OROP: ಮಾಜಿ ಸೈನಿಕನ ಶವದ ಮುಂದೆ ಹೀಗೊಂದು ಹೊಲಸು ರಾಜಕೀಯ

Posted By:
Subscribe to Oneindia Kannada

ಸರ್ಜಿಕಲ್ ದಾಳಿಯ ಸತ್ಯಾಸತ್ಯೆಯ ಬಗ್ಗೆ ರಾಜಕೀಯ ಮಾಡಿದ್ದಾಯಿತು, ಸಿಮಿ ಉಗ್ರರನ್ನು ಹೊಡೆದುರುಳಿಸಿದ್ದಕ್ಕೂ ತಕರಾರು ಮಾಡಿದ್ದಾಯಿತು. ಈಗ ಒನ್ ರ್ಯಾಂಕ್, ಒನ್ ಪೆನ್ಸನ್ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿರುವ ಮಾಜಿ ಸೈನಿಕನ ವಿಚಾರದಲ್ಲೂ ರಾಜಕೀಯ ತಾಂಡವಾಡುತ್ತಿದೆ.

ಪುಢಾರಿಗಳಿಗೆ ರಾಜಕೀಯ ಮಾಡಲು ಯಾವ ವಿಚಾರ ಸಿಕ್ಕಿದರೂ ಸಾಕು ಎನ್ನುವಂತಿರುವ ಪ್ರಸ್ತುತ ರಾಜಕೀಯ ಆಟದ ನಡುವೆ, OROP ಸ್ಕೀಂ ಜಾರಿ ವಿಳಂಬವಾಗುತ್ತಿರುವುದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸುದ್ದಿಯಾಗಿರುವ ಮಾಜಿ ಸೈನಿಕ ರಾಂ ಕಿಶನ್ ಗರೆವಾಲ್ ಅವರ ಬದುಕಿನ ಕೊನೇ ಕ್ಷಣದ ವಿಡಿಯೋವನ್ನು 'ಆಜ್ ತಕ್' ಬಿಡುಗಡೆ ಮಾಡಿದೆ. (ದೆಹಲಿ ಪೊಲೀಸರಿಗೆ ನಾಚಿಕೆ ಆಗಲ್ವಾ ಅಂದ ರಾಹುಲ್)

ಜೊತೆಗೆ ಮಾಜಿ ಸೈನಿಕನ ಸಾವಿನ ಸುತ್ತ ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಪರವಿರೋಧ ಚರ್ಚೆ ಯಥೇಚ್ಚವಾಗಿ ಸಾಗುತ್ತಿದೆ.

ರಾಹುಲ್ ಗಾಂಧಿ ಮೃತ ಮಾಜಿ ಸೈನಿಕನ ಕುಟುಂಬದ ಪರವಾಗಿ ಹೋರಾಟಕ್ಕೆ ಇಳಿದರೆ, ದೆಹಲಿ ಮುಖ್ಯಮಂತ್ರಿಗಳೂ ತಮ್ಮ ಹೋರಾಟದ ಬಗ್ಗೆ ಅವರೇ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ದೀಪಾವಳಿ ಹಬ್ಬದಂದು ಗಡಿಯಲ್ಲಿ ಯೋಧರ ಜೊತೆ ದೀಪಾವಳಿ ಹಬ್ಬ ಆಚರಿಸಿಕೊಂಡ ಪ್ರಧಾನಿ ಮೋದಿ, ಮೊದಲ ಹಂತದಲ್ಲಿ 5,200 ಕೋಟಿ ರೂಪಾಯಿ OROP ಸ್ಕೀಂಗೆ ಬಿಡುಗಡೆ ಮಾಡಲಾಗಿದೆ ಎನ್ನುವ ಅಧಿಕೃತ ಹೇಳಿಕೆ ನಡುವೆಯೂ ಮಾಜಿ ಸೈನಿಕರೊಬ್ಬರ ಆತ್ಮಹತ್ಯೆ ನಿಜಕ್ಕೂ ವಿಷಾದನೀಯ. ಮುಂದೆ ಓದಿ..

ಮನೋಹರ್ ಪರಿಕ್ಕರ್

ಮನೋಹರ್ ಪರಿಕ್ಕರ್

ಅಕ್ಟೋಬರ್ 31ರಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆದಿದ್ದ ಗರೆವಾಲ್, ನವೆಂಬರ್ 1ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ ಗರೆವಾಲ್ ಬರೆದಿರುವ ಪತ್ರ ರಕ್ಷಣಾ ಸಚಿವಾಲಯಕ್ಕೆ ತಲುಪಲೇ ಇಲ್ಲ.

ಪಿಂಚಣಿ ಫಲಾಲುಭವಿ

ಪಿಂಚಣಿ ಫಲಾಲುಭವಿ

ಗರೆವಾಲ್ ಪರಿಷ್ಕೃತ ಪಿಂಚಣಿ ಯೋಜನೆಯ ಫಲಾನುಭವಿ, ಆದರೆ ಲೆಕ್ಕಾಚಾರದ ತಪ್ಪಿನಿಂದಾಗಿ ಗ್ರೆವಾಲ್‌ ಅವರಿಗೆ ಆರನೇ ವೇತನ ಆಯೋಗದ ಶಿಫಾರಸು ಅನ್ವಯ ಸಿಗಬೇಕಾದಷ್ಟು ಹಣ ಸಿಕ್ಕಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

ಮೃತ ಸೈನಿಕನನ್ನು ಭೇಟಿ ಮಾಡಲು ಹೋದ ಕೇಜ್ರಿವಾಲ್ ಅವರನ್ನು ಬುಧವಾರ (ನ 2) ರಾತ್ರಿ ಲೇಡಿ ಹಾರ್ಡಿಂಜ್‌ ಆಸ್ಪತ್ರೆಯ ಹೊರ ಭಾಗದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡರು. ಅವರನ್ನು ಎರಡು ಬಾರಿ ತೆರಳುವಂತೆ ಸೂಚಿಸಿದರೂ ಕೇಜ್ರಿವಾಲ್ ಠಾಣೆಯಿಂದ ಹೋಗಲಿಲ್ಲ. ಮಧ್ಯರಾತ್ರಿ ವೇಳೆಗೆ ಅವರು ಠಾಣೆಯಿಂದ ತೆರಳಿದರು.

ವಿವಾದಕಾರಿ ಹೇಳಿಕೆ

ವಿವಾದಕಾರಿ ಹೇಳಿಕೆ

ಮೃತ ಮಾಜಿ ಸೈನಿಕ ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಗೊತ್ತಿಲ್ಲ, OROP ವಿಚಾರದಲ್ಲಿ ಎನ್ನಲಾಗುತ್ತಿದೆ. ಇವರ ಮಾನಸಿಕ ಸ್ಥಿತಿಗತಿ ಏನು ಎನ್ನುವುದು ಯಾರಿಗೂ ತಿಳಿದಿಲ್ಲ. ಎಲ್ಲಾ ವಿಚಾರದಲ್ಲೂ ರಾಜಕೀಯ ಮಾಡಬಾರದೆಂದು ಕೇಂದ್ರ ಸಚಿವ ವಿ ಕೆ ಸಿಂಗ್ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ

ಎನಾಗುತ್ತಿದೆ ದೇಶದಲ್ಲಿ? ಅವರದೇ ರಾಜ್ಯದ ಸಿಎಂ ಅವರನ್ನು ಅಲ್ಲಿನ ಪೊಲೀಸರೇ ಬಂಧಿಸುವುದೆಂದರೆ ಏನರ್ಥ - ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ.

ಹೀಗೊಂದು ಟ್ವೀಟ್

ಕೇಜ್ರಿವಾಲ್ ಮೃತ ಮಾಜಿ ಸೈನಿಕನ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಿದ್ದಾ? ಈ ಚಿತ್ರ ಬೇರೆಯೇ ಅರ್ಥ ನೀಡುತ್ತಿದೆ.

ರಾಹುಲ್ ಬಗ್ಗೆ ಒಂದು ಟ್ವೀಟ್

ಮೃತ ಸೈನಿಕನ ಕುಟುಂಬಕ್ಕೆ ರಾಹುಲ್ ಫೋನ್ ನಲ್ಲಿ ಸಾಂತ್ವನ ಹೇಳಿತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Politics over an alleged suicide by a 65-year old retired Subedar Ram Kishen Grewal from Haryana on One Rank One Pension (OROP) scheme.
Please Wait while comments are loading...