ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸ್ಥಾನಗಳೆಷ್ಟು?: ಮೋದಿ ಹೇಳಿದ ಭವಿಷ್ಯ ಇದು
ಭುವನೇಶ್ವರ, ಮೇ. 12 : 2024ರ ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ಮೂರು ಹಂತದ ಮತದಾನ ನಡೆದು, ನಾಲ್ಕನೇ ಹಂತದ ಮತದಾನಕ್ಕೆ ದೇಶ ಸಿದ್ಧವಾಗುತ್ತಿದೆ. ಇದೇ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಗೆಲ್ಲುವ ಸೀಟುಗಳ ಬಗ್ಗೆ ಭವಿಷ್ಯ ನುಡಿದ್ದಿದ್ದಾರೆ.
ನಾಲ್ಕನೇ ಹಂತದ ಚುನಾವಣಾ ಪ್ರಚಾರವನ್ನು ಭರದಿಂದ ನಡೆಸಿರುವ ಬಿಜೆಪಿ ಒಡಿಶಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ರ್ಯಾಲಿ ಆಯೋಜಿಸಿತ್ತು. ಈ ಸಮಾವೇಶದಲ್ಲಿ ಮಾತನಾಡಿರುವ ಪ್ರಧಾನಿ, " ಚುನಾವಣೆಯಲ್ಲಿ ಕಾಂಗ್ರೆಸ್ 50 ಸೀಟುಗಳಿಗಿಂತ ಕಡಿಮೆ ಸ್ಥಾನ ಪಡೆಯಲಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್ 50 ಸೀಟು ಗೆಲ್ಲಲ್ಲ!
ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಕಾಂಗ್ರೆಸ್‌ಗೆ ಪ್ರತಿಪಕ್ಷದ ಜಾಗವನ್ನು ತುಂಬಲಿ 10% ಕ್ಕಿಂತ ಹೆಚ್ಚು ಲೋಕಸಭಾ ಸ್ಥಾನಗಳು ಬೇಕಾಗುತ್ತವೆ. ಆದರೆ, ಜೂನ್ 4 ರಂದು ಫಲಿತಾಂಶ ಪ್ರಕಟವಾದಾಗ ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷವಾಗಲು ಸಾಧ್ಯವಿಲ್ಲ. ಏಕೆಂದರೆ, ಕಾಂಗ್ರೆಸ್ 50 ಕ್ಕಿಂತ ಕಡಿಮೆ ಸ್ಥಾನಗಳನ್ನು ಗೆಲ್ಲುತ್ತದೆ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ ರಾಜಕುಮಾರ (ರಾಹುಲ್ ಗಾಂಧಿ) ಪದೇ ಪದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ 2014, 2019, ಮತ್ತು ಈಗ 2024 ರ ಚುನಾವಣಾ ಭಾಷಣಗಳನ್ನು ಉಲ್ಲೇಖಿಸಿ, ಅವರು ಅದೇ ಸ್ಕ್ರಿಪ್ಟ್ ಅನ್ನು ಜನರ ಮುಂದಿಡುವುದನ್ನು ಮುಂದುವರೆಸಿದ್ದಾರೆ. ನನ್ನ ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. ಬಿಜೆಪಿ ದಾಖಲೆ ಸಂಖ್ಯೆಯ ಸಂಸದರೊಂದಿಗೆ ಸಂಸತ್ತಿಗೆ ಮರಳುತ್ತದೆ" ಎಂದು ಒಡಿಶಾದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
''ಅಟಲ್ ಬಿಹಾರಿ ವಾಜಪೇಯಿ ಸರಕಾರ ಪೋಖ್ರಾನ್‌ನಲ್ಲಿ ಪರಮಾಣು ಪರೀಕ್ಷೆ ನಡೆಸಿತ್ತು. ದೇಶಭಕ್ತಿಯ ಆದ್ಯತೆಯ ಸರ್ಕಾರವು ದೇಶದ ಹಿತಾಸಕ್ತಿ, ಭದ್ರತೆ ಮತ್ತು ಜನರ ಆಕಾಂಕ್ಷೆಗಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ತೋರಿಸಿದ್ದೇವೆ. ಪರಮಾಣು ಪರೀಕ್ಷೆಯನ್ನು ನಡೆಸಿದಾಗ, ಮೊದಲ ಬಾರಿಗೆ ಪ್ರಪಂಚದಾದ್ಯಂತ ನೆಲೆಸಿರುವ ಭಾರತೀಯ ಸಮುದಾಯವು ಹೆಮ್ಮೆ ಪಟ್ಟಿದೆ, ಜನರು ಭಾರತವನ್ನು ಗೌರವದಿಂದ ನೋಡಲು ಪ್ರಾರಂಭಿಸಿದರು ಎಂದು ನನಗೆ ನೆನಪಿದೆ" ಎಂದಿದ್ದಾರೆ.

ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಒಡಿಶಾದಲ್ಲಿ ಇತಿಹಾಸ
"ಭಾರತವು ತನ್ನ ಸಾಮರ್ಥ್ಯವನ್ನು ಜಗತ್ತು ಗುರುತಿಸುವಂತೆ ಮಾಡಿದೆ. ಮತ್ತೊಂದೆಡೆ, ಕಾಂಗ್ರೆಸ್‌ನ ಮನಸ್ಥಿತಿ ತನ್ನದೇ ದೇಶವನ್ನು ಭಯಭೀತಗೊಳಿಸಲು ಪ್ರಯತ್ನಿಸುತ್ತಿದೆ. ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ ಎಂದು ಕಾಂಗ್ರೆಸ್ ಎಚ್ಚರಿಸಿದೆ. ಈ ಭಯಭೀತ ಜನರು ದೇಶದ ಆತ್ಮಕ್ಕೆ ಧಕ್ಕೆ ತಂದಿದ್ದಾರೆ. ಇದು ಕಾಂಗ್ರೆಸ್‌ನ ಸ್ವಭಾವವಾಗಿದೆ" ಎಂದು ಪ್ರಧಾನಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, "ಕಾಂಗ್ರೆಸ್‌ನ ಈ ದೌರ್ಬಲ್ಯದಿಂದಾಗಿ ಕಾಶ್ಮೀರದ ಜನರು 60 ವರ್ಷಗಳ ಕಾಲ ಭಯೋತ್ಪಾದನೆಯ ಹಿಂಸೆಯಿಂದ ಬಳಲುತ್ತಿದ್ದರು. ದೇಶವು ಹಲವಾರು ಭಯೋತ್ಪಾದಕ ದಾಳಿಗಳನ್ನು ಎದುರಿಸಿದೆ. ಭಯೋತ್ಪಾದಕರಿಗೆ ಪಾಠ ಕಲಿಸುವ ಬದಲು ಕಾಂಗ್ರೆಸ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಭೆ ನಡೆಸುತ್ತಿದೆ ಎಂಬುದನ್ನು ಭಾರತ ಎಂದಿಗೂ ಮರೆಯಬಾರದು" ಎಂದು ಹೇಳಿದ್ದಾರೆ.












Click it and Unblock the Notifications