ನಾಚಿಕೆಗೆಟ್ಟ ರಾಜಕಾರಣಿಗಳ ಲಜ್ಜೆಗೆಟ್ಟ ಹೇಳಿಕೆಗಳು

ಹದಿನಾರನೇ ಲೋಕಸಭೆಗೆ ನಡೆಯುತ್ತಿರುವ ಚುನಾವಣೆಯ ಈ ಸಮಯದಲ್ಲಿ ರಾಜಕಾರಣಿಗಳ ಹೇಳಿಕೆಗಳು ಎಲ್ಲೆ ಮೀರುತ್ತಿವೆ. ಆರೋಪ, ಪ್ರತ್ಯಾರೋಪಗಳು ಕೀಳು ಮಟ್ಟಕ್ಕೆ ಇಳಿದು ಜನಸಾಮಾನ್ಯರಿಗೆ ರಾಜಕೀಯ ಎನ್ನುವುದು ವಾಕರಿಕೆ ಬರುವಂತಾಗಿದೆ.

ಇನ್ನೊಬ್ಬರ ತೇಜೋವಧೆಗೆ ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಬಳಸುತ್ತಿರುವ ಪದಗಳು ಭಯಾನಕವಾಗಿವೆ. ಇವರ ಹೇಳಿಕೆಗಳು ರಾಜಕೀಯವಾಗಿ ವಿರೋಧಿಗಳ ವೈಯಕ್ತಿಕ ಮತ್ತು ಖಾಸಗಿ ಬದುಕಿನ ಮಟ್ಟಕ್ಕೂ ಇಳಿಯುತ್ತಿರುವುದು ಖೇದಕರ.

ಒಬ್ಬರ ಮೇಲೊಬ್ಬರು ಕೆಸೆರೆರಚಾಟದಲ್ಲಿ ಅರ್ಥವಿಲ್ಲದ ಹೇಳಿಕೆಗಳನ್ನು ನೀಡಿ, ಎದುರಾಳಿ ಪಕ್ಷದವರನ್ನು ಅತ್ಯಂತ ತುಚ್ಚವಾಗಿ ನಿಂದಿಸುವುದು ರಾಜಕೀಯದಲ್ಲಿ ಸಾಮಾನ್ಯ ಎಂದಂತಾಗಿದೆ. (ಬಿಜೆಪಿ ಕ್ರಿಮಿನಲ್ ಗಳನ್ನೂ ಬಿಡಲ್ಲ : ನರೇಂದ್ರ ಮೋದಿ)

ಹಾಲಿ ಲೋಕಸಭಾ ಚುನಾವಣೆಯ ವೇಳೆ, ನಾವು ಆರಿಸಿ ಕಳುಹಿಸಿದ ಜನನಾಯಕರ ಬಾಯಿಯಿಂದ ಹೊರಬಿದ್ದ ಭಯಾನಕ, ಲಜ್ಜೆಗೆಟ್ಟ, ಶೀಲರಹಿತ ಹೇಳಿಕೆಗಳ ಸ್ಯಾಂಪಲ್..ಸ್ಲೈಡಿನಲ್ಲಿ..

ಜೈರಾಂ ರಮೇಶ್

ಜೈರಾಂ ರಮೇಶ್

ದೇಶದಲ್ಲಿ ಮೋದಿ ಅಲೆಯಿಲ್ಲ, ಬದಲಿಗೆ ಮೋದಿ ಎನ್ನುವ ವಿಷವಿದೆ. ಆ ವಿಷ ಕಕ್ಕದಂತೆ ನೋಡಿಕೊಳ್ಳಿ - ಧನಾಬಾದ್ ನಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾ ಸಚಿವ ಜೈರಾಂ ರಮೇಶ್.

ಬಿಜೆಪಿ ಶಾಸಕ

ಬಿಜೆಪಿ ಶಾಸಕ

ಸೋನಿಯಾ ಇಟಲಿ ದೇಶದವರು. ಸೋನಿಯಾ ಮತ್ತು ರಾಹುಲ್ ಗಾಂಧಿ ಇಬ್ಬರ ಬಟ್ಟೆ ಬಿಚ್ಚಿ ಇಟಲಿಗೆ ವಾಪಸ್ ಕಳುಹಿಸಬೇಕು - ಬಿಜೆಪಿ ಶಾಸಕ ಹೀರಾಲಾಲ್ ರೇಗಾರ್

ಬೇನಿ ಪ್ರಸಾದ್ ವರ್ಮಾ

ಬೇನಿ ಪ್ರಸಾದ್ ವರ್ಮಾ

ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ತನ್ನ 18ನೇ ವಯಸ್ಸಿನಲ್ಲಿ ಕೊಲೆ ಮಾಡಿ ಮನೆ ಓಡಿ ಹೋಗಿದ್ದವರು. ನರೇಂದ್ರ ಮೋದಿ ಒಬ್ಬ ಕೊಲೆಗಾರ - ಲಕ್ನೋದಲ್ಲಿ ಕಾಂಗ್ರೆಸ್ ಮುಖಂಡ ಬೇನಿ ಪ್ರಸಾದ್ ವರ್ಮಾ

ಸಮಾಜವಾದಿ ಪಕ್ಷ

ಸಮಾಜವಾದಿ ಪಕ್ಷ

ಮಾಯಾವತಿ ಮೋದಿಯ ತೊಡೆಯ ಮೇಲೆ ಕೂತಿದ್ದರು. ಆಕೆ ಮತ್ತೊಮ್ಮೆ ಅದೇ ರೀತಿ ಕೂರಲಿದ್ದಾರೆ. ಯಾಕೆಂದರೆ ಇಬ್ಬರಿಗೂ ಮದುವೆಯಾಗಲಿಲ್ಲ, ಹಾಗಾಗಿ - ನಹೀದ್ ಹಸನ್, ಸಮಾಜವಾದಿ ಪಕ್ಷದ ಅಭ್ಯರ್ಥಿ

ಕಾಂಗ್ರೆಸ್ ಅಭ್ಯರ್ಥಿ

ಕಾಂಗ್ರೆಸ್ ಅಭ್ಯರ್ಥಿ

ನಾವು ನರೇಂದ್ರ ಮೋದಿಯನ್ನು ಕತ್ತರಿಸಿ, ತುಂಡು ತುಂಡು ಮಾಡುತ್ತೇವೆ - ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್.

ಜಿ ಪರಮೇಶ್ವರ್

ಜಿ ಪರಮೇಶ್ವರ್

ಜೆಡಿಎಸ್ ಅಧಿಕಾರಕ್ಕೆ ಬರದಿದ್ದರೆ ವಿಷ ತೆಗೆದುಕೊಂಡು ಸಾಯುತ್ತೇನೆ ಎಂದು ಜೆಡಿಎಸ್ ಅಧ್ಯಕ್ಷ ದೇವೇಗೌಡರು ಹೇಳಿಕೆ ನೀಡಿದ್ದರು. ನಾನು ಅವರು ವಿಷ ಕುಡಿಯುವುದನ್ನೇ ಕಾಯುತ್ತಿದ್ದೇನೆ - ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್.

ಸಿದ್ದರಾಮಯ್ಯ

ಸಿದ್ದರಾಮಯ್ಯ

ಮೋದಿ ಒಬ್ಬ ನರಹಂತಕ. ಅವರು ಪ್ರಧಾನಿಯಾದರೆ ದೇಶದಲ್ಲಿ ರಕ್ತಪಾತ ನಿಶ್ಚಿತ - ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ.

ಅಭಿಷೇಕ್ ಸಿಂಘ್ವಿ

ಅಭಿಷೇಕ್ ಸಿಂಘ್ವಿ

ಮೋದಿ ಎಂದರೆ ಮೆನ್ ಆಫ್ ಡ್ಯಾಮೇಜ್, ಬಿಜೆಪಿಯೆಂದರೆ ಭಾರತ್ ಜಲಾವೋ ಪಾರೀ - ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ.

ಬಿಜೆಪಿಯ ಗಿರಿರಾಜ್ ಸಿಂಗ್

ಬಿಜೆಪಿಯ ಗಿರಿರಾಜ್ ಸಿಂಗ್

ಮೋದಿ ವಿರೋಧಿಗಳಿಗೆ ಇಲ್ಲಿ ಜಾಗವಿಲ್ಲ, ಚುನಾವಣೆಯ ನಂತರ ಅವರೆಲ್ಲಾ ಪಾಕಿಸ್ತಾನಕ್ಕೆ ಹೋಗಲಿ - ಬಿಹಾರದ ಬಿಜೆಪಿ ನಾಯಕ ಗಿರಿರಾಜ್ ಸಿಂಗ್.

ನರೇಂದ್ರ ಮೋದಿ ಸಮಾಧಿ

ನರೇಂದ್ರ ಮೋದಿ ಸಮಾಧಿ

ವಾರಣಾಸಿಯಲ್ಲಿ ಎಲ್ಲಾ ಜಾತಿಯ ಜನ ನೆಲೆಸುತ್ತಾರೆ. ಅಲ್ಲಿ ಮೋದಿ ಸೋಲು ಖಚಿತ. ವಾರಣಾಸಿ ಮೋದಿ ರಾಜಕೀಯ ಜೀವನ ಅಂತ್ಯಗೊಳ್ಳುವ ಮಸಣವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+