ಡೇಲಿಹಂಟ್ ಸಿಇಒ ಗುಪ್ತ, ಅಧ್ಯಕ್ಷ ಬೇಡಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ

Recommended Video

      ಡೇಲಿಹಂಟ್ ಸಿಇಒ ಮುಡಿಗೆ ಎಕ್ಸ್ ಚೇಂಜ್ ಫಾರ್ ಮೀಡಿಯಾ ಇನ್ ಫ್ಲ್ಯುಯೆನ್ಸರ್ ಪ್ರಶಸ್ತಿ | Oneindia Kannada

      ನವದೆಹಲಿ ನವೆಂಬರ್ 17: ವೇಗವಾಗಿ ಸುದ್ದಿ ನೀಡುವ ಜನಪ್ರಿಯ ಮೊಬೈಲ್ ಅಪ್ಲಿಕೇಶನ್ ಡೇಲಿಹಂಟ್ ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಗುಪ್ತ ಮತ್ತು ಅಧ್ಯಕ್ಷ ಉಮಾಂಗ್ ಬೇಡಿ ಅವರಿಗೆ ಪ್ರತಿಷ್ಠಿತ 'ಎಕ್ಸ್ ಚೇಂಜ್ ಫಾರ್ ಮೀಡಿಯಾ ಇನ್ ಫ್ಲ್ಯುಯೆನ್ಸರ್' ಪ್ರಶಸ್ತಿ ದೊರೆತಿದೆ.

      ಪ್ರಶಸ್ತಿ(exchange4media Influencer) ಸ್ವೀಕರಿಸಿದ ವೀರೇಂದ್ರ ಗುಪ್ತ ಅವರು, "ಡೇಲಿಹಂಟ್ ನ ಪರವಾಗಿ ನಾನು ಈ ಪ್ರಶಸ್ತಿಯನ್ನು ವಿನಮೃತೆಯಿಂದ ಸ್ವೀಕರಿಸುತ್ತೇನೆ. ನಮ್ಮ ಗುರಿ ಡಿಜಿಟಲ್ ಲೋಕದ ಅಗತ್ಯಗಳನ್ನು ಈಡೇರಿಸುವುದು. ಫೇಸ್ ಬುಕ್ ಮತ್ತು ಗೂಗಲ್ ಗೆ ಅಗತ್ಯವಿರುವ ಡಿಜಿಟಲ್ ಸರಕುಗಳನ್ನು ನೀಡುವುದು. ನಾವು ಪ್ರತಿ ತಿಂಳು 150 ದಶಲಕ್ಷ ಓದುಗರನ್ನು ಹೊಂದಿದ್ದೇವೆ. ಮುಂದಿನ ವರ್ಷದಲ್ಲಿ 300-350 ದಶಲಕ್ಷ ಓದುಗರನ್ನು ಹೊಂದುವ ಗುರಿ ಇಟ್ಟುಕೊಂಡಿದ್ದೇವೆ" ಎಂದರು.

      Prestigious exchange4media Influencer award to Dailyhunts Virendra Gupta and Umang Bedi

      ಪ್ರಶಸ್ತಿ ಸ್ವೀಕರಿಸಿದ ಅಧ್ಯಕ್ಷ ಉಮಾಂಗ್ ಬೇಡಿ ಮಾತನಾಡಿ, "ಗುಪ್ತ ಅವರೊಂದಿಗೆ ಕೆಲಸ ಮಾಡಿದ್ದು ಅತ್ಯುತ್ತಮ ಪಯಣ. ಗುಪ್ತ ಮತ್ತು ನಾನು ಇಬ್ಬರೂ ಒಂದೇ ರೀತಿಯ ಯೋಚನೆ ಮಾಡುವುದರಿಂದ ನಾನು ಅವರನ್ನು ನನ್ನ ಸಹೋದರ ಎಂದೇ ಭಾವಿಸಿದ್ದೇನೆ. ಪ್ರತಿಯೊಬ್ಬರ ಜೀವನದಲ್ಲೂ ಮಾರ್ಗದರ್ಶನ ಮಾಡುವ ಒಬ್ಬ ಹಿರಿಯಣ್ಣ ಬೇಕು. ನನ್ನ ಬದುಕಿನಲ್ಲಿ ಗುಪ್ತ ಆ ಸ್ಥಾನ ತುಂಬಿದ್ದಾರೆ" ಎಂದರು.

      2016 ರಿಂದ ಎಕ್ಸ್ ಚೇಂಚ್ ಫಾರ್ ಮೀಡಿಯಾ ಗ್ರೂಪ್ ಈ ಪ್ರಶಸ್ತಿಯನ್ನು ನೀಡುತ್ತಿದೆ. ಹೊಸ ತಂತ್ರಜ್ಞಾನ ಮತ್ತು ಹೊಸ ಕಾಲದ ಅಗತ್ಯಗಳನ್ನು ಅರಿತು ಉದ್ಯಮಿ ಕ್ಷೇತ್ರದಲ್ಲಿ ಯಶಸ್ಸು ಪಡೆದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+