುವುದಿಲ್ಲ' ಈ ಮಾತನ್ನು ನಾನು ಹೇಳಿಲ್ಲ ಇಂದಿರಾ ಗಾಂಧಿ ಹೇಳಿದ್ದು

ಮೋದಿ ಭಾಷಣದ ವಿಡಿಯೋ

English summary
Prime Minister Narendra Modi addresses the Rajya Sabha on Wednesday, March 9th, 2016 to respond to the motion of thanks to the president for his address.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X