'ಜತೆಗೆ ಕುಣಿಯಲ್ಲ' ಎಂದ ನೃತ್ಯಗಾರ್ತಿಯನ್ನು ಆತ ಕೊಂದೇ ಬಿಟ್ಟ!

Posted By:
Subscribe to Oneindia Kannada

ಭಟಿಂಡಾ, ಡಿಸೆಂಬರ್ 04: ಮದುವೆ ಸಮಾರಂಭದಲ್ಲಿ ಸಂಭ್ರಮದ ನೃತ್ಯದಲ್ಲಿ ಪಾಲ್ಗೊಂಡಿದ್ದ ಯುವತಿಯೊಬ್ಬಳು ದಾರುಣವಾಗಿ ವೇದಿಕೆಯಲ್ಲೇ ಹತ್ಯೆಗೀಡಾದ ವರದಿ ಭಟಿಂಡಾದಲ್ಲಿ ವರದಿಯಾಗಿದೆ.

ಮೌರ್ ಮಂಡಿ ಪಟ್ಟಣದ ಆಶೀರ್ವಾದ ಪ್ಯಾಲೇಸ್ ನಲ್ಲಿ ಕುಣಿಯಲು ಹೋಗಿದ್ದ ಕುಲ್ವಿಂದರ್ ಕೌರ್ ಅಲಿಯಾಸ್ ಜಾನು ಮೃತ ಮಹಿಳೆ. ಶನಿವಾರ ರಾತ್ರಿ 11.15 ರ ಸುಮಾರಿಗೆ ಈ ಘಟನೆ ನಡೆದಿದೆ.

Pregnant dancer killed at a marriage in Bathinda

ವರನ ಸೋದರ ಹಾಗೂ ಆತನ ಗೆಳೆಯರಾದ ಬಿಲ್ಲಾ, ದೀಪಕ್ ಎಂಬುವರು ಕುಡಿದ ಮತ್ತಿನಲ್ಲಿ ವೇದಿಕೆ ಬಳಿ ನಿಂತು ಕುಣಿಯುತ್ತಿದ್ದವರನ್ನು ರೇಗಿಸುತ್ತಿದ್ದರು.

ಪಾಯಿಂಟ್ 21 ಬೋರ್ ಗನ್ ಹಿಡಿದುಕೊಂಡು ಜತೆಗೆ ಕುಣಿಯುವಂತೆ ಆಗ್ರಹಿಸಿದ ಬಿಲ್ಲಾನ ಮನವಿಯನ್ನು ಕುಲ್ವಿಂದರ್ ತಿರಸ್ಕರಿದ್ದಳು ಎನ್ನಲಾಗಿದೆ ಇದರಿಂದ ಕುಪಿತಗೊಂಡ ಬಿಲ್ಲಾ ಗುಂಡು ಹಾರಿಸಿದ್ದಾನೆ. ಹೊಟ್ಟೆ, ತಲೆಗೆ ಗುಂಡು ತಗುಲಿ, ಕುಲ್ವಿಂದರ್ ಮೃತಪಟ್ಟಿದ್ದಾರೆ.
ಬಿಲ್ಲಾ ಸೇರಿದಂತೆ ನಾಲ್ವರ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳು ನಾಪತ್ತೆಯಾಗಿದ್ದಾರೆ. 22 ವರ್ಷ ವಯಸ್ಸಿನ ಕುಲ್ವಿಂದರ್ ಅವರು ವಿವಾಹಿತರಾಗಿದ್ದು, ಎರಡು ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದು ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 25-year-old pregnant dancer was shot dead in a celebratory firing during a marriage ceremony in Maur Mandi town on Saturday.
Please Wait while comments are loading...