PM Surya Ghar Scheme: ಮನೆ ಮೇಲೆ ಸೋಲಾರ್ ಅಳವಡಿಕೆ, ಬೆಸ್ಕಾಂ ಕೊಡುವ ಸಬ್ಸಿಡಿ ಎಷ್ಟು? ಅರ್ಜಿ ಸಲ್ಲಿಸಿ
ಬೆಂಗಳೂರು, ಡಿಸೆಂಬರ್ 28: ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯು ಮುಂದಿನ ಜನವರಿ ಕೊನೆಯ ವಾರಕ್ಕೆ ಒಂದು ವರ್ಷ ಪೂರೈಸಲಿದೆ. ನೀವಿನ್ನು ಈ ಯೋಜನೆಯಡಿ ನಿಮ್ಮ ಮನೆ ಮೇಲೆ ಸೌರ ವಿದ್ಯುತ್ ಅಳವಡಿಕೆ ಮಾಡದಿದ್ದರೆ ಕೂಡಲೇ ಅಳವಡಿಕೆ ಮಾಡಿಕೊಳ್ಳಿ. ಇದರಿಂದ ಮಾಸಿಕ ವಿದ್ಯುತ್ ಬಿಲ್ ಹಣದಲ್ಲಿ ಸಾಕಷ್ಟು ಹಣ ಉಳಿಸಬಹುದು. ಹಾಗಾದರೆ ಇದಕ್ಕೆ ಸಬ್ಸಿಡಿ ಎಷ್ಟು ಸಿಗುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ? ಖರ್ಚೆಷ್ಟು ಮತ್ತು ಪ್ರಯೋಜನಗಳ ವಿವರ ಇಲ್ಲಿದೆ.
ವಿದ್ಯುತ್ ಉತ್ಪಾದಿಸಿ, ಹಣ ಉಳಿಸಿ, ಆದಾಯ ಗಳಿಸಿ ಎಂಬ ಶಿರ್ಷಿಕೆಯಡಿ ಇದೇ ವರ್ಷ ಜನವರಿಯಲ್ಲಿ ಕೇಂದ್ರ ಸರ್ಕಾರ ಯೋಜನೆ ಘೋಷಣೆ ಮಾಡಿತು. ಅಲ್ಲಿಂದ ಅನೇಕರು ಈ ಈ ಸೋಲಾರ್ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಅದಕ್ಕಾಗಿ ನೀವು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಅಗತ್ಯ ಸಬ್ಸಿಡಿ ನೀಡಲಾಗುವುದು ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಹತ್ತು ವರ್ಷಗಳ ಮಿತಿಗೆ ಶೇಕಡಾ 07ರಷ್ಟು ಬಡ್ಡಿ ದರದಲ್ಲಿ ಬ್ಯಾಂಕ್ ಸಾಲ ಸೌಲಭ್ಯ ಸಿಗಲಿದೆ. ಒಮ್ಮೆ ಈ ಸೌರ ವಿದ್ಯುತ್ ಅಳವಡಿಸಿದರರೆ 25 ವರ್ಷ ಬಾಳಿಕೆ ಬರಲಿದೆ. ಐದು ವರ್ಷಗಳ ಕಾಲ ಉಚಿತ ನಿರ್ವಹಣೆಗೂ ಅವಕಾಶ ಇದೆ.
ಈ ಸೋಲಾರ್ ವಿದ್ಯುತ್ ವ್ಯವಸ್ಥೆ ಅಳವಡಿಕೆಗೆ ಬ್ಯಾಂಕ್ ಹತ್ತು ವರ್ಷಗಳ ಮಿತಿಗೆ ಶೇಕಡಾ 7ರಷ್ಟು ಬಡ್ಡಿ ದರದಲ್ಲಿ ಸಾಲಸೌಲಭ್ಯ ಒದಗಿಸಲಿದೆ. ಅದಕ್ಕಾಗಿ ನೀವು ಜನಸಮರ್ಥ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ವಿದ್ಯುತ್ ಬಿಲ್ ಉಳಿತಾಯ ಮಾಡುವ ಹಣದಲ್ಲಿ ನೀವು ಸಾಲದ ಕಂಡು ಕಟ್ಟಬಹುದು.

ಇದೇ ಯೋಜನೆಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಅರ್ಧದಷ್ಟು ಹಣವನ್ನು ಸಬ್ಸಿಡಿ ನೀಡುತ್ತಿದೆ. 1ಕಿಲೋ ವ್ಯಾಟ್ ಸೌರ ವಿದ್ಯುತ್ ಘಟಕ ಸ್ಥಾಪಿಸಿದರೆ 100 ಯೂನಿಟ್‌ವರೆಗೆ ವಿದ್ಯುತ್ ಉತ್ಪಾದನೆ ಆಗುತ್ತದೆ.
2 ಕಿಲೋ ವ್ಯಾಟ್ ಘಟಕದಿಂದ 200 ಯೂನಿಟ್‌ವರೆಗೆ ವಿದ್ಯುತ್, 3ಕಿಲೋ ವ್ಯಾಟ್ ಘಟಕ ಸ್ಥಾಪಿಸಿದರೆ ಅದರಿಂದ 300 ಯೂನಿಟ್ ವಿದ್ಯುತ್ ಉತ್ಪಾದನೆ ಆಗುತ್ತದೆ.
ಬೆಸ್ಕಾಂನಿಂದ ಸಬ್ಸಡಿ ಎಷ್ಟು ಸಿಗುತ್ತೆ?
1 ಕಿ.ವ್ಯಾ. ಘಟಕ ಸ್ಥಾಪನೆಗೆ ಬೆಸ್ಕಾಂ 30000 ರೂಪಾಯಿ ಸಬ್ಸಿಡಿ ನೀಡಲಿದೆ. 2 ಕಿ.ವ್ಯಾ. ಸೌರ ವಿದ್ಯುತ್ ಘಟಕ ಸ್ಥಾಪನೆಗೆ 60000 ರೂಪಾಯಿ ಹಾಗೂ 3ಕಿ.ವ್ಯಾ. ಘಟಕ ಸ್ಥಾಪಿಸುವವರಿಗೆ ಒಟ್ಟು 78000ರೂಪಾಯಿ ಹಣ ಸಬ್ಸಿಡಿಯನ್ನು ನೀಡಲಿದೆ. ಗ್ರಾಹಕರು ಇದರ ಲಾಭ ಪಡೆಯಬೇಕು.
ಇದರಿಂದ ವಿದ್ಯುತ್ ಬಿಲ್ ಉಳಿತಾಯವಾಗಲಿದೆ. ಉತ್ಪಾದಿತ ಹೆಚ್ಚುವರಿ ವಿದ್ಯುತ್ ಅನ್ನು ನೀವು ಮರಳಿ ಬೆಸ್ಕಾಂಗೆ ನೀಡಿ ಅಧಿಕ ಹಣ ಗಳಿಸಬಹುದು. ಈ ಘಟಕವನ್ನು ಮನೆ, ವಾಣಿಜ್ಯ ಸಂಕೀರ್ಣ, ವಸತಿ ಸಮುಚ್ಚಾಲಯ ದವರು ತಮ್ಮ ಮೇಲ್ಚಾವಣಿ ಮೇಲೆ ನಿರ್ಮಿಸಬಹುದು. 1 ಕಿ.ವ್ಯಾ. ಘಟಕ ಸ್ಥಾಪನೆಗೆ 10x10 ಚದರ ಅಡಿ ಜಾಗ ಬೇಕಿದೆ.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಜನರು ಕೂಡಲೇ ಸರ್ಕಾರದ ಅಧಿಕೃತ ಪೋರ್ಟಲ್ https://www.pmsuryaghar.gov.in/consumerLogin ಗೆ ಭೇಟಿ ನೀಡಬೇಕು. ಮೊಬೈಲ್ ಸಂಖೆಯ ಹಾಕಿ ನೋಂದಣಿ ಮಾಡಿಕೊಂಡು ಲಾಗಿನ್ ಆಗಬೇಕು. ಭಾರತೀಯ ನಾಗರಿಕರಾಗಿದ್ದು, ಅಗತ್ಯ ದಾಖಲೆ, ವಿವಿರ ಹಾಕಿ ಅರ್ಜಿ ಸಲ್ಲಿಸಬೇಕು. ಬಳಿಕ ನೀವು ಬ್ಯಾಂಕ್ ಸಾಲ, ಬೆಸ್ಕಾಂ ಸಬ್ಸಿಡಿಗೆ ಸಂಪರ್ಕಿಸಬೇಕು..












Click it and Unblock the Notifications