ಕೊಚ್ಚಿ ಭೇಟಿ ನೀಡಿದ್ದಕ್ಕೆ ಸನ್ನಿ ಲಿಯೋನ್ ವಿರುದ್ಧ ಪ್ರಕರಣ ದಾಖಲು
ಸನ್ನಿ ಲಿಯೋನ್ ವಿರುದ್ಧ ಕೊಚ್ಚಿ ಪೊಲೀಸರಿಂದ ಪ್ರಕರಣ ದಾಖಲು. ಇತ್ತೀಚೆಗೆ, ಕೊಚ್ಚಿಗೆ ಭೇಟಿ ನೀಡಿದ್ದಾಗ ಉಂಟಾದ ಜನದಟ್ಟಣೆ ಹಿನ್ನೆಲೆಯಲ್ಲಿ ಪ್ರಕರಣ. ಮೊಬೈಲ್ ಅಂಗಡಿ ಉದ್ಘಾಟನೆಗೆ ಬಂದಿದ್ದ ಸನ್ನಿ. ಆಕೆಯನ್ನು ನೋಡಲು ಬಂದಿದ್ದ ಸಾವಿರಾರು ಅಭಿಮಾ
ಕೊಚ್ಚಿ, ಆಗಸ್ಟ್ 19: ಇತ್ತೀಚೆಗೆ, ತಾವು ಕೊಚ್ಚಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಗರದ ಪ್ರಮುಖ ರಸ್ತೆಯೊಂದರ ಸಂಚಾರಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ ಸನ್ನಿ ಲಿಯೋನ್ ವಿರುದ್ಧ ಕೊಚ್ಚಿ ಪೊಲೀಸ್ ಪ್ರಕರಣ ದಾಖಲಿಸಿದೆ.
ಗುರುವಾರ (ಆಗಸ್ಟ್ 17) ಸನ್ನಿ ಲಿಯೋನ್, ಕೊಚ್ಚಿಗೆ ಭೇಟಿ ನೀಡಿದ್ದರು. ನಗರದ ಎಂಜಿ ರಸ್ತೆಯಲ್ಲಿದ್ದ ಮೊಬೈಲ್ ಅಂಗಡಿ ಉದ್ಘಾಟನೆಗಾಗಿ ಬಂದಿದ್ದ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಮುಗಿಬಿದ್ದಿದ್ದರು.

ಇಡೀ ಎಂಜಿ ರಸ್ತೆಯೇ ಅಭಿಮಾನಿಗಳಿಂದಾಗಿ ತುಂಬಿಬಿಟ್ಟಿತು. ಇದರಿಂದ ವಾಹನ ಸಂಚಾರ ಹಲವಾರು ಗಂಟೆಗಳ ಕಾಲ ಬಂದ್ ಆಗಿತ್ತು.
ಹೆಸರಾಂತ ನಟಿಯನ್ನು ಕರೆಯಿಸಿದಾಗ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳದೆ, ಜನರಿಗೆ ತೊಂದರೆಯಾಗುವಂತೆ ಮಾಡಿದ್ದಕ್ಕಾಗಿ ಮೊಬೈಲ್ ಅಂಗಡಿಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ತೊಂದರೆಗೆ ಪರೋಕ್ಷವಾಗಿ ಕಾರಣವಾದ ನಟಿ ಸನ್ನಿ ಲಿಯೋನ್ ಸೇರಿದಂತೆ ಜನರ ದೊಂಬಿಯ ಗುಂಪಿನಲ್ಲಿ ಪತ್ತೆ ಹಚ್ಚಲಾಗಿರುವ ಸುಮಾರು 100 ಯುವಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.












Click it and Unblock the Notifications