ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಕಾಂಗ್ರೆಸ್ ಸೇರುವ ಆಹ್ವಾನ ತಿರಸ್ಕರಿಸಿದ ಪ್ರಶಾಂತ್ ಕಿಶೋರ್

|
Google Oneindia Kannada News

ನವದೆಹಲಿ, ಏಪ್ರಿಲ್ 26; ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ಹಲವಾರು ದಿನಗಳಿಂದ ಹಬ್ಬಿತ್ತು. ಆದರೆ ಪಕ್ಷ ನೀಡಿದ್ದ ಆಹ್ವಾನವನ್ನು ಅವರು ತಿರಸ್ಕಾರ ಮಾಡಿದ್ದಾರೆ.

ಮಂಗಳವಾರ ಎಐಸಿಸಿ ವಕ್ತಾರ ರಂದೀಪ್ ಸುರ್ಜೇವಾಲ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಪಕ್ಷ ಸೇರುವಂತೆ ನೀಡಿದ್ದ ಆಹ್ವಾನವನ್ನು ಪ್ರಶಾಂತ ಕಿಶೋರ್ ತಿರಸ್ಕಾರ ಮಾಡಿದ್ದಾರೆ. ಅವರು ಪಕ್ಷ ಸಂಘಟನೆಗೆ ನೀಡಿರುವ ಸಲಹೆಗಳನ್ನು ನಾವು ಶ್ಲಾಘಿಸುತ್ತೇವೆ ಎಂದು ಹೇಳಿದ್ದಾರೆ.

Breaking; ಪ್ರಶಾಂತ್ ಕಿಶೋರ್‌ ಸೇರ್ಪಡೆ, ಸೋನಿಯಾ ಕೈ ಸೇರಿದ ವರದಿ Breaking; ಪ್ರಶಾಂತ್ ಕಿಶೋರ್‌ ಸೇರ್ಪಡೆ, ಸೋನಿಯಾ ಕೈ ಸೇರಿದ ವರದಿ

Prashant Kishor declined the offer of congress to join the party

ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷ ಸೇರುವ ಕುರಿತು ವರದಿ ನೀಡಲು ಪಕ್ಷ ರಚನೆ ಮಾಡಿದ್ದ ಸಮಿತಿ ಸೋಮವಾರ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಈ ಕುರಿತು ವರದಿಯನ್ನು ನೀಡಿತ್ತು. ಆದರೆ ಈಗ ಪ್ರಶಾಂತ್ ಕಿಶೋರ್‌ ಅವರೇ ಪಕ್ಷದ ಆಹ್ವಾನ ತಿರಸ್ಕಾರ ಮಾಡಿದ್ದಾರೆ.

2024ರ ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷದಲ್ಲಿ ಆಗಬೇಕಿರುವ ಬದಲಾವಣೆ ಬಗ್ಗೆ ಪ್ರಶಾಂತ್ ಕಿಶೋರ್ ಪಕ್ಷಕ್ಕೆ ಹಲವು ಸಲಹೆಗಳನ್ನು ನೀಡಿದ್ದರು. ಸೋನಿಯಾ ಗಾಂಧಿ ಜೊತೆ ಸಭೆಯನ್ನು ಸಹ ನಡೆಸಿದ್ದರು. ಪಕ್ಷದ ಹಿರಿಯ ನಾಯಕರ ಜೊತೆ ಸರಣಿ ಸಭೆಗಳನ್ನು ನಡೆಸಿ, ಪ್ರಮುಖ ಬದಲಾವಣೆಗಳನ್ನು ಮಾಡುವ ಕುರಿತು ವಿವರಣೆಗಳನ್ನು ನೀಡಿದ್ದರು.

Breaking; ಪ್ರಶಾಂತ್ ಕಿಶೋರ್ ಕಾಂಗ್ರೆಸ್‌ ಸೇರಲು ವಿರೋಧವೇ ಇಲ್ಲ! Breaking; ಪ್ರಶಾಂತ್ ಕಿಶೋರ್ ಕಾಂಗ್ರೆಸ್‌ ಸೇರಲು ವಿರೋಧವೇ ಇಲ್ಲ!

ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪ್ರಶಾಂತ್ ಕಿಶೋರ್ ಪಕ್ಷ ಸೇರಲು ಯಾರ ವಿರೋಧವೂ ಇಲ್ಲ ಎಂದು ಹೇಳಿದ್ದರು. ಅಲ್ಲದೇ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಶಾಂತ್ ಕಿಶೋರ್ ಸೇರ್ಪಡೆಗೆ ಒಪ್ಪಿಗೆ ನೀಡಿದ್ದರು.

2024ರ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಪ್ರಶಾಂತ್ ಕಿಶೋರ್ ಸಹ ಪಕ್ಷ ಸೇರಲಿದ್ದಾರೆ ಎಂದು ಅಂದಾಜಿಸಲಾಗಿತ್ತು.

English summary
AICC spokesperson Randeep Surjewala tweeted that Prashant Kishor will not join Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X