ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ನೀಡಿದ ಸಲಹೆ ಏನು?

|
Google Oneindia Kannada News

ವಾರಾಣಸಿ, ಫೆಬ್ರವರಿ, 23: ಇತಿಹಾಸದಲ್ಲಿ ದಾಖಲಾಗುವ ಮತ್ತು ದೇಶದ ಒಳಿತಿಗೆ ನೆರವಾಗುವಂತ ಸಂಶೋಧನೆಯನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ವಾರಣಾಸಿ ಬನಾರಸ್ ಹಿ೦ದು ವಿಶ್ವವಿದ್ಯಾಲಯದ 100ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ಪ್ರಪಂಪ ಬದಲಾಗುತ್ತಿದೆ. ಪರಿಸರ ಮಾಲಿನ್ಯದಂಥ ಸಮಸ್ಯೆ ಬೆನ್ನು ಹತ್ತಿದೆ. ವಾತಾವರಣದ ತಾಪಮಾನ ಏರುಪೇರಾಗುತ್ತಿದೆ.ಪ ಶಕ್ತಿ, ಸ೦ನ್ಮೂಲ, ಇಂಧನದ ಕೊರತೆ ಕಾಣಿತ್ತಿದ. ಇವೆಲ್ಲಕಲ್ಕೆ ಪರಿಹಾರ ನೀಡುವಂತಹ ಸಂಶೊಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿದ್ಯಾರ್ಥಿಗಳೊಂದಿಗೆ ಸಂವಾದ

ವಿದ್ಯಾರ್ಥಿಗಳೊಂದಿಗೆ ಸಂವಾದ

ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳೊಂದಿಗೆ ನೇರವಾಗು ಮುಖಾಮುಖಿಯಾದರು. ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರನ ನೀಡಿ ಅವರಿಂದಲೂ ಮಾಹಿತಿ ಪಡೆದುಕೊಂಡರು.

ಕ್ಷಮೆಯಾಚಿಸಿದ ಮೋದಿ

ಕ್ಷಮೆಯಾಚಿಸಿದ ಮೋದಿ

ಬನಾರಸ್ ವಿವಿ ಕೊಡಬಯಸಿದ್ದ ಗೌರವ ಡಾಕ್ಟರೇಟ್ ನಿರಾಕರಿಸಿದ್ದ ಮೋದಿ, ಘಟಿಕೋತ್ಸವದಲ್ಲಿ ಈ ವಿಷಯ ಪ್ರಸ್ತಾಪಿಸಿ, "ವಿವಿ ಮ೦ಡಳಿ ನನಗೆ ಕೊಡಲಿಚ್ಚಿಸಿದ್ದ ಗೌರವ ಡಾಕ್ಟರೇಟ್ ಅನ್ನು ನಾನು ಪಡೆದುಕೊಳ್ಳುತ್ತಿಲ್ಲ, ಅದಕ್ಕಾಗಿ ನಾನು ನಿಮ್ಮ ಕ್ಷಮೆಯಾಚಿಸುತ್ತಿದ್ದೇನೆ. ಪದವಿಗಿ೦ತಲೂ ಹೆಚ್ಚಿನದನ್ನು ನನಗೆ ನೀಡಿದ್ದಿರಿ. ಅದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

ಮೋದಿಗೆ ಧಿಕ್ಕಾರ

ಮೋದಿಗೆ ಧಿಕ್ಕಾರ

ಘಟಿಕೋತ್ಸವ ವೇದಿಕೆಯಲ್ಲಿ ಭಾಷಣ ಮುಗಿಸಿ ಕೆಳಗಿಳಿಯುತ್ತಿದ್ದ ಮೋದಿಯವರತ್ತ ದ್ವಿತೀಯ ಬಿಎ ಪದವಿ ವಿದ್ಯಾಥಿ೯ ಅಶುತೋಷ್ ಸಿ೦ಗ್ ಎ೦ಬಾತ ಘೋಷಣೆ ಕೂಗಿದ್ದು, ಆತನನ್ನು ಪೊಲೀಸರು ಬ೦ಧಿಸಿದ್ದಾರೆ. ವಿವಿಯಲ್ಲಿ ದಶಕಗಳಿ೦ದ ವಿದ್ಯಾಥಿ೯ ಸ೦ಘಟನೆಯನ್ನು ನಿಷೇಧಿಸಲಾಗಿದ್ದು ಮತ್ತೆ ಸ್ಥಾಪನೆ ಮಾಡಬೇಕು ಎಂದು ಆತ ಹಕ್ಕೋತ್ತಾಯ ಮಾಡಿದ್ದಾನೆ.

ಗುರು ಕಾ ಲಂಗರ್

ಗುರು ಕಾ ಲಂಗರ್

ಶ್ರೀ ಗುರು ರವಿದಾಸ್ ಜನ್ಮ ಮಂದಿರಕ್ಕೆ ಭೇಟಿ ನೀಡಿದ ಪ್ರಧಾನಿ 'ಗುರು ಕಾ ಲಂಗರ್' ಪ್ರಸಾದವನ್ನು ಸ್ವೀಕರಿಸಿದರು.

ಪದವಿ ಪ್ರದಾನ

ಪದವಿ ಪ್ರದಾನ

ಬನಾರಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗೆ ಪದವಿ ಪ್ರಧಾನ ಮಾಡಿದ ನರೇಂದ್ರ ಮೋದಿ. ಘಟಿಕೋತ್ಸವದಲ್ಲಿ ಭಾಗವಹಿಸಿದ್ದ ಪ್ರಧಾನಿ ಬೇರ ಯಾವ ಸಂಗತಿಗಳನ್ನು ಮಾತನಾಡಲಿಲ್ಲ.

ಹೆಜ್ಜೆ ಹಾಕುತ

ಹೆಜ್ಜೆ ಹಾಕುತ

ಬನಾರಸ್ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಮತ್ತಿತರ ಗಣ್ಯರು.

English summary
At the Banaras Hindu University [BHU] convocation here, a youth on Monday, Feb 22 raised the demand for restoration of students' union at the university and wanted Prime Minister Narendra Modi to listen to him but was detained by police. The youth, who identified himself as BHU's B.A. II year student Ashutosh Singh, started started shouting "Modi ji, please listen to the voice of the students community" as soon as the Prime Minister finished his speech and was getting off the stage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X