ಕೇರಳವನ್ನು ಸೊಮಾಲಿಯಾಗೆ ಹೋಲಿಸಿದ ಮೋದಿ: ಮುಗಿಬಿದ್ರು ಮಲ್ಲೂಸ್

Posted By:
Subscribe to Oneindia Kannada

ಕಳೆದ ಭಾನುವಾರ (ಮೇ 8) ಕೇರಳದ ತಿರುವನಂತಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕೇರಳವನ್ನು ಸೊಮಾಲಿಯಾಗೆ ಹೋಲಿಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕೇರಳಿಗರು ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಮುಗಿಬಿದ್ದಿದ್ದಾರೆ.

‪#‎PoMoneModi‬ ಎಂಬ (ಹೋಗೋ ಮಗನೇ ಮೋದಿ ಎಂದು ಅರ್ಥ ಬರುವ) ಹ್ಯಾಷ್ ಟ್ಯಾಗ್ ಬಳಸಿ ಕೇರಳಿಗರು ಟ್ವಿಟ್ಟರ್ ನಲ್ಲಿ ಸಾವಿರಾರು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದು, ಇದು ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. (ಕೇರಳ ಚುನಾವಣಾಪೂರ್ವ ಸಮೀಕ್ಷೆ)

ಈ ಹ್ಯಾಷ್ ಟ್ಯಾಗ್ 2019ರ ಲೋಕಸಭಾ ಚುನಾವಣೆಯವರೆಗೂ ಮೋದಿಗೆ ಗಾಯವಾಗಿ ಪರಿಣಮಿಸಲಿದೆ ಎಂದು ಮಲ್ಲೂಸ್, ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಪೋ ಮೋನೆ ಮೋದಿ ಟ್ಯಾಗ್ ಟಾಪ್ ಟ್ರೆಂಡಿಂಗ್ ನಲ್ಲಿದೆ.

ಮೂಲಭೂತ ಸೌಕರ್ಯ ಅಭಿವೃದ್ದಿ ವಿಚಾರದಲ್ಲಿ ಕೇರಳ, ಸೊಮಾಲಿಯಾಗಿಂತಲೂ ಹಿಂದಿದೆ. ಕೇರಳದಲ್ಲಿರುವ ಪರಿಶಿಷ್ಟ ಪಂಗಡ ಜನಾಂಗದಲ್ಲಿನ ಮಗುವಿನ ಮರಣ ಪ್ರಮಾಣವು ಸೊಮಾಲಿಯಾಕ್ಕಿಂತಲೂ ಅಧಿಕವಾಗಿದೆ ಎಂದು ಮೋದಿ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು. (ಬಾಬಿಯ ಕಾಮುಕತನ ಬಯಲು)

ಪ್ರಧಾನಿ ಮೋದಿ ಹೇಳಿಕೆಗೆ ತೀವ್ರ ಬೇಸರ ವ್ಯಕ್ತ ಪಡಿಸಿ ಕೇರಳದ ಮುಖ್ಯಮಂತ್ರಿ ಓಮನ್ ಚಾಂಡಿ ಕೂಡಾ ಖಾರವಾದ ಪತ್ರವನ್ನು ಬರೆದಿದ್ದರು. ಕೇರಳಿಗರ ಕೆಲವೊಂದು ಖಾರವಾದ, ವ್ಯಂಗ್ಯ ಟ್ವೀಟ್ ಸಂದೇಶ ಸ್ಲೈಡಿನಲ್ಲಿದೆ.. [ರಾಸಲೀಲೆಗೆ ಪಲ್ಲಂಗವಾದ ಕೇರಳ ಬೋಟ್ ಹೌಸ್]

ಕೇರಳ ದೇಶದ ಪ್ರಥಮ ವಿದ್ಯಾವಂತರ ರಾಜ್ಯ

ಕೆಲವರು ಕೇರಳವನ್ನು ಸೊಮಾಲಿಯಾಗೆ ಹೋಲಿಸುವ ಧೈರ್ಯ ತೋರಿ, ಕೇರಳ ದೇಶದ ಮೊದಲ ವಿದ್ಯಾವಂತರ ರಾಜ್ಯ.

ಸೊಮಾಲಿಯಾದ ಹುಡುಗ

ಸೊಮಾಲಿಯಾದ ಹುಡುಗ ಅನ್ನಕ್ಕಾಗಿ ಬೇಡುತ್ತಿದ್ದಾನೆಂದು, ಕೇರಳದ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸುತ್ತಿರುವ ಶ್ರೀಶಾಂತ್ ಫೋಟೋ ಹಾಕಿ ಟೀಕಿಸಲಾಗಿದೆ.

ಇದಕ್ಕಾಗಿಯೇ ಬಿಜೆಪಿ ತಿರಸ್ಕೃತವಾಗಿರುವುದು

ಬಿಜೆಪಿ ಮುಖಂಡರಿಗೆ ಕೇರಳದ ಬಗ್ಗೆ ಕನಿಷ್ಠ ಮಾಹಿತಿಯಿಲ್ಲ, ಅದಕ್ಕಾಗಿಯೇ ಇಲ್ಲಿ ಬಿಜೆಪಿಗೆ ನೆಲೆಯಿಲ್ಲ.

ಅವಮಾನ ನಿಲ್ಲಿಸಿ

ನಿಮ್ಮ ಗುಜರಾತ್ ಮತ್ತು ಕೇರಳದ ಹೋಲಿಕೆ ಇಲ್ಲಿದೆ. ಕೇರಳವನ್ನು ಅವಮಾನಿಸುವುದನ್ನು ನಿಲ್ಲಿಸಿ.

ಸೊಮಾಲಿಯಾದವರಿಗೆ ಸಂತೋಷ

ಸೊಮಾಲಿಯಾದವರಿಗೆ ಸಂತೋಷ

ದೇವರ ನಾಡು ಕೇರಳವನ್ನು ಸೊಮಾಲಿಯಾಗೆ ಪ್ರಧಾನಿ ಹೋಲಿಸಿದ ನಂತರ, ಬಡರಾಷ್ಟ್ರ ಸೊಮಾಲಿಯಾ ಜನತೆಗೆ ಖುಷಿಯಾಗಿರಬೇಕು ಎಂದು ಟ್ವಿಟ್ಟರ್ ನಲ್ಲಿ ಬೇಸರ ವ್ಯಕ್ತ ಪಡಿಸಲಾಗಿದೆ. 'ಪೋ ಮೋನೆ' ಎನ್ನುವುದು ನಟ ಮೋಹನ್ ಲಾಲ್ ಅಭಿನಯದ ನರಸಿಂಹಂ ಎಂಬ ಸಿನಿಮಾದ ಜನಪ್ರಿಯ ಡೈಲಾಗ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
PM Modi’s comments On Kerala Made Malayalis hilariously troll him with #PoMoneModi hash tag on Twitter. During the election rally in Kerala on May 8 Modi said, Infant mortality rate among the ST community in Kerala is worse than Somalia.
Please Wait while comments are loading...