• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

#9pm9minute ದೇಶದ ಜನತೆಗೆ ಮೋದಿಯಿಂದ ಅಲರ್ಟ್

|

ನವದೆಹಲಿ, ಏಪ್ರಿಲ್ 05: ದೇಶದ ಜನತೆಯನ್ನು ಭಾನುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಸಿದ್ದಾರೆ. ಭಾನುವಾರ(ಏಪ್ರಿಲ್ 5) ರಾತ್ರಿ 9 ಗಂಟೆಯಿಂದ 9 ನಿಮಿಷಗಳ ಕಾಲ ದೀಪ ಹಚ್ಚುವ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಮೋದಿ ಅವರು ಅಲರ್ಟ್ ಮಾಡಿದ್ದಾರೆ.

#9pm9minute ಎಂದು ಮೋದಿ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮಾಡಿದ ಒಂದು ಗಂಟೆಗಾಗಲೇ ಈ ಸಮಯಕ್ಕೆ(11.34) 17 ಸಾವಿರ ಬಾರಿ ರೀ ಟ್ವೀಟ್ ಆಗಿದ್ದು, 66 ಸಾವಿರ ಮಂದಿ ಲೈಕ್ ಮಾಡಿದ್ದರೆ, 8 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ.

ಅಷ್ಟಕ್ಕೂ ಆ ಭಾನುವಾರ ದೀಪ ಹಚ್ಚಿ ಅಂತಾ ಪ್ರಧಾನಿ ಮೋದಿ ಹೇಳಿದ್ದೇಕೆ?

ಕೊರೊನಾವೈರಸ್ ಲಾಕ್ಡೌನ್ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಬೆಳಗ್ಗೆ ವಿಡಿಯೊ ಸಂದೇಶ ನೀಡಿದ್ದಾರೆ. ಏಪ್ರಿಲ್ 5ರಂದು ರಾತ್ರಿ 9 ಗಂಟೆಯಿಂದ 9 ನಿಮಿಷ ದೀಪ, ಮೊಂಬತ್ತಿ, ಮೊಬೈಲ್ ಫ್ಲಾಷ್ ಲೈಟ್ ಆನ್ ಮಾಡಿ ಮನೆ ಮುಂದೆ ನಿಲ್ಲಿ ಎಂಬ ಕರೆ ನೀಡಿದ್ದಾರೆ.

ಮಾಜಿ ವಿತ್ತ ಸಚಿವ ಪಿ ಚಿದಂಬರಂ ಪ್ರತಿಕ್ರಿಯಿಸಿ, ಮೋದಿ ಅವರೇ ನಿಮ್ಮ ಮಾತು ಕೇಳಿ ದೀಪ ಹಚ್ಚುತ್ತೇವೆ. ನೀವು ಸಾಂಕ್ರಾಮಿಕ ಪಿಡುಗೆ ನಿರ್ವಹಣೆ ಬಗ್ಗೆ ಸಂಶೋಧಕರಿಂದ ಆರ್ಥಿಕ ಪರಿಸ್ಥಿತಿ ಬಗ್ಗೆ ತಜ್ಞರಿಂದ ಸಲಹೆ ಪಡೆದುಕೊಳ್ಳಿ ಎಂದು ಪ್ರತಿಕ್ರಿಯಿಸಿದ್ದರು. ಆದರೆ, ದೇಶದ ಬಹುತೇಕ ಕಡೆಗಳಲ್ಲಿ ಭಾನುವಾರ ರಾತ್ರಿ ದೀಪ ಬೆಳಗಲು ತಯಾರಿ ಜೋರಾಗಿ ನಡೆದಿದೆ.

ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ: ಮೋದಿ

ಈ ನಡುವೆ 9 ನಿಮಿಷ ಕರೆಂಟ್ ಬಂದ್ ಮಾಡುವುದರಿಂದ ಪವರ್ ಗ್ರಿಡ್ ಗೆ ತೊಂದರೆಯಾಗಲಿದೆ ಎಂಬ ಸುದ್ದಿ ಬಂದಿತ್ತು. ಈ ಬಗ್ಗೆ ಕೆಪಿಟಿಸಿಎಲ್ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದು, ಮನೆ ಬಳಕೆಯ ಬಲ್ಬ್ ಆರಿಸಿ, ಟಿವಿ,ಕಂಪ್ಯೂಟರ್, ಫ್ಯಾನ್, ಫ್ರಿಡ್ಜ್ ಮುಂತಾದವು ಚಾಲನೆಯಲ್ಲಿರಲಿ, ಬೀದಿ ದೀಪ, ಆಸ್ಪತ್ರೆ, ಪೊಲೀಸ್ ಠಾಣೆ ಅಗತ್ಯ ಸೇವಾ ಕೇಂದ್ರಗಳ ವಿದ್ಯುತ್ ಪೂರೈಕೆ ಬಂದ್ ಆಗದಿರುವಂತೆ ನೋಡಿಕೊಳ್ಳಲಾಗುತ್ತದೆ ಎಂದಿದ್ದಾರೆ

English summary
Prime Minister Narendra Modi has reminded people to light up lamps on Sunday night to show the country's collective resolve to fight coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X