'ಲಿಯೋ' ಸಿನಿಮಾದಲ್ಲಿ ತಂಬಾಕು ಪ್ರಚಾರ ಆರೋಪ: ತಮಿಳು ನಟ ವಿಜಯ್ ವಿರುದ್ಧ ಮೊಕದ್ದಮೆ ದಾಖಲು
ಚೆನ್ನೈ, ಜೂನ್. 27: ಲೋಕೇಶ್ ಕನಕರಾಜ್ ನಿರ್ದೇಶನದ ತಮ್ಮ ಹೊಸ ಸಿನಿಮಾ ಲಿಯೋದಲ್ಲಿ ತಂಬಾಕು ಸೇವನೆಗೆ ಪ್ರಚಾರ ನೀಡಿದ್ದಕ್ಕಾಗಿ ತಮಿಳು ಸೂಪರ್‌ಸ್ಟಾರ್ ವಿಜಯ್ ಕಾನೂನಾತ್ಮಕವಾಗಿ ಸಿಕ್ಕು ಬಿದ್ದಿದ್ದಾರೆ. ಹಾಡಿನಲ್ಲಿ ತಂಬಾಕು ಸೇವನೆಯನ್ನು ಉತ್ತೇಜಿಸಿದ್ದಕ್ಕಾಗಿ ಅವರ ವಿರುದ್ಧ ಮಾದಕ ದ್ರವ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇತ್ತಿಚೆಗೆ ಬಿಡುಗಡೆಯಾದ 'ನಾ ರೆಡ್ಡಿ' ಹಾಡಿನಲ್ಲಿ ನಟ ಬಾಯಿಯಲ್ಲಿ ಸಿಗರೇಟ್ ಇಟ್ಟುಕೊಂಡು ಡ್ಯಾನ್ಸ್ ಮಾಡಿದ್ದು, ಚೆನ್ನೈನ ಕೊರುಕ್ಕುಪೇಟೆಯ ಸಾಮಾಜಿಕ ಕಾರ್ಯಕರ್ತ ಸೆಲ್ವಂ ಹಾಡಿನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಹಾಡು ರೌಡಿಸಂ ಮತ್ತು ಮಾದಕ ವ್ಯಸನವನ್ನು ಉತ್ತೇಜಿಸುತ್ತದೆ ಎಂದು ಕಾರ್ಯಕರ್ತ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಬಾಯಲ್ಲಿ ಸಿಗರೇಟು ಇಟ್ಟುಕೊಂಡು ಕುಣಿದು ಕುಪ್ಪಳಿಸಿದ ವಿಜಯ್ ಮೇಲೆ ಸೆಲ್ವಂ ಆರೋಪ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ 'ನಾ ರೆಡ್ಡಿ' ಹಾಡು ವೈರಲ್ ಆಗಿದ್ದು, ಯುವಕರನ್ನು ಡ್ರಗ್ಸ್ ಸೇವಿಸಲು ಪ್ರಚೋದಿಸುತ್ತದೆ ಎಂದು ಸೆಲ್ವಂ ಅವರು ಚೆನ್ನೈ ಪೊಲೀಸ್ ಆಯುಕ್ತರ ಮುಂದೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ. ಅವರು ಜೂನ್ 25 ರಂದು ಆನ್‌ಲೈನ್ ಅರ್ಜಿ ಸಲ್ಲಿಸಿದ್ದಾರೆ. ಹಾಡಿನಲ್ಲಿ ಮದ್ಯ ಮತ್ತು ತಂಬಾಕು ಪ್ರಚಾರ ಮಾಡಿದ್ದಕ್ಕಾಗಿ ನಟನ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ಮೊರೆ ಹೋಗುವುದಾಗಿ ಸೆಲ್ವಂ ಹೇಳಿದ್ದಾರೆ. 'ನಾ ರೆಡಿ' ಹಾಡನ್ನು ಕೂಡ ವಿಜಯ್ ಅವರೇ ಹಾಡಿದ್ದಾರೆ.
ಲಿಯೋವನ್ನು ಚಲನಚಿತ್ರ ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ ಮತ್ತು ಕಮಲ್ ಹಾಸನ್ ಅಭಿನಯದ ವಿಕ್ರಮ್ (2022) ಮತ್ತು ಕಾರ್ತಿ ಅಭಿನಯದ ಕೈತಿ ( (2019) ಸೇರಿದಂತೆ ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ,. ಈ ಲಿಯೋ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.

ಚೆನ್ನೈನಲ್ಲಿ ತಮಿಳುನಾಡಿನ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪ್ಲಸ್ ಟು ವಿದ್ಯಾರ್ಥಿಗಳಲ್ಲಿ ಮೊದಲ ಮೂರು ರ‍್ಯಾಂಕ್ ಗಳನ್ನು ಪಡೆದವರನ್ನು ವಿಜಯ್ ಸನ್ಮಾನಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಮಾತನಾಡಿದ್ದಾರೆ. ಆದರೆ, ವಿಜಯ್ ಏನನ್ನೋ ಉಪದೇಶಿಸಿ ಮತ್ತೇನನ್ನೋ ಅಭ್ಯಾಸ ಮಾಡಿಸುತ್ತಿದ್ದಾರೆ ಎಂದು ಹಲವು ವಿಮರ್ಶಕರು ಟೀಕಿಸಿದ್ದಾರೆ.
ತಮಿಳು ಚಿತ್ರರಂಗದ ಸೂಪರ್ ಡೈರೆಕ್ಟರ್ ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಸಿನಿಮಾದಲ್ಲಿ ತ್ರಿಷಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹದಿನಾಲ್ಕು ವರ್ಷಗಳ ನಂತರ ತ್ರಿಶಾ ಮತ್ತು ವಿಜಯ್ ಸಿನಿಮಾದಲ್ಲಿ ಒಂದಾಗುತ್ತಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ಪ್ರತಿಸ್ಪರ್ಧಿಯಾಗಿ ನಟಿಸುತ್ತಿದ್ದಾರೆ. ಚಿತ್ರವು ಅಕ್ಟೋಬರ್ 19, 2023 ರಂದು ಥಿಯೇಟರ್‌ಗೆ ಬಿಡುಗಡೆಯಾಗಲಿದೆ.












Click it and Unblock the Notifications