ಒಂದೇ ಟೇಬಲ್‌ನಲ್ಲಿ ಕುಳಿತು ರಾಗಿ, ಜೋಳದ ಖಾದ್ಯ ಸವಿದ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ

ನವದೆಹಲಿ, ಡಿಸೆಂಬರ್‌ 20: ಸಿರಿಧಾನ್ಯ ವರ್ಷ 2023ರ ಅಂಗವಾಗಿ ಕೃಷಿ ಸಚಿವ ನರೇಂದ್ರ ತೋಮರ್ ಅವರು ಆಯೋಜಿಸಿದ್ದ ಮಧ್ಯಾಹ್ನದ ಭೋಜನವನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಸವಿದರು. ಅವರೊಂದಿಗೆ ಸಂಸತ್ತಿನ ಸಹದ್ಯೋಗಗಳೂ ಇದ್ದರು. ಪ್ರಮುಖವಾಗಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನಿ ಮೋದಿ ಒಂದೇ ಟೇಬಲ್‌ನಲ್ಲಿ ಕುಳಿತು ಭೋಜನ ಮಾಡಿದ್ದು ವಿಶೇಷವಾಗಿತ್ತು.

ಪ್ರಧಾನಿ ಮೋದಿ ಅವರು ಸುಮಾರು 40 ನಿಮಿಷಗಳ ಕಾಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಭೋಜನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೃಷಿ ಸಚಿವ ನರೇಂದ್ರ ತೋಮರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕುಳಿತಿದ್ದರು.

PM Narendra Modi Shares Table With M Kharge At Special Millet Lunch In Parliament

'ನಾವು ರೊಟ್ಟಿ ಮತ್ತು ಜ್ವಾರ್ ಬಾಜ್ರಾ ಹಾಗೂ ರಾಗಿಯಿಂದ ತಯಾರಿಸಿದ ಸಿಹಿತಿಂಡಿಗಳನ್ನು ಸವಿದೆವು. ಇದಕ್ಕಾಗಿ ವಿಶೇಷವಾಗಿ ಕರ್ನಾಟಕದಿಂದ ಬಾಣಸಿಗರನ್ನು ಕರೆತರಲಾಗಿದೆ. ತಮ್ಮ ಊಟವನ್ನು ಪ್ರಧಾನಿ ಮೋದಿ ನಿಜವಾಗಿಯೂ ಆನಂದಿಸಿದ್ದಾರೆ. ಇದು ನನಗೆ ಸಂತಸ ತಂದಿದೆ' ಎಂದು ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ 'ಎಎನ್‌ಐ'ಗೆ ತಿಳಿಸಿದರು.

ಇಂದು ತಯಾರಿಸಲಾದ ಖಾದ್ಯಗಳಲ್ಲಿ ರಾಗಿಯಿಂದ ಮಾಡಿದ ಖಿಚಡಿ, ರಾಗಿ ದೋಸೆ, ರಾಗಿ ರೊಟ್ಟಿ, ಜೋಳದ ರೊಟ್ಟಿ, ಹಲ್ದಿ ಸಬ್ಜಿ, ಬಾಜ್ರಾ, ಚುರ್ಮಾ ಸೇರಿವೆ.

ಇಂದು ಮುಂಜಾನೆ, ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಅಂತರರಾಷ್ಟ್ರೀಯ ಸಿರಿಧಾನ್ಯ 2023 ರ ಆಚರಣೆಗೆ ಒತ್ತು ನೀಡಿದರು. ಸಿರಿಧಾನ್ಯಗಳ ಪೌಷ್ಟಿಕಾಂಶ ಅಭಿಯಾನವನ್ನು ಉತ್ತೇಜಿಸುವ ಮಾರ್ಗಗಳನ್ನು ಸೂಚಿಸಿದರು.

PM Narendra Modi Shares Table With M Kharge At Special Millet Lunch In Parliament

ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ (NFMS) ಅಡಿಯಲ್ಲಿ 14 ರಾಜ್ಯಗಳ 212 ಜಿಲ್ಲೆಗಳಲ್ಲಿ ಪೌಷ್ಟಿಕ ಏಕದಳ ಘಟಕಗಳನ್ನು ಸ್ಥಾಪಿಸಲಾಗಿದೆ.

ಏಷ್ಯಾ ಮತ್ತು ಆಫ್ರಿಕಾ ಸಿರಿದಾನ್ಯ ಬೆಳೆಗಳ ಪ್ರಮುಖ ಉತ್ಪಾದನೆ ಮತ್ತು ಬಳಕೆಯ ಕೇಂದ್ರಗಳಾಗಿವೆ. ಭಾರತ, ಸುಡಾನ್ ಮತ್ತು ನೈಜೀರಿಯಾ ಸಿರಿದಾನ್ಯಗಳ ಪ್ರಮುಖ ಉತ್ಪಾದಕ ದೇಶಗಳಾಗಿವೆ.

ಭಾರತದಲ್ಲಿ ಕರ್ನಾಟಕ, ತಮಿಳು ನಾಡು, ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ರಾಗಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಭಾರತ ಸರ್ಕಾರವು ಏಪ್ರಿಲ್ 2018 ರಲ್ಲಿ ರಾಗಿಯನ್ನು ಪೌಷ್ಠಿಕ-ಧಾನ್ಯವೆಂದು ಘೋಷಿಸಿತ್ತು. ಪೋಶನ್ ಮಿಷನ್ ಅಭಿಯಾನದಲ್ಲಿ ರಾಗಿಯನ್ನು ಸಹ ಸೇರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+