ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

56 ಮೆಡಿಸನ್ಸ್ ದರಗಳ ಮೇಲೆ ಶೇ 25 ರಷ್ಟು ಕಡಿತ!

By Mahesh
|
Google Oneindia Kannada News

ನವದೆಹಲಿ, ಜೂನ್ 07: ಕ್ಯಾನ್ಸರ್, ಮಧುಮೇಹ, ಬ್ಯಾಕ್ಟೀರಿಯಾ ಸೋಂಕು ಮತ್ತು ರಕ್ತದೊತ್ತಡ ಮುಂತಾದ ಕಾಯಿಲೆಗಳಿಗೆ ನೀಡಲಾಗುವ ಪ್ರಮುಖ 56 ಔಷಧಗಳ ಬೆಲೆಯನ್ನು ಕೇಂದ್ರ ಸರ್ಕಾರ ಸುಮಾರು ಶೇ. 25ರಷ್ಟು ಕಡಿತ ಮಾಡಿದೆ. ಆದರೆ, ಗ್ಲುಕೋಸ್, ಸೋಡಿಯಂ ಇಂಜೆಕ್ಷನ್ ಬೆಲೆಯನ್ನು ಏರಿಕೆ ಮಾಡಲಾಗಿದೆ.

ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (ಎನ್​ಪಿಪಿಎ) ಔಷಧ ದರಗಳನ್ನು ಕಡಿತಗೊಳಿಸಿದೆ. ಔಷಧ ಬೆಲೆಯನ್ನು ಸರಾಸರಿ ಶೇ. 25 ರಷ್ಟು ಇಳಿಕೆ ಮಾಡಲಾಗಿದೆ. [ದೇಶದ 6 ಕಡೆ ಫಾರ್ಮಾಪಾರ್ಕ್ ಸ್ಥಾಪನೆ]

Prices of 56 drugs to come down; NPPA fixes ceiling rates

ಕೆಲವು ಔಷಧಗಳ ಬೆಲೆ ಶೇ. 10 ರಿಂದ 15 ರಷ್ಟು ಕಡಿತವಾಗಿದ್ದರೆ, ಕೆಲವು ಔಷಧಗಳ ಬೆಲೆಯನ್ನು ಶೇ. 45 ರಿಂದ 50 ರಷ್ಟು ಕಡಿತಗೊಳಿಸಲಾಗಿದೆ. [ಆನ್‌ಲೈನ್‌ ನಲ್ಲಿ ಔಷಧಿ ಖರೀದಿಸಿ 'ಪ್ಲಸ್' ಮನೆಗೆ ತರಿಸಿಕೊಳ್ಳಿ!]

ಈ ಔಷಧಗಳ ಬೆಲೆಯನ್ನು ವಾರ್ಷಿಕ ಶೇ. 10 ರಷ್ಟು ಏರಿಕೆ ಮಾಡಲು ಅವಕಾಶ ನೀಡಲಾಗಿದೆ. ಎಂದು ಎನ್​ಪಿಪಿಎ ಅಧ್ಯಕ್ಷ ಭುಪೇಂದ್ರ ಸಿಂಗ್ ತಿಳಿಸಿದ್ದಾರೆ.[ಔಷಧ ಮಾರಾಟ ಪ್ರತಿನಿಧಿಗಳ ಬೇಡಿಕೆಗಳೇನು?]

ಈ ದರ ಪರಿಷ್ಕರಣೆಯಿಂದಾಗಿ ಅಬಾಟ್ ಹೆಲ್ತ್ ಕೇರ್, ಸಿಪ್ಲಾ, ಲೂಪಿನ್, ಅಲೆಮ್ಬಿಕ್, ಅಲ್ಕೆಮ್ ಲ್ಯಾಬ್ಸ್, ನೊವಾರ್ಟಿಸ್, ಬಯೋಕಾನ್, ಇನ್ಟಾಸ್ ಫಾರ್ಮಾ, ಹೆಟೆರೋ ಹೆಲ್ತ್ ಕೇರ್, ಸನ್ ಫಾರ್ಮಾ ಉತ್ಪನ್ನಗಳ ಬೆಲೆ ಏರಿಳಿತವಾಗಲಿದೆ (ಪಿಟಿಐ)

English summary
Prices of 56 important medicines used in treatment of cancer, diabetes, bacterial infections and blood pressure have been capped by the government thereby reducing the cost by an average of around 25 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X