ಅ.26-27ಕ್ಕೆ ಕರ್ನಾಟಕ, ತಮಿಳುನಾಡಿಗೆ ಭೇಟಿ ನೀಡಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು
ಬೆಂಗಳೂರು ಅಕ್ಟೋಬರ್ 26: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಕ್ಟೋಬರ್ 26 ರಿಂದ 27 ರವರೆಗೆ ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಎರಡೂ ರಾಜ್ಯಗಳಲ್ಲಿ ಪೊಲೀಸ್ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಸ್ತಾಪನಾ ಸುವರ್ಣ ಮಹೋತ್ಸವದ ಸಪ್ತಾಹ ಆಚರಣೆಗೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಲಿದ್ದಾರೆ. ಬಳಿಕ ಅವರು ಬೆಂಗಳೂರಿನ ಐಐಎಂನಲ್ಲಿ ಎನ್ ಎಸ್ ರಾಘವನ್ ಉದ್ಯಮಶೀಲತಾ ಕಲಿಕೆ ಕೇಂದ್ರದ ಮಹಿಳಾ ಉದ್ಯಮಿಗಳು ಮತ್ತು ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಂದು ಮಧ್ಯಾಹ್ನ 3.20ಕ್ಕೆ ಬೆಂಗಳೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬನ್ನೇರುಘಟ್ಟ ರಸ್ತೆಯಲ್ಲಿ ಐಐಎಂ ಸಂಸ್ಥಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅವರನ್ನು ರಾಜ್ಯ ಸರ್ಕಾರದ ನಾಯಕರು ಸ್ವಾಗತಿಸಲಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರಿನ ಸಂಸ್ಥಾಪನಾ ದಿನದ ಸುವರ್ಣ ಮಹೋತ್ಸವದ ನಿಮಿತ್ತವಾಗಿ ಐಐಎಂ ಬಿಯ ಪಿಜಿಪಿ ಹಳೆಯ ವಿದ್ಯಾರ್ಥಿ ಮತ್ತು ಪ್ರಸಿದ್ಧ ಶಾಸ್ತ್ರೀಯ ಗಾಯಕಿ ಮಾನಸಿ ಪ್ರಸಾದ್ ಮತ್ತು ಅವರ ತಂಡವು 'ಸುವರ್ಣ ಸಂಗೀತವನ್ನು ಪ್ರಸ್ತುತಪಡಿಸಲಿದೆ.
ನಂತರ 6.5ಕ್ಕೆ ಬೆಂಗಳೂರಿನಿಂದ ಚೆನ್ನೈಗೆ ತೆರಳಲಿದ್ದಾರೆ. ಅಕ್ಟೋಬರ್ 27 ರಂದು ಮುರ್ಮು ಅವರು ತಮಿಳುನಾಡಿನ ಚೆನ್ನೈನಲ್ಲಿ ಇಂಡಿಯನ್ ಮ್ಯಾರಿಟೈಮ್ ವಿಶ್ವವಿದ್ಯಾಲಯದ 8 ನೇ ಘಟಿಕೋತ್ಸವವನ್ನು ಅಲಂಕರಿಸಲಿದ್ದಾರೆ.
ಅಕ್ಟೋಬರ್ 27ರಂದು ತಮಿಳುನಾಡಿಗೆ ಭೇಟಿ
ಅಕ್ಟೋಬರ್ 27ರಂದು ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ತಮಿಳುನಾಡಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಚೆನ್ನೈನಲ್ಲಿ ಇಂಡಿಯನ್ ಮ್ಯಾರಿಟೈಮ್ ವಿಶ್ವವಿದ್ಯಾಲಯದ 8 ನೇ ಘಟಿಕೋತ್ಸವ ಸಮಾರಂಭ ನಡೆಯಲಿದ್ದು, ರಾಷ್ಟ್ರಪತಿ ದ್ರಬುಪತಿ ಮುರ್ಮು ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಗೌರವಿಸಲಿದ್ದಾರೆ.
ರಾಷ್ಟ್ರಪತಿಗಳು ಪಾಲ್ಗೊಳ್ಳುವ ಈ ಸಮಾರಂಭದಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್, ರಾಜ್ಯ ಸಚಿವರಾದ ಶ್ರೀಪಾದ್ ನಾಯಕ್ ಮತ್ತು ಶಾಂತನು ಠಾಕೂರ್ ಭಾಗವಹಿಸುವ ನಿರೀಕ್ಷೆಯಿದೆ.
ಈ ಸಮಾರಂಭದಲ್ಲಿ ಭಾಗವಹಿಸಲು ಭಾರತೀಯ ವಾಯುಪಡೆಯ ಖಾಸಗಿ ವಿಮಾನವು ಇಂದು ಬೆಂಗಳೂರಿನಿಂದ ಸಂಜೆ 6 ಗಂಟೆಗೆ ಹೊರಟು ಸಂಜೆ 6.50 ಕ್ಕೆ ಚೆನ್ನೈ ಹಳೆ ವಿಮಾನ ನಿಲ್ದಾಣವನ್ನು ತಲುಪಲಿದೆ. ವಿಮಾನ ನಿಲ್ದಾಣದಲ್ಲಿ ಅವರನ್ನು ತಮಿಳುನಾಡು ಸರ್ಕಾರ ನಾಯಕರು ಸ್ವಾಗತಿಸಲಿದ್ದಾರೆ. ನಂತರ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಗಿಂಡಿ ರಾಜ್ಯಪಾಲರ ಭವನಕ್ಕೆ ತೆರಳಿ ರಾತ್ರಿ ಅಲ್ಲಿಯೇ ತಂಗಲಿದ್ದಾರೆ.












Click it and Unblock the Notifications