ಅಡೆತಡೆ ದಾಟಿ ಸುರಕ್ಷಿತವಾಗಿ ದೇಗುಲ ತಲುಪಿದ ಆಂಜನೇಯ
ಬೆಂಗಳೂರು, ಏಪ್ರಿಲ್ 10: ಕೋಲಾರದ ನಗರಸಾಪುರದಿಂದ ಸಾಗಿಸುತ್ತಿದ್ದ 62 ಅಡಿ ಉದ್ದದ 750 ಟನ್ ತೂಕದ ವೀರಾಂಜನೇಯ ಸೋಮವಾರ ಯಾವ ಅಡೆತಡೆಗಳಿಲ್ಲದೆ ದಾಟಿ ಸುರಕ್ಷಿತವಾಗಿ ನಗರದ ಕಾಚರಕನಹಳ್ಳಿಯ ಶ್ರೀಕೋದಂಡರಾಮ ದೇವಸ್ಥಾನದ ಆವರಣ ತಲುಪಿತು.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹೊಸಕೋಟೆ ಬಳಿಯೇ ಪೊಲೀಸರು ವಿಗ್ರಹ ಸಾಗಿಸುತ್ತಿದ್ದ ಟ್ರಕ್ ತಡೆದಿದ್ದರು.ಇದಕ್ಕೆ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ವಿಗ್ರಹ ಸಾಗಿಸುವ ಕಾರ್ಯ ಮುಂದುವರೆದಿತ್ತು. ಸೋಮವಾರ ಬೆಳಗ್ಗೆ ರಿಂಗ್ ರಸ್ತೆಯ ಹೆಣ್ಣೂರು ಜಂಕ್ಷನ್ ನ ಕಾಚರಕನಹಳ್ಳಿ ಮುಖ್ಯ ರಸ್ತೆಯಿಂದ ದೇವಸ್ಥಾನದವರೆಗಿನ ಸುಮಾರು 500 ಮೀಟರ್ ದೂರ ಕ್ರಮಿಸಲು ಅರ್ಧ ದಿನ ಹಿಡಿಯಿತು.
ವಿದ್ಯುತ್ ಕಂಬ, ಮರಗಳು, ಸೇತುವೆಗಳು ವಿಗ್ರಹ ಸಾಗಣೆ ಟ್ರಕ್ ಸಂಚಾರಕ್ಕೆ ಅಡ್ಡಿಯಾಯಿತು. ಇದರ ನಡುವೆಯೂ ಬಹಳ ಎಚ್ಚರಿಕೆಯಿಂದ ವಿಗ್ರಹವನ್ನು ಸುರಕ್ಷಿತವಾಗಿ ದೇವಾಲಯದ ಆವರಣಕ್ಕೆ ತಲುಪಿಸಲಾಯಿತು. ವಿಗ್ರಹ ಸಾಗಿಸುವ ಮಾರ್ಗದ ಹೆಣ್ಣೂರು ರಸ್ತೆಯ ರೈಲ್ವೆ ಸಥುವೆ ಕೆಳಗಡೆ ಟ್ರಕ್ ಸಂಚರಿಸಲು ಅಡ್ಡಿಯಾಗಿತ್ತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಹೀಗಾಗಿ ಸೇತುವೆ ಕಳೆಗಡೆಯ ರಸ್ತೆಯನ್ನು ಮೂರ್ನಾಲ್ಕು ಅಡಿಯಷ್ಟು ಅಗೆದು ಟ್ರಕ್ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಅಂತೆಯೇ ಅದೇ ಮಾರ್ಗದಲ್ಲಿ ರಸ್ತೆ ವಿಭಜಕಗಳನ್ನು ತೆರವು ಮಾಡಲಾಯಿತು. ಜತೆಗೆ ವಿದ್ಯುತ್ ಕಂಬ ಹಾಗೂ ಮರವೊಂದನ್ನು ತೆರವುಗೊಳಿಸಲಾಯಿತು. ಈ ವೇಳೆ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಯಿತು.

ದೇವರ ವಿಗ್ರಹ ಸಾಗಣೆಗೂ ತಟ್ಟಿದ ನೀತಿ ಸಂಹಿತೆ
ರಾಜ್ಯದೆಲ್ಲೆಡೆ ಈಗ ಚುನಾವಣಾ ಕಾವು ಏರುತ್ತಿದೆ. ನೀತಿ ಸಂಹಿತೆಯ ಬಿಸಿ ಎಲ್ಲೆಡೆ ಹರಡಿದೆ. ವಿಶೇಷವೆಂದರೆ ಕೇವಲ ರಾಜಕಾರಣಿಗಳಿಗೆ, ಮತದಾರರಿಗೆ ಮಾತ್ರ ಈ ನೀತಿ ಸಂಹಿತೆ ಅಡ್ಡಿಯಾಗಿಲ್ಲ, ಹನುಮಂತನಿಗೂ ಇದರ ಶಾಖ ತಾಗಿದೆ, ಬೆಂಗಳೂರಿನ ಎಚ್‌ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆಗಾಗಿ ಸಿದ್ದವಾಗಿದ್ದ 62 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹ ಸಾಗಣೆಗೂ ನೀತಿ ಸಂಹಿತೆ ಅಡ್ಡಿಯಾಗಿತ್ತು. ಬೆಂಗಳೂರಿನಿಂದ 35 ಕಿಮೀ ದೂರದ ಹೊಸಕೋಟೆ ಸಮೀಪ ಚುನಾವಣಾಧಿಕಾರಿಗಳು ವಿಗ್ರಹ ಸಾಗಣೆಯಲ್ಲಿ ತೊಡಗಿದ್ದ ಟ್ರಾಲಿಯನ್ನು ತಡೆದಿದ್ದರು.

ಹಂಪ್ ಬ್ಯಾಕ್ ತಿಮಿಂಗಿಲ
ಅರ್ಜೆಂಟಿನಾದ ಮರ್ ಡೆಲ್ ಪ್ಲಾಟಾ ಸಮುದ್ರದಲ್ಲಿ ಅರ್ಜೆಂಟಿನಾ ನಾವಲ್ ಪ್ರಿಫೆಕ್ಚರ್ ಹಾಗೂ ಸ್ವಯಂಸೇವಕರು ತಿಮಿಂಗಿಲ ರಕ್ಷಣಾ ಕಾರ್ಯದಲ್ಲಿ ತೊಡಗಿರುವುದು.

ರಾಜಾಪಾರ್ಕ್ ಫ್ಯಾಕ್ಟರಿ ಅಗ್ನಿ ದುರಂತದ ಬಳಿಕ ಕಂಡಿದ್ದು ಹೀಗೆ
ನವದೆಹಲಿಯ ಸುಲ್ತಾನ್‌ಪುರಿಯಲ್ಲಿರುವ ರಾಜಾ ಪಾರ್ಕ್ ಫ್ಯಾಕ್ಟರಿಯಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿದೆ.ಬೆಳಗಿನ ಜಾವ 6.35ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ನಂತರ ಅಗ್ನಿ ಶಾಮಕ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ದುರಂತ ಕುರಿತು ಮಾಹಿತಿ ಕಲೆಹಾಕುತ್ತಿರುವುದನ್ನು ಈ ಚಿತ್ರದಲ್ಲಿ ನೋಡಬಹುದು.

ರಾಯಲ್ ರಷ್ಯನ್ ಬ್ಯಾಲೆಟ್ ಗ್ರೂಪ್ ನಿಂದ್ ಸ್ವಾನ್ ಲೇಕ್
ಏಪ್ರಿಲ್ 6ರಿಂದ 9ರವರೆಗೆ ಅಹಮದಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಯಲ್ ರಷ್ಯನ್ ಬ್ಯಾಲೆಟ್ ಗ್ರೂಪ್ ಕಲಾವಿದರು ಸ್ವಾನ್ ಲೇಕ್ ನೃತ್ಯವನ್ನು ಪ್ರದರ್ಶಿಸಿಸಿದರು. ಅದರಲ್ಲಿ 45ಕ್ಕೂ ಹೆಚ್ಚು ರಷ್ಯನ್ ಕಲಾವಿದರು ಪಾಲ್ಗೊಂಡಿದ್ದರು. ಕಲಾವಿದರು ಈ ನೃತ್ಯಕ್ಕಾಗಿ ವಾರಪೂರ್ತಿ 8ರಿಂದ 10 ಗಂಟೆಗಳ ಕಾಲ ಅಭ್ಯಾಸ ನಡೆಸಿದ್ದರು.
-
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು?












Click it and Unblock the Notifications