ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.19ಕ್ಕೆ ತೆಲಂಗಾಣಕ್ಕೆ ಮೋದಿ ಭೇಟಿ, ವಂದೇ ಭಾರತ್‌ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ

|
Google Oneindia Kannada News

ನವದೆಹಲಿ, ಜ. 09: ದೇಶಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪರಿಚಯಿಸಲು ಪ್ರಧಾನಿ ನರೇಂದ್ರ ಮೋದಿ ಜನವರಿ 19 ರಂದು ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ.

ದೇಶದಲ್ಲಿ ರೈಲ್ವೆ ಜಾಲವನ್ನು ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಜನವರಿ 19 ರಂದು ತೆಲಂಗಾಣದಲ್ಲಿ 2,400 ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಹೈದರಾಬಾದ್ ಮತ್ತು ವಿಜಯವಾಡ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಹ ಚಾಲನೆ ನೀಡಲಿದ್ದಾರೆ.

ಬಂಗಾಳ: ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಮತ್ತೆ ಕಲ್ಲು ತೂರಾಟ, ರೈಲು ಸಂಚಾರಕ್ಕೆ ಅಡ್ಡಿಬಂಗಾಳ: ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಮತ್ತೆ ಕಲ್ಲು ತೂರಾಟ, ರೈಲು ಸಂಚಾರಕ್ಕೆ ಅಡ್ಡಿ

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ತೆಲಂಗಾಣ ಬಿಜೆಪಿಯ ಹಿರಿಯ ಸದಸ್ಯರು ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಲೋಕಸಭಾ ಸದಸ್ಯ ಬಂಡಿ ಸಂಜಯ್ ಕುಮಾರ್ ಪಕ್ಷದ ಇತರ ಹಿರಿಯ ಸದಸ್ಯರೊಂದಿಗೆ ಸಿಕಂದರಾಬಾದ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದರು.

PM Narendra Modi will visit Hyderabad on Jan 19 to introduce another Vande Bharat

ತೆಲಂಗಾಣ ಭೇಟಿ ವೇಳೆ ಸುಮಾರು 700 ಕೋಟಿ ರೂಪಾಯಿ ವೆಚ್ಚದ ಸಿಕಂದರಾಬಾದ್ ರೈಲು ನಿಲ್ದಾಣದ ಆಧುನೀಕರಣಕ್ಕೆ ಪ್ರಧಾನಿ ಮೋದಿ ಅಡಿಪಾಯ ಹಾಕಲಿದ್ದಾರೆ. ಪ್ರಧಾನಮಂತ್ರಿ ಕಾಜಿಪೇಟ್‌ನಲ್ಲಿ ಹಲವು ನಿರ್ಮಾಣದ ಕಾಮಗಾರಿಗಳನ್ನು ದೂರದಿಂದಲೇ ಪ್ರಾರಂಭಿಸಲಿದ್ದಾರೆ.

1,231 ಕೋಟಿ ರೂಪಾಯಿ ವೆಚ್ಚದ ಸಿಕಂದರಾಬಾದ್ - ಮಹಬೂಬ್‌ನಗರ ದ್ವಿಗುಣಗೊಳಿಸುವ ಕಾಮಗಾರಿಯ ಪ್ರಾರಂಭದ ಕುರಿತು ಬಿಜೆಪಿಯ ಪ್ರಕಟಣೆಯು ಮಾಹಿತಿ ನೀಡಿದೆ.

ರೈಲ್ವೇ ಮೂಲಸೌಕರ್ಯಗಳ ಉನ್ನತೀಕರಣ ಮತ್ತು ರೈಲ್ವೇಯನ್ನು ಹೆಚ್ಚು ಪರಿಸರ ಸ್ನೇಹಿಯನ್ನಾಗಿ ಮಾಡಲು ಸರ್ಕಾರವು ಹೆಚ್ಚಿನ ಗಮನಹರಿಸುತ್ತಿರುವ ಸಮಯದಲ್ಲಿ ರೈಲ್ವೆ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಹೊಸ ವರ್ಷದ ಆರಂಭದಲ್ಲಿ, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಡಿಸೆಂಬರ್ ವೇಳೆಗೆ ಹೈಡ್ರೋಜನ್ ಚಾಲಿತ ರೈಲುಗಳನ್ನು ತನ್ನ ನ್ಯಾರೋ ಗೇಜ್ ಪಾರಂಪರಿಕ ಮಾರ್ಗಗಳಲ್ಲಿ ಸಂಪೂರ್ಣವಾಗಿ ಹಸಿರಾಆಗಿ ಪರಿವರ್ತಿಸುವುದಾಗಿ ಘೋಷಿಸಿದ್ದಾರೆ.

PM Narendra Modi will visit Hyderabad on Jan 19 to introduce another Vande Bharat

"ನಾವು ಡಿಸೆಂಬರ್ 2023 ರಿಂದ ಪಾರಂಪರಿಕ ಮಾರ್ಗಗಳಲ್ಲಿ ಹೈಡ್ರೋಜನ್ ರೈಲುಗಳನ್ನು ಓಡಿಸಲಿದ್ದೇವೆ. ಇದರರ್ಥ ಈ ಪಾರಂಪರಿಕ ಮಾರ್ಗಗಳು ಸಂಪೂರ್ಣವಾಗಿ ಹಸಿರುಮಯವಾಗುತ್ತವೆ" ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಹೊಸದಾಗಿ ನಿರ್ಮಿಸಲಾದ ಹೈಡ್ರೋಜನ್ ಚಾಲಿತ ರೈಲುಗಳನ್ನು ವಂದೇ ಮೆಟ್ರೋ ಎಂದು ಕರೆಯಲಾಗುವುದು.1950 ಮತ್ತು 1960 ರ ದಶಕದಲ್ಲಿ ತಯಾರಿಸಲಾದ ಪ್ರಸ್ತುತ ರೈಲುಗಳ ಬದಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ರೈಲುಗಳನ್ನು ತಯಾರಿಸಲಾಗುವುದು.

ಹೈಡ್ರೋಜನ್ ಚಾಲಿತ ರೈಲು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಮತ್ತು ಹವಾಮಾನ ವೈಪರಿತ್ಯವನ್ನು ಸರಿ ಸಮಾನಾಗಿ ಇರಿಸುವಲ್ಲಿ ಈ ರೈಲುಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ನಂಬಲಾಗಿದೆ.

English summary
Prime Minister Narendra Modi to visit Hyderabad on January 19, he will launch railway projects worth ₹2,400 crores and will also flag off the Vande Bharat Express train. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X