ಗುರುಗ್ರಾಮ್ ಕಟ್ಟಡ ಕುಸಿತದಲ್ಲಿ ಒಬ್ಬ ಮಹಿಳೆ ಸಾವು, ಇಬ್ಬರು ಸಿಲುಕಿರುವ ಶಂಕೆ
ಗುರುಗ್ರಾಮ್, ಫೆಬ್ರವರಿ 11: ಗುರ್‌ಗಾಂವ್‌ನ ಸೆಕ್ಟರ್ 109 ರಲ್ಲಿನ ವಸತಿ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, ಕಟ್ಟಡದಲ್ಲಿ ಸಿಲುಕಿದ ಉಳಿದ ಇಬ್ಬರ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಒಟ್ಟು 3 ಮಂದಿ ಸಿಕ್ಕಿಬಿದ್ದಿದ್ದು, 2ನೇ ಮಹಡಿಯಿಂದ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ನಾವು ಆಕೆಯ ದೇಹವನ್ನು ಹೊರತೆಗೆದಿದ್ದೇವೆ. ಉಳಿದ ಇಬ್ಬರಲ್ಲಿ- 1ನೇ ಮಹಡಿಯಲ್ಲಿರುವ ಮಹಿಳೆ ಇನ್ನೂ ಪತ್ತೆಯಾಗಿಲ್ಲ. ಅದೇ ಮಹಡಿಯಲ್ಲಿರುವ ವ್ಯಕ್ತಿ ಕ್ಕಿಬಿದ್ದಿದ್ದು, ಅವನಿಗೆ ಪ್ರಜ್ಞೆ ಇದೆ ಎಂಬುದಾಗಿ ಡೆಪ್ಯುಟಿ ಕಮಿಷನರ್ ನಿಶಾಂತ್ ಕುಮಾರ್ ಯಾದವ್ ತಿಳಿಸಿದ್ದಾರೆ.
18 ಮಹಡಿಗಳ ಚಿಂಟೆಲ್ಸ್ ಪ್ಯಾರಾಡಿಸೊ ವಸತಿ ಸಂಕೀರ್ಣದ ಅಪಾರ್ಟ್‌ಮೆಂಟ್ ಲಿವಿಂಗ್ ರೂಮ್ ಮೊದಲು ಕುಸಿದಿದೆ. "ಆರನೇ ಮಹಡಿಯಿಂದ ಮೊದಲ ಮಹಡಿಯ ಡ್ರಾಯಿಂಗ್ ರೂಮ್ ಕುಸಿದಿದ್ದು, ಈ ಘಟನೆಯು ಎತ್ತರದ "ಟವರ್ ಡಿ" ನಲ್ಲಿ ಸಂಭವಿಸಿದೆ ಎಂದು ಕಟ್ಟಡದ ನಿವಾಸಿ ಕೌಶಲ್ ಕುಮಾರ್ ತಿಳಿಸಿದ್ದಾರೆ. ಆರು ಫ್ಲಾಟ್ ಹೊಂದಿರುವ ಮಹಡಿಯಲ್ಲಿ ನಾಲ್ಕು ಕುಟುಂಬಗಳು ವಾಸಿಸುತ್ತಿದ್ದವು ಎಂದು ಸ್ಥಳೀಯ ಕುಮಾರ್ ಹೇಳಿದರು.

ಇಬ್ಬರು ಸಿಲುಕಿರುವ ಶಂಕೆ:
ಗುರುಗ್ರಾಮ್‌ನಲ್ಲಿ ಕಟ್ಟಡ ನಿರ್ಮಾಣ ವಸ್ತುಗಳ ಗುಣಮಟ್ಟದ ಮೇಲೆ ಬಿಲ್ಡರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ವಸ್ತುವಿನ ಗುಣಮಟ್ಟದಲ್ಲಿನ ಸಮಸ್ಯೆಯ ಬಗ್ಗೆ ತನಿಖೆ ನಡೆಸಬೇಕು. ನಾವು ಜೀವಗಳನ್ನು ಉಳಿಸಲು ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ನಮ್ಮ ಗಮನವನ್ನು ಕೇಂದ್ರೀಕರಿಸುತ್ತಿದ್ದೇವೆ. ಭಾಗಶಃ ಸಿಕ್ಕಿಬಿದ್ದ ವ್ಯಕ್ತಿಯನ್ನು ನಾನು ಭೇಟಿಯಾಗಿದ್ದು, ಅವನು ಚೆನ್ನಾಗಿಯೇ ಇದ್ದಾನೆ; 2 ಮಂದಿ ಈಗ ಸಿಕ್ಕಿಬಿದ್ದಿದ್ದಾರೆ: ಎಂದು ಬಾದಶಹಪುರ ಶಾಸಕ ರಾಕೇಶ್ ತಿಳಿಸಿದ್ದಾರೆ.
ಮನೋಹರ್ ಲಾಲ್ ಖಟ್ಟರ್ ಟ್ವೀಟ್:
"ಗುರುಗ್ರಾಮ್‌ನ ಪ್ಯಾರಾಡಿಸೊ ವಸತಿ ಸಂಕೀರ್ಣದಲ್ಲಿ ಅಪಾರ್ಟ್‌ಮೆಂಟ್ ಮೇಲ್ಛಾವಣಿ ಕುಸಿತ ದುರದೃಷ್ಟಕರ. ಆಡಳಿತ ಅಧಿಕಾರಿಗಳು, ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ನಿರತವಾಗಿವೆ. ನಾನು ವೈಯಕ್ತಿಕವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ ಮತ್ತು ಪ್ರತಿಯೊಬ್ಬರ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಮನೋಹರ್ ಲಾಲ್ ಖಟ್ಟರ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications