ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೌಂಟ್ ವಿನ್ಸನ್ ಮೇಲೆ ತ್ರಿವರ್ಣ ಧ್ವಜ, ಅರುಣಿಮಾ ಬರೆದ ಹೊಸ ದಾಖಲೆ

|
Google Oneindia Kannada News

ನವದೆಹಲಿ, ಜನವರಿ 04: "ಎಕ್ಸಲೆಂಟ್..! ಯಶಸ್ಸಿನ ಹೊಸ ಮಾಪನವನ್ನು ಸೃಷ್ಟಿಸಿದ ಅರುಣಿಮಾ ಸಿನ್ಹಾ ಅವರಿಗೆ ಅಭಿನಂದನೆಗಳು...." ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯೊಬ್ಬರನ್ನು ಬಾಯ್ತುಂಬ ಹೊಗಳಿದ್ದಾರೆ. ನಿಮ್ಮಂಥವರೇ ಈ ದೇಶದ ಹೆಮ್ಮೆ ಎಂದು ತುಂಬು ಮನಸ್ಸಿನಿಂದ ಅಭಿನಂದಿಸಿದ್ದಾರೆ!

ಅರುಣಿಮಾ ಸಿನ್ಹಾ ಎಂಬ ವಿಕಲಚೇತನ ಮಹಿಳೆ ಅಂಟಾರ್ಟಿಕಾದ ಅತೀ ಎತ್ತರದ ಶಿಖರ ಮೌಂಟ್ ವಿನ್ಸನ್ ಅನ್ನು ಏರಿರುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ವಿಕಲಚೇತನ ಮಹಿಳೆ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಭಾರತದ ಧ್ವಜವನ್ನು ಎತ್ತರದ ಶಿಖರಗಳ ಮೇಲೆ ಹಾರಿಸುವ ಮೂಲಕ ದೇಶಭಕ್ತಿ ಮೆರೆದಿದ್ದಾರೆ. ತಮ್ಮ ಈ ಸಾಧನೆಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಅರುಣಿಮಾ, 'ಭಾರತದ ಹೆಸರನ್ನು ವಿಶ್ವ ಮಟ್ಟದಲ್ಲಿ ಎತ್ತರಕ್ಕೇರಿಸುವುದಕ್ಕೆ ಸಾಧ್ಯವಾಗಿದ್ದು ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಆಶೀರ್ವಾದದಿಂದ. ಎಲ್ಲರಿಗೂ ಧನ್ಯವಾದಗಳು' ಎಂದು ಸಮಸ್ತ ಭಾರತೀಯರಿಗೆ ಕೃತಜ್ಞತೆ ಸಲ್ಲಿಸಿದ್ದರು.

PM Narendra Modi praises Arunima Sinha twitter

ಕೋಲನೂರಿ ನಿಂತ ದೇವತೆ... ಕಾಲಮೀರಿ ನಡೆದಳು...!ಕೋಲನೂರಿ ನಿಂತ ದೇವತೆ... ಕಾಲಮೀರಿ ನಡೆದಳು...!

ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, "ಅತ್ಯದ್ಭುತ! ಯಶಸ್ಸಿನ ಹೊಸ ಎತ್ತರಕ್ಕೇರಿದ ಅರುಣಿಮಾ ಸಿನ್ಹಾ ಅವರಿಗೆ ಧನ್ಯವಾದಗಳು. ಅವರು ಭಾರತದ ಹೆಮ್ಮೆ, ತಮ್ಮ ಕಠಿಣ ಪರಿಶ್ರಮದಿಂದ ಅವರು ಈ ಸಾದನೆ ಮಾಡಿದ್ದಾರೆ. ಅವರ ಭವಿಷ್ಯ ಮತ್ತಷ್ಟು ಬೆಳಗಲಿ ಎಂದು ನಾನು ಹಾರೈಸುತ್ತೇನೆ" ಎಂದಿದ್ದಾರೆ.

'ದೇಶದ ಪ್ರಧಾನ ಸೇವಕ ಈ ದೇಶಕ್ಕಾಗಿ ಈ ಪರಿ ಸಮರ್ಪಣಾ ಭಾವ ತೋರುವಾಗ ನಮ್ಮಂಥವರು ಸಾಧಿಸುವುದು ಸಹಜ. ನಮ್ಮ ಕ್ಷೇತ್ರದಲ್ಲಿ ನಾವು ದೇಶದ ಹೆಸರನ್ನು ಉತ್ತುಂಗಕ್ಕೇರಿಸಲು ಪ್ರಯತ್ನಿಸುತ್ತೇವೆ. ಭಾರತದ ಎಲ್ಲಾ ಕ್ರೀಡಾಪಟುಗಳ ಪರವಾಗಿ, ಈ ದೇಶ ನಮಗೆ ನೀಡಿದ ಪ್ರೋತ್ಸಾಹಕ್ಕೆ, ಗೌರವಕ್ಕೆ ನಾವು ಋಣಿ' ಎಂದು ಮೋದಿಯವರ ಟ್ವೀಟ್ ಗೆ ಅರುಣಿಮಾ ಪ್ರತಿಕ್ರಿಯಿಸಿದ್ದಾರೆ.

ಕ್ಯಾನ್ಸರ್ ಎಂಬ ಯಮನಿಗೆ ಸೆಡ್ಡು ಹೊಡೆದ ಗಟ್ಟಿಗಿತ್ತಿ ಶಿವಮೊಗ್ಗದ ಶ್ರುತಿಕ್ಯಾನ್ಸರ್ ಎಂಬ ಯಮನಿಗೆ ಸೆಡ್ಡು ಹೊಡೆದ ಗಟ್ಟಿಗಿತ್ತಿ ಶಿವಮೊಗ್ಗದ ಶ್ರುತಿ

ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಜನಿಸಿದ ಅರುಣಿಮಾ ಅವರು ರೈಲ್ವೇ ದುರಂತವೊಂದರಲ್ಲಿ ಒಂದು ಕಾಲನ್ನು ಕಳೆದುಕೊಂಡರು. ಆದರೂ ಅವರು ಜಗತ್ತಿನ ಅತೀ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಹತ್ತುವ ಮೂಲಕ ಈ ಸಾಧನೆ ಮಾಡಿದ ಮೊದಲ ವಿಕಲಚೇತನ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಎಲ್ಲಾ ಖಂಡಗಳ ಎತ್ತರದ ಶಿಖರಗಳನ್ನು ಏರಬೇಕು, ಅಲ್ಲಿ ಬಾರತದ ಧ್ವಜ ಹಾರಿಸಬೇಕು ಎಂಬುದು ಅವರ ಕನಸು.

English summary
PM Narendra Modi praises Arunima Sinha who is the first female amputee to climb Mount Everest on twitter
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X