ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋಕ್ಸೊ ಜಾತ್ಯತೀತ ಕಾನೂನು, ಎಲ್ಲರಿಗೂ ಅನ್ವಯ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

|
Google Oneindia Kannada News

ನವದೆಹಲಿ, ಅ.18: ಮಕ್ಕಳ ಲೈಂಗಿಕ ದೌರ್ಜನ್ಯ ತಡೆ (ಫೋಕ್ಸೊ) ಜಾತ್ಯತೀತ ಕಾನೂನು. ಇದು ಅಪ್ರಾಪ್ತ ವಯಸ್ಕರ ನಡುವಿನ ವಿವಾಹಕ್ಕೆ ಅನುಮತಿಸುವ ಸಾಂಪ್ರದಾಯಿಕ ಕಾನೂನುಗಳನ್ನು ಮೀರಿದ್ದು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಮಕ್ಕಳ ಹಕ್ಕುಗಳ ರಕ್ಷಣಾ ಸಂಸ್ಥೆಯು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿಯಲ್ಲಿ ಈ ಅಂಶಗಳನ್ನು ತಿಳಿಸಿದೆ.

ರಾಜ್ಯದ ಬಳಿಕ ಬಿಹಾರದಲ್ಲೂ ಹಿಜಾಬ್ ಕಿಡಿ; ಶಿಕ್ಷಕರು, ವಿದ್ಯಾರ್ಥಿನಿಯರ ಆರೋಪಗಳೇನು?ರಾಜ್ಯದ ಬಳಿಕ ಬಿಹಾರದಲ್ಲೂ ಹಿಜಾಬ್ ಕಿಡಿ; ಶಿಕ್ಷಕರು, ವಿದ್ಯಾರ್ಥಿನಿಯರ ಆರೋಪಗಳೇನು?

ಹೆತ್ತವರ ಒಪ್ಪಿಗೆಯಿಲ್ಲದೆ ಪ್ರೀತಿಸಿ ಮದುವೆಯಾಗಿದ್ದ 21 ವರ್ಷದ ಯುವಕ ಮತ್ತು 16 ವರ್ಷದ ಬಾಲಕಿ ತಮಗೆ ಪೊಲೀಸ್ ರಕ್ಷಣೆ ನೀಡುವಂತೆ ಅರ್ಜಿ ಸಲ್ಲಿಸಿದ ನಂತರ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಜೂನ್ 13 ರ ಆದೇಶದಲ್ಲಿ, 16 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮುಸ್ಲಿಂ ಬಾಲಕಿಯರು ಸಾಂಪ್ರದಾಯಿಕ ಕಾನೂನಿನ ಪ್ರಕಾರ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಲು ಸಮರ್ಥಳು ಎಂದು ತೀರ್ಪು ನೀಡಿದೆ.

ಹೈಕೋರ್ಟ್ ಆದೇಶದ ವಿರುದ್ಧ ಮಕ್ಕಳ ಆಯೋಗ ಮೇಲ್ಮನವಿ

ಹೈಕೋರ್ಟ್ ಆದೇಶದ ವಿರುದ್ಧ ಮಕ್ಕಳ ಆಯೋಗ ಮೇಲ್ಮನವಿ

ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ ಮಕ್ಕಳ ಆಯೋಗ, ಅಪ್ರಾಪ್ತ ಬಾಲಕಿಯನ್ನು ಒಳಗೊಂಡ ಮದುವೆಯ ಸಿಂಧುತ್ವದ ಬಗ್ಗೆ ಈ ಹಿಂದೆ ಸುಪ್ರೀಂ ಕೋರ್ಟ್ ರೂಪಿಸಿದ ಶಾಸನಬದ್ಧ ನಿಬಂಧನೆಗಳು ಮತ್ತು ಕಾನೂನು ತತ್ವಗಳನ್ನು ಹೈಕೋರ್ಟ್ ನಿರ್ಲಕ್ಷಿಸಿದೆ ಎಂದು ಹೇಳಿದೆ.

ಈ ಹೈಕೋರ್ಟ್ ಆದೇಶವು ಕೇವಲ ಪೋಕ್ಸೊವನ್ನು ಕಡೆಗಣಿಸಿಲ್ಲ. ಅದರ ಜೊತೆಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ (PCMA) 2006 ಅನ್ನು ಸಹ ನಿರ್ಲಕ್ಷಿಸಿದೆ ಎಂದು ಅದು ಆಯೋಗ ತನ್ನ ಅರ್ಜಿಯಲ್ಲಿ ತಿಳಿಸಿದೆ.

ಹೆಚ್ಚುತ್ತಿರುವ ಒಪ್ಪಿತ ಸಂಬಂಧಗಳು; ಪೋಕ್ಸೋ ದಾಖಲಿಸಲು ಸವಾಲುಗಳು!

ಹೆಚ್ಚುತ್ತಿರುವ ಒಪ್ಪಿತ ಸಂಬಂಧಗಳು; ಪೋಕ್ಸೋ ದಾಖಲಿಸಲು ಸವಾಲುಗಳು!

ಇನ್ನು, ಇತ್ತೀಚೆಗೆ ಯುವಜನತೆ ಒಮ್ಮತದ ಸಂಬಂಧಗಳಲ್ಲಿ ತೊಡಗಿಸಿಕೊಂಡಿರುವ ಮತ್ತು ಸ್ಥಳೀಯ ಸಾಂಪ್ರದಾಯಿಕ ಪದ್ಧತಿಗಳು ಬಾಲ್ಯವಿವಾಹಗಳನ್ನು ಅನುಮತಿಸುತ್ತಿರುವ ಸಂದರ್ಭಗಳಲ್ಲಿ ಪೋಕ್ಸೊ ಕಾಯ್ದೆಯನ್ನು ಹೇಗೆ ಅನ್ವಯಿಸುವುದು ಎಂಬ ಸಮಸ್ಯೆಗಳ ಸುತ್ತಲೂ ಚರ್ಚಿಸುತ್ತಿರುವ ಸಮಯದಲ್ಲಿಯೇ ಮಕ್ಕಳ ರಕ್ಷಣಾ ಆಯೋಗದ ಮನವಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಪೋಕ್ಸೊ ವಿಶೇಷ ಕಾನೂನು ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಆದ್ದರಿಂದ, ಅಪ್ರಾಪ್ತ ಬಾಲಕಿಯು ಸಂಬಂಧಕ್ಕೆ ಒಪ್ಪಿಗೆ ನೀಡಿದರೂ, ಹುಡುಗನ ವಿರುದ್ಧ ಪೋಕ್ಸೊ ಪ್ರಕರಣವನ್ನು ದಾಖಲಿಸುವಾಗ ಆಕೆಯ ಒಪ್ಪಿಗೆ ಅಪ್ರಸ್ತುತವಾಗುತ್ತದೆ.

ಬಾಲ್ಯ ವಿವಾಹ ನಿಷೇಧ ಕಾಯ್ದೆ (PCMA), 21 ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರ ಮತ್ತು ಯುವತಿಯ ನಡುವಿನ ವಿವಾಹವನ್ನು ನಿಷೇಧಿಸುತ್ತದೆ. ಈ ಕಾಯ್ದೆ ಅಂತಹ ಮದುವೆಗಳನ್ನು ಪ್ರೋತ್ಸಾಹಿಸುವ, ಉತ್ತೇಜಿಸುವ ಅಥವಾ ನಡೆಸುವವರಿಗೆ ಶಿಕ್ಷೆಯನ್ನು ನೀಡುತ್ತದೆ. ಇದರ ಜೊತೆಗೆ ಅಪ್ರಾಪ್ತ ವಯಸ್ಕರಿಗೆ ಮದುವೆಯನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಲು ಎರಡು ವರ್ಷಗಳ ಕಾಲಾವಕಾಶವನ್ನು ನೀಡುತ್ತದೆ.

ಆಯೋಗವು ಹೈಕೋರ್ಟ್ ತೀರ್ಪು ಸುಪ್ರೀಂ ಕೋರ್ಟ್‌ನ 2017 ರ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದೆ. ಇದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 375 ರ ವಿನಾಯಿತಿ 2 ಅನ್ನು ಒತ್ತಿ ಹೇಳಿದೆ. ಅಪ್ರಾಪ್ತ ಸಂಗಾತಿಯಿರುವ ವಿವಾಹದಲ್ಲಿ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂದು ಸುಪ್ರೀಂ ಕೋಟ್‌ ತೀರ್ಪು ಹೇಳಿದೆ.

ಮುಸ್ಲಿಂ ಧಾರ್ಮಿಕ ವಿಧಿಗಳಿಗೆ ಅನುಗುಣವಾಗಿ ತಮ್ಮ ವಿವಾಹ!

ಮುಸ್ಲಿಂ ಧಾರ್ಮಿಕ ವಿಧಿಗಳಿಗೆ ಅನುಗುಣವಾಗಿ ತಮ್ಮ ವಿವಾಹ!

ಪ್ರಸ್ತುತ ಪ್ರಕರಣದಲ್ಲಿ, ಯುವ ಮುಸ್ಲಿಂ ದಂಪತಿಗಳು ತಮ್ಮ ಜೀವ ಮತ್ತು ಸ್ವಾತಂತ್ರ್ಯಕ್ಕೆ ಬೆದರಿಕೆಯಿದೆ ಎಂದು ಉಲ್ಲೇಖಿಸಿ, ತಮಗೆ ರಕ್ಷಣೆ ನೀಡಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ಜೂನ್ 8 ರಂದು ಮುಸ್ಲಿಂ ಧಾರ್ಮಿಕ ವಿಧಿಗಳಿಗೆ ಅನುಗುಣವಾಗಿ ತಮ್ಮ ವಿವಾಹವನ್ನು ನೆರವೇರಿಸಲಾಯಿತು ಎಂದು ಹೇಳಿರುವ ದಂಪತಿಗಳು ತಮ್ಮ ಕುಟುಂಬಗಳ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಲು ನಿರ್ಧರಿಸಿದ್ದರಿಂದ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಹೈಕೋಟ್‌ ಜೂನ್ 13 ರಂದು ಭದ್ರತೆಗಾಗಿ ಅವರ ಕೋರಿಕೆಯನ್ನು ಪರಿಶೀಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡುವುದರ ಜೊತೆಗೆ, ನ್ಯಾಯಾಲಯವು ತನ್ನ ಆದೇಶದಲ್ಲಿ ಅವರ ಮದುವೆಯ ಸ್ವರೂಪವನ್ನು ಸಹ ಗಮನಿಸಿತ್ತು.

ಹಿಂದಿನ ಪ್ರಕರಣ ಮತ್ತು ಮೊಹಮ್ಮದೀಯ ಕಾನೂನಿನ ತತ್ವಗಳ ಮೇಲೆ ಅವಲಂಬನೆಯನ್ನು ಇರಿಸುವ ಹೈಕೋರ್ಟ್, ಮುಸ್ಲಿಂ ಹುಡುಗಿಯ ವಿವಾಹವು ಮುಸ್ಲಿಮರ ವೈಯಕ್ತಿಕ ಕಾನೂನಿನಿಂದ ನಿಯಂತ್ರಿಸಲ್ಪಡುತ್ತದೆ. 16 ವರ್ಷ ವಯಸ್ಸಿನ ಆಕೆ ಅವಳ ಆಯ್ಕೆಯ ವ್ಯಕ್ತಿಯನ್ನು ವಿವಾಹವಾಗಲು ಸಮರ್ಥಳು ಎಂದಿತ್ತು. ಆದರೆ ಅವರ ಮದುವೆಯ ಸಿಂಧುತ್ವದ ವಿಚಯದಲ್ಲಿ ಪ್ರವೇಶಿಸದಿರಲು ನಿರ್ಧರಿಸಿ, ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ಅವರಿಗೆ ರಕ್ಷಣೆಯನ್ನು ನೀಡಲು ಮುಂದಾಗಿತ್ತು.

ಆದರೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, "ಹೈಕೋರ್ಟ್ ತೀರ್ಪು ಬಾಲ್ಯ ವಿವಾಹವನ್ನು ಅನುಮೋದಿಸಲು ಕಾರಣವಾಗುತ್ತದೆ. ಇದು ಭಾರತದಲ್ಲಿ ಕಾನೂನುಬಾಹಿರವಾಗಿದೆ. ಏಕೆಂದರೆ ಪೋಕ್ಸೊ ಕಾಯಿದೆಯು ಎಲ್ಲರಿಗೂ ಅನ್ವಯಿಸುತ್ತದೆ" ಎಂದಿದೆ. ಜೊತೆಗೆ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿದೆ.

ಪೋಕ್ಸೊ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಲೈಂಗಿಕ ದೌರ್ಜನ್ಯ. ಬಾಲಕಿಯ ವೈವಾಹಿಕ ಸ್ಥಿತಿಯ ಕಾರಣದಿಂದಾಗಿ ಕಾನೂನು ಬದಲಾಗುವುದಿಲ್ಲ ಎಂದು ಅದು ವಾದಿಸಿದೆ. ಇದಲ್ಲದೆ, ಪ್ರಕರಣವು ದಂಪತಿಗಳ ಜೀವನ ಮತ್ತು ಸ್ವಾತಂತ್ರ್ಯ ಮತ್ತು ಅವರ ಮದುವೆಯ ಸಿಂಧುತ್ವಕ್ಕೆ ಸೀಮಿತವಾಗಿದೆ ಎಂದು ನ್ಯಾಯಾಲಯವು ತಪ್ಪಾಗಿ ಹೇಳಿದೆ ಎಂದೂ ತಿಳಿಸಿದೆ.

ಒಪ್ಪಿತ ಪ್ರಕರಣಗಳಲ್ಲಿ ಪೋಕ್ಸೊ ದಾಖಲಿಸುವ ತೊಂದರೆಗಳು!

ಒಪ್ಪಿತ ಪ್ರಕರಣಗಳಲ್ಲಿ ಪೋಕ್ಸೊ ದಾಖಲಿಸುವ ತೊಂದರೆಗಳು!

ಒಮ್ಮತದ ಪ್ರಕರಣಗಳಲ್ಲಿ ಪೋಕ್ಸೋ ಅನ್ವಯವಾಗುವಾಗ ಹಲವಾರು ಬಾರಿ ನ್ಯಾಯಾಲಯಗಳನ್ನು ಸಂಕಷ್ಟಕ್ಕೆ ನೂಕಿದೆ.

ಕಳೆದ ತಿಂಗಳು, ಸುಪ್ರೀಂ ಕೋರ್ಟ್ ಅಪ್ರಾಪ್ತ ವಯಸ್ಕರೊಂದಿಗಿನ ಒಮ್ಮತದ ಸಂಬಂಧದ ಪ್ರಕರಣಗಳಲ್ಲಿಯೂ ಸಹ ಪೋಕ್ಸೋ ಅನ್ವಯಿಸುತ್ತದೆ ಎಂಬ ಮದ್ರಾಸ್ ಹೈಕೋಟ್‌ ಆದೇಶದ ವಿರುದ್ಧ ಮೇಲ್ಮನವಿಯನ್ನು ವಿಚಾರನೆ ನಡೆಸುವಾಗ ಕಾನೂನಿನ ಅನುಷ್ಠಾನದ ಸವಾಲುಗಳನ್ನು ಎತ್ತಿ ಹಿಡಿದಿದೆ.

17 ವರ್ಷ ಮತ್ತು 10 ತಿಂಗಳ ವಯಸ್ಸಿನ ಹುಡುಗಿಯೊಂದಿಗಿನ ಸಂಬಂಧದ ಕುರಿತು ಶಿಕ್ಷೆಗೊಳಗಾದ ವ್ಯಕ್ತಿಯೊಬ್ಬರು ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.

ಒಮ್ಮತದ ಲೈಂಗಿಕ ಚಟುವಟಿಕೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ನಡುವಿನ ವ್ಯತ್ಯಾಸದ ಕೊರತೆಯ ಬಗ್ಗೆ ಕೇರಳ ಹೈಕೋರ್ಟ್ ಕೂಡ ವಿಷಾದಿಸಿದೆ. "ದುರದೃಷ್ಟವಶಾತ್, ಪೋಕ್ಸೋ ಕಾಯಿದೆಯು ಅತ್ಯಾಚಾರ ಮತ್ತು ಒಮ್ಮತದ ಲೈಂಗಿಕ ಸಂಬಂಧಗಳ ನಡುವೆ ವ್ಯತ್ಯಾಸವನ್ನು ತಿಳಿಸಿಲ್ಲ" ಎಂದು ಹೈಕೋರ್ಟ್ ಹೇಳಿದೆ.

ಆದರೆ, ಈ ಪ್ರಕರಣದಲ್ಲಿ ಆಯೋಗದ ಮೇಲ್ಮನವಿಯು ಇತರ ಉಚ್ಚ ನ್ಯಾಯಾಲಯಗಳ ಹಿಂದಿನ ಆದೇಶಗಳನ್ನು ಉಲ್ಲೇಖಿಸಿಲ್ಲ. ಹಲವು ಹೈಕೋರ್ಟ್ ತೀರ್ಪುಗಳಲ್ಲಿ ಅಪ್ರಾಪ್ತ ಬಾಲಕಿಯರನ್ನು ಮದುವೆಯಾಗಿ ಪೋಕ್ಸೊ ಆರೋಪಗಳನ್ನು ಎದುರಿಸುತ್ತಿರುವ ಯುವಕರಿಗೆ ವಿನಾಯತಿ ನೀಡಲಾಗಿದೆ.

ಕಾನೂನಿನ ಈ ಪ್ರಶ್ನೆಯನ್ನು ಇತ್ಯರ್ಥಪಡಿಸುವುದು ನ್ಯಾಯದ ಹಿತಾಸಕ್ತಿಯಲ್ಲಿದೆ ಎಂದು ಆಯೋಗ ಸೇರಿಸಿದೆ, ಹಾಗೆಯೇ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

English summary
Prevention of Child Sexual Offences (POCSO) is a secular legislation and it applies to all said National Commission for Protection of Child Rights (NCPCR) in Supreme Court over 16-yr-old Muslim girl marriage. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X