ಕನ್ನಯ್ಯಾ ತಲೆಗೆ ಇನಾಮು ಘೋಷಿಸಿದ್ದವ ಪೊಲೀಸ್ ಅತಿಥಿ

Subscribe to Oneindia Kannada

ನವದೆಹಲಿ, ಮಾರ್ಚ್, 07: "ದೇಶದ್ರೋಹದ ಆರೋಪದ ಮೇಲೆ ಬಂಧಿತನಾಗಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಜವಾಹರಲಾಲ್ ನೆಹರು ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ನನ್ನು ಶೂಟ್ ಮಾಡಿ ಕೊಲ್ಲುವವರಿಗೆ 11 ಲಕ್ಷ ರು ಬಹುಮಾನ ನೀಡುತ್ತೇವೆ ಎಂದಿದ್ದವನನ್ನು ದೆಹಲಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಪೋಸ್ಟರ್ ನಲ್ಲಿ ಹೆಸರು ಕಾಣಿಸಿಕೊಂಡಿದ್ದ ಪೂರ್ವಾಂಚಲ ಸೇನೆ ಅಧ್ಯಕ್ಷ ಆದರ್ಶ ಶರ್ಮಾ ನನ್ನು ದೆಹಲಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. "ದೇಶದ್ರೋಹಿ ಕನ್ಹಯ್ಯಾ ಕುಮಾರ್‌ನನ್ನು ಶೂಟ್‌ ಮಾಡಿ ಕೊಲ್ಲುವ ಯಾರಿಗೇ ಆದರೂ ಪೂರ್ವಾಂಚಲ ಸೇನೆ 11 ಲಕ್ಷ ರೂ. ಇನಾಮು ನೀಡಲಿದೆ' ಎಂದು ಹಿಂದಿಯಲ್ಲಿ ಬರೆದಿದ್ದ ಪೋಸ್ಟರ್ ಗಳು ದೆಹಲಿಯ ತುಂಬೆಲ್ಲ ಕಂಡುಬಂದಿದ್ದವು.[ಕನ್ಹಯ್ಯನಿಗೆ ಸವಾಲೆಸೆದ 15 ವರ್ಷದ ಬಾಲಕಿ ಝಾನ್ವಿ]

jnu

ಬ್ಯಾಂಕ್ ಖಾತೆಯಲ್ಲಿ 150 ರು.: ದಿಲ್ಲಿಯ ರೋಹಿಣಿ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಆದರ್ಶ್‌ ಶರ್ಮಾ ಬ್ಯಾಂಕ್ ಖಾತೆಯಲ್ಲಿ ಇರುವುದು ಕೇವಲ 150 ರೂ.! ಆದರೆ 11 ಲಕ್ಷದ ಇನಾಮು ಘೋಷಿಸಿದ್ದ. ಸ್ನೇಹಿತರು ಮತ್ತು ಕುಟುಂವದವರ ಸಂಪರ್ಕಕ್ಕೆ ಸಿಗದೆ ತತೆ ಮರೆಸಿಕೊಂಡಿದ್ದವನನ್ನು ದೆಹಲಿ ಪೊಲಲೀಸರು ಅಂತಿಮವಾಗಿ ಬಂಧಿಸಿ ಕರೆತಂದಿದ್ದಾರೆ.[ಕನ್ಹಯ್ಯಾ ಕುಮಾರ್‌ನನ್ನು ಶೂಟ್ ಮಾಡಿದರೆ 11 ಲಕ್ಷ ನಗದು!]

ಬಿಜೆಪಿಯಿಂದ ಉಚ್ಚಾಟನೆ:
ಕನ್ಹಯ್ಯಾ ಕುಮಾರ್ ನಾಲಗೆ ಕತ್ತರಿಸುವವರಿಗೆ 5 ಲಕ್ಷ ನೀಡುತ್ತೇನೆ ಎಂದು ಹೇಳಿದ್ದ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ನಾಯಕ ಕುಲದೀಪ್ ವರ್ಶ್ನೆ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Delhi Police on Monday, March 7 questioned Adarsh Sharma, who claimed to be the president of 'Purvanchal Sena', in connection with the case registered over sticking posters in the city announcing a reward of Rs 11 lakh for anyone who "shoots dead" JNUSU president Kanhaiya Kumar. Sharma was questioned at a police station in New Delhi district, a senior police official confirmed without divulging further details.
Please Wait while comments are loading...