ನಿಷ್ಪ್ರಯೋಜಕ ಚರ್ಚೆ, ವಿಶ್ಲೇಷಣೆಗಳಿಗೆ ಸಮಯ ಹಾಳು ಮಾಡಬೇಡಿ: ಪ್ರಶಾಂತ್ ಕಿಶೋರ್

ನಿಷ್ಪ್ರಯೋಜಕ ಚರ್ಚೆಗಳು ಮತ್ತು ವಿಶ್ಲೇಷಣೆಗಳಿಗೆ ಸಮಯವನ್ನು ವ್ಯರ್ಥ ಮಾಡಬೇಡಿ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಶನಿವಾರ ಅನೇಕ ಪತ್ರಕರ್ತರು ಮತ್ತು ಕೆಲವು ನಾಯಕರ ವಿರುದ್ಧ ಕೆಂಡಕಾರಿದ್ದಾರೆ.

ದೇಶದಲ್ಲಿ ಏಳು ಹಂತದ ಚುನಾವಣೆಗಳು ಮುಗಿದಿದ್ದು, ಮತದಾನೋತ್ತರ ಸಮೀಕ್ಷೆಯ ಫಲಿತಾಂಶ ಸಹ ಬಂದಿದೆ. ವಿವಿಧ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸುಲಭವಾಗಿ ಸರ್ಕಾರ ರಚಿಸಲಿದೆ ಎಂದು ಹೇಳಿದೆ. ಈ ಬೆನ್ನಲ್ಲೆ ಪ್ರಶಾಂತ್‌ ಕಿಶೋರ್‌ ಸಾಮಾಜಿಕ ತಾಣದಲ್ಲಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

Prashant Kishor Responds to Exit Polls Predicting Landslide Victory for NDA

ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗವಾಗುತ್ತಿದ್ದಂತೆ ಪ್ರಶಾಂತ್ ಕಿಶೋರ್‌; ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ನಿಷ್ಪ್ರಯೋಜಕ ಚರ್ಚೆಗಳು ಮತ್ತು ವಿಶ್ಲೇಷಣೆಗಳಿಗೆ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ತಿಳಿಸಿದ್ದಾರೆ.

'ಮುಂದಿನ ಬಾರಿ ಚುನಾವಣೆ ಮತ್ತು ರಾಜಕೀಯದ ವಿಷಯ ಬಂದಾಗ, ಸೋಶಿಯಲ್ ಮೀಡಿಯಾದಲ್ಲಿ ನಕಲಿ ಪತ್ರಕರ್ತರು, ಮತಾಂಧ ರಾಜಕಾರಣಿಗಳು ಮತ್ತು ಸ್ವಯಂ ಘೋಷಿತ ತಜ್ಞರ ಬಗ್ಗೆ ಸುಮ್ಮನೆ ಮಾತನಾಡಲು ಮತ್ತು ವಿಶ್ಲೇಷಣೆಗೆ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು. ಎಕ್ಸಿಟ್ ಪೋಲ್ ನಂತರ ಪ್ರಶಾಂತ್ ಕಿಶೋರ್ ಬರೆದುಕೊಂಡಿದ್ದಾರೆ.

ಮೊದಲೇ ಭವಿಷ್ಯ ನುಡಿದಿದ್ದ ಪ್ರಶಾಂತ್

ಚುನಾವಣೋತ್ತರ ಸಮೀಕ್ಷೆಗಳು ಹೊರ ಬೀಳುವ ಮುನ್ನವೇ ಪ್ರಶಾಂತ್ ಕಿಶೋರ್‌ ಅವರು ಈ ಬಗ್ಗೆ ಭವಿಷ್ಯ ನುಡಿದಿದ್ದರು. ಅಲ್ಲದೆ ಈ ಬಾರಿ ಬಿಜೆಪಿ ಕಳೆದ ಸಾಲಿನ ಸಾಧನೆಯನ್ನು ಮಾಡಬಹುದು. ಅಲ್ಲದೆ ಅದರ ಆಸುಪಾಸಿನ ಸಾಧನೆ ಮಾಡಬಹುದು ಎಂದು ತಿಳಿಸಿದ್ದರು. ಇಷ್ಟೇ ಅಲ್ಲದೆ ಈ ಬಾರಿ ಬಿಜೆಪಿ ಪಶ್ಚಿಮ ಬಂಗಾಳ, ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲೂ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ಶ್ರಮಿಸಲಿದೆ ಎಂದು ತಿಳಿಸಿದ್ದರು.

ಈ ಬಾರಿ ಬಿಜೆಪಿ ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ನೆಲೆ ಕಂಡುಕೊಳ್ಳಲಿದೆ. ಕರ್ನಾಟಕದಲ್ಲೂ ಬಿಜೆಪಿ ಪ್ರದರ್ಶನ ಸ್ಥಿರವಾಗಿರಲಿದೆ ಎಂದೇ ಪ್ರಶಾಂತ್ ಹೇಳಿದ್ದರು.

ಹಿಂದೆ ಹೇಳಿದ್ದೇನು?

ಕೇಂದ್ರದಲ್ಲಿ ಬಿಜೆಪಿ ಸರ್ಕಾರಕ್ಕೆ ಪರ್ಯಾಯವಾಗಿ ಬೇರೆ ಯಾವುದೇ ಪಕ್ಷ ಇಲ್ಲ. ಇನ್ನು ಬಿಜೆಪಿ ಗಮನಾರ್ಹ ಸಾಧನೆಯನ್ನು ಸಹ ಮಾಡಿಲ್ಲ. ಬಿಜೆಪಿ ತನ್ನ ಹಿಂದಿನ ಪ್ರದರ್ಶನವನ್ನು 303 ಅನ್ನು ಉಳಿಸಿಕೊಳ್ಳಬಹುದು ಅಥವಾ ಅದರಲ್ಲಿ ಸ್ವಲ್ಪ ಹೆಚ್ಚಳ ಕಾಣಬಹುದು ಎಂದಿದ್ದರು.

ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹಿಂದೆ ಎನ್‌ಡಿಟಿವಿ ಜೊತೆಗಿನ ಸಂದರ್ಶನದಲ್ಲಿ ತಿಳಿಸಿದ್ದರು.

ಪ್ರಸ್ತುತ ಸರ್ಕಾರ ಮತ್ತು ಅದರ ನಾಯಕನ ವಿರುದ್ಧ ಕೋಪಗೊಂಡರೆ, ಪರ್ಯಾಯವಿಲ್ಲದಿದ್ದರೂ ಜನರು ಅವರಿಗೆ ಮತ ಹಾಕಲು ನಿರ್ಧರಿಸುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಹೆದರ ಬೇಕು ಎಂದು ತಿಳಿಸಿದ್ದರು.

ಚುನಾವಣೋತ್ತರ ಸಮೀಕ್ಷೆಯಲ್ಲಂತೂ ಪ್ರಶಾಂತ್ ಕಿಶೋರ್ ಅವರ ಅನುಭವದ ಹೇಳಿಕೆ ನಿಜವಾಗಿದೆ. ಆದರೆ ಇದೇ ಅಂಕಿ ಅಂಶ ನಿಜವಾಗತ್ತದಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+