• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಚುನಾವಣೆ ಕುರಿತು ತಿಳಿಯಬೇಕಾದ ಪ್ರಮುಖ ಅಂಶಗಳು

|
Google Oneindia Kannada News

ನವದೆಹಲಿ, ಜುಲೈ 18: ಭಾರತದ 16ನೇ ರಾಷ್ಟ್ರಪತಿ ಆಯ್ಕೆಗೆ ಸೋಮವಾರ ಚುನಾವಣೆ ನಡೆಯಲಿದೆ. ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷದ ಯಶವಂತ್ ಸಿನ್ಹಾ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.

ದೇಶದಲ್ಲಿ ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ನೀಡಿರುವ ಪಕ್ಷಗಳ ಆಧಾರದ ಮೇಲೆ ಒಂದು ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗುತ್ತಿದೆ. ಗೆಲುವು ಒಂದು ಕಡೆಯಲ್ಲಿ ವಾಲಿಸುವ ಬಗ್ಗೆ ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದೆ. ಇದರ ಮಧ್ಯೆ ಸೋಮವಾರ ಮತದಾನ ಪ್ರಕ್ರಿಯೆ ನಡೆಯಲಿದೆ.

Presidential Election 2022 Voting Live: ಎನ್‌ಡಿಎ V/s ಯುಪಿಎ ಅಭ್ಯರ್ಥಿಗಳ ಗೆಲುವಿನ ಜಟಾಪಟಿPresidential Election 2022 Voting Live: ಎನ್‌ಡಿಎ V/s ಯುಪಿಎ ಅಭ್ಯರ್ಥಿಗಳ ಗೆಲುವಿನ ಜಟಾಪಟಿ

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಚುನಾವಣೆ ನಡೆಯಲಿದೆ. 64 ವರ್ಷದ ದ್ರೌಪದಿ ಮುರ್ಮು 2017 ರ ರಾಷ್ಟ್ರಪತಿ ಚುನಾವಣೆಯ ಮೊದಲು ದೇಶದ ಅತ್ಯುನ್ನತ ಹುದ್ದೆಗೆ ಪ್ರಬಲ ಸ್ಪರ್ಧಿಯಾಗಿದ್ದು, ಅಲ್ಲಿಯವರೆಗೆ ದಲಿತರಾದ ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಅನ್ನು ಈ ಹುದ್ದೆಗೆ ಸರ್ಕಾರದ ಆಯ್ಕೆಯಾಗಿ ಹೆಸರಿಸಲಾಗಿತ್ತು. ಈಗ ನಡೆಯುತ್ತಿರುವ ಚುನಾವಣೆ ಮತ್ತು ಪೈಪೋಟಿಯ ಕುರಿತು ಕೆಲವು ಪ್ರಮುಖ ಬೆಳವಣಿಗೆ ಹಾಗೂ ಅಂಶಗಳನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

ರಾಷ್ಟ್ರಪತಿ ಚುನಾವಣೆ ಪ್ರಮುಖ ಅಂಶಗಳು

* ಒಡಿಶಾದ ಬುಡಕಟ್ಟು ಮಹಿಳೆ ಮತ್ತು ಜಾರ್ಖಂಡ್ ಮಾಜಿ ರಾಜ್ಯಪಾಲರಾದ ದ್ರೌಪದಿ ಮುರ್ಮು ಎನ್‌ಡಿಎ ಆಯ್ಕೆ ಆಗಿದ್ದಾರೆ. ಇದರ ಹಿಂದೆ ಭಾರೀ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ. ಇದರಿಂದಂ ಜಾರ್ಖಂಡ್‌ನ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಮಾತ್ರವಲ್ಲದೆ ಒಡಿಶಾದ ನವೀನ್ ಪಟ್ನಾಯಕ್ ಬೆಂಬಲವನ್ನು ಸೆಳೆಯಲಾಗುತ್ತಿದೆ.

* ದ್ರೌಪರಿ ಮುರ್ಮುಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೆಂಬಲದ ಭರವಸೆ ನೀಡಿದ್ದಾರೆ, ಅವರು ಇತ್ತೀಚೆಗೆ ಮಿತ್ರಪಕ್ಷ ಬಿಜೆಪಿಯಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು.

* ಮಹಾರಾಷ್ಟ್ರದಲ್ಲಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರದ ಪತನದ ನಂತರದಲ್ಲಿ ಶಿವಸೇನೆ ಇಬ್ಭಾಗವಾಗಿದ. ಅದಾಗ್ಯೂ, ಶಿವಸೇನೆಯ ಎರಡೂ ಬಣಗಳು ಎನ್‌ಡಿಎ ಅಭ್ಯರ್ಥಿಯ ಬೆನ್ನಿಗೆ ನಿಲ್ಲುವುದಾಗಿ ಘೋಷಿಸಿವೆ.

* ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಏಕನಾಥ್ ಶಿಂಧೆ ಬಣ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದರೆ, ಉದ್ಧವ್ ಠಾಕ್ರೆ ನೇತೃತ್ವದ ಬಣವೂ ಅವರನ್ನು ಬೆಂಬಲಿಸುತ್ತಿದೆ.

* ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅನ್ನು ಬೆಂಬಲಿಸುತ್ತಿದ್ದ ಠಾಕ್ರೆ ಬಣ, 16 ಸಂಸದರು ಉದ್ಧವ್ ಠಾಕ್ರೆ ಅನ್ನು ಭೇಟಿ ಮಾಡಿ ಬುಡಕಟ್ಟು ಮಹಿಳೆ ಎಂಎಸ್ ಮುರ್ಮುಗೆ ಮತ ಹಾಕುವಂತೆ ಸೂಚಿಸಿದ ನಂತರ ನಿಲುವು ಬದಲಾಯಿಸಲು ನಿರ್ಧರಿಸಿದರು. ಉದ್ಧವ್ ಠಾಕ್ರೆ ಮುರ್ಮುರನ್ನು ಬೆೆಂಬಲಿಸುವ ಮೂಲಕ ಉಲ್ಟಾ ಹೊಡೆದಿದ್ದಾರೆ ಎಂದು ಯುಪಿಎ ಅಭ್ಯರ್ಥಿ ಯಶವಂತ್ ಸಿನ್ಹಾ ದೂಷಿಸಿದ್ದಾರೆ.

* ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮಾಜಿ ಕೇಂದ್ರ ಸಚಿವರಾಗಿದ್ದ ಯಶವಂತ್ ಸಿನ್ಹಾ ನಂತರದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಸೇರಿದ್ದರು. ಮೂವರು ಪ್ರಸ್ತಾವಿತ ಅಭ್ಯರ್ಥಿಗಳು ತಾವು ರಾಷ್ಟ್ರಪತಿ ಚುನಾವಣೆೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ ನಂತರದಲ್ಲಿ ಇವರ ಹೆಸರನ್ನು ಯುಪಿಎ ಮೈತ್ರಿಕೂಟವು ಅಂತಿಮಗೊಳಿಸಿತು.

* ರಾಷ್ಟ್ರೀಯ ಕಾಂಗ್ರೆಸ್ ಮುಖ್ಯಸ್ಥ ಶರದ್ ಪವಾರ್, ಮಾಜಿ ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ವಿವಿಧ ಕಾರಣಗಳನ್ನು ಉಲ್ಲೇಖಿಸಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವುದಕ್ಕೆ ನಿರಾಕರಿಸಿದ್ದರು.

* ಸಂಸತ್ತಿನ ಎರಡೂ ಸದನಗಳ ಚುನಾಯಿತ ಸದಸ್ಯರು ಮತ್ತು ಎಲ್ಲಾ ರಾಜ್ಯಗಳ ಶಾಸಕಾಂಗ ಸಭೆಗಳು ಹಾಗೂ ದೆಹಲಿ, ಕೇಂದ್ರಾಡಳಿತ ಪ್ರದೇಶದ ಕಾಲೇಜಿನ ಸದಸ್ಯರು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.

* ಮತದಾನಕ್ಕೆ ಯಾವುದೇ ಪಕ್ಷದ ವಿಪ್ ನೀಡಲಾಗುವುದಿಲ್ಲ ಮತ್ತು ಸಂಸದರು ಮತ್ತು ಶಾಸಕರು ತಮಗೆ ಬೇಕಾದವರಿಗೆ ಮತ ಚಲಾಯಿಸಬಹುದು. ಜುಲೈ 21ರಂದು ಮತ ಎಣಿಕೆ ನಡೆಯಲಿದ್ದು, ಜುಲೈ 25 ರಂದು ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

English summary
Presidential Election 2022: Competition between Droupadi Murmu and Yashwant Sinha; here read 10 major points.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X