ಬಸ್ ನಿಂದ ಬಿದ್ದ ಗರ್ಭಿಣಿ ಮಗುವಿಗೆ ಜನ್ಮ ನೀಡಿ ಸಾವು!

Posted By: Nayana
Subscribe to Oneindia Kannada

ತಿರುವನಂತಪುರಂ, ಜನವರಿ 05: ಗರ್ಭಿಣಿಯೊಬ್ಬಳು ಬಸ್ ನಲ್ಲಿ ಸೀಟು ಸಿಗದೇ ನಿಂತುಕೊಂಡೇ ಸಂಚರಿಸುತ್ತಿದ್ದಾಗ ಕುಸಿದುಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

ನಶೀದಾ (34) ಎಂಬ 9 ತಿಂಗಳ ಗರ್ಭಿಣಿ ಬಸ್‌ನಲ್ಲಿ ನಿಂತುಕೊಂಡೇ ಸಂಚರಿಸುತ್ತಿದ್ದರೆ ಆಕೆಗೆ ಸಹಪ್ರಯಾಣಿಕರು ಕುಳಿತುಕೊಳ್ಳಲು ಸೀಟ್ ಬಿಟ್ಟುಕೊಟ್ಟಿರಲಿಲ್ಲ ಎಂಬ ಅಮಾನವೀಯ ಅಂಶ ಬೆಳಕಿಗೆ ಬಂದಿದೆ.

ಕಳೆದ ಡಿಸೆಂಬರ್ 29 ರಂದು ಕೇರಳದ ಥೀಕೊಯಿಯಿಂದ ಎರಟ್ಟುಪೆಟ್ಟಕ್ಕೆ ಖಾಸಗಿ ಬಸ್‌ಗೆ ತೆರಳುತ್ತಿದ್ದ ಗರ್ಭಿಣಿ ಬಸ್‌ನಲ್ಲಿ ಬಾಗಿಲು ಸಮೀಪವೇ ನಿಂತಿದ್ದಳು.

Pregnant women dies after fell from bus

ದುರ್ದೈವವಶಾತ್ ಬಸ್ ಯೂ-ಟರ್ನ್ ತೆಗೆದುಕೊಳ್ಳುತ್ತಿದ್ದಂತೆಯೇ ಬಾಗಿಲು ಅಕಸ್ಮಾತ್ ತೆರೆದುಕೊಂಡಾಗ ಸಮತೋಲನ ಕಳೆದುಕೊಂಡ ಮಹಿಳೆ ಬಸ್‌ನಿಂದ ಹೊರಗೆ ಬಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಅವಳ ತಲೆಗೆ ಭಾರಿ ಪೆಟ್ಟಾಗಿದ್ದರಿಂದ ಐದು ದಿನಗಳ ಕಾಲ ಚಿಕಿತ್ಸೆ ನೀಡಲಾಯಿತಾದರೂ ಕೊನೆಗೆ ಬದುಕುಳಿಯಲಿಲ್ಲ. ಆದರೆ ಆಕೆ ಸಾವಿಗೂ ಮುನ್ನ ಮಗುವಿಗೆ ಜನ್ಮ ನೀಡಿದ್ದು, ಸದ್ಯ ಮಗುವಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದಲ್ಲಿ ಸಾವಿಗೀಡಾದ ನಶಿದಾಗೆ 10 ವರ್ಷದ ಹಾಗೂ ನಾಲ್ಕೂವರೆ ವರ್ಷದ ಇಬ್ಬರು ಮಕ್ಕಳಿದ್ದು, ಇಡೀ ಕುಟುಂಬ ಘಟನೆಯಿಂದ ತತ್ತರಿಸಿ ಹೋಗಿದೆ. ನನ್ನ ಪತ್ನಿ ಸಾವಿನ ಬಳಿಕ ಇನ್ನುಳಿದ ಇಬ್ಬರೂ ಮಕ್ಕಳು ಆಘಾತಕ್ಕೆ ಒಳಗಾಗಿದ್ದಾರೆ. ಚಿಕ್ಕಮಗಳು ತನ್ನ ತಾಯಿ ಎಲ್ಲಿ ಎಂದು ನನ್ನನ್ನು ಪದೇ ಪದೇ ಕೇಳುತ್ತಿದ್ದಾಳೆ. ಅವಳಿಗೆ ಸಾವು ಏನೆಂಬುದೇ ಗೊತ್ತಿಲ್ಲ. ನಾನು ಮಕ್ಕಳಿಗೆ ಏನೆಂದು ಹೇಳಲಿ ಎಂದು ಕಣ್ಣೀರು ಹಾಕುತ್ತಿದ್ದಾರೆ ಮೃತಳ ಪತಿ ತಹಾ.

ಬಾಗಿಲು ಸರಿಯಾಗಿ ಹಾಕದೇ ಬಸ್ ಚಾಲನೆ ಮಾಡುತ್ತಿದ್ದ ಬಸ್ ಚಾಲಕ ಮತ್ತು ಬಸ್ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇನ್ನಾರಿಗೂ ಇಂತಹ ಅನ್ಯಾಯ ಆಗಬಾರದು ಎಂದು ತಹಾ ಆಗ್ರಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After a five days of accident a pregnant woman dies who was fell from a bus in Kottayam of Kerala. The lady travelling in a private bus in December 29. During travelling she was standing near front of door because nobody offered her a seat.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ