ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಪ್ರಧಾನಿ ನರೇಂದ್ರ ಮೋದಿ ಒಟ್ಟು ಆಸ್ತಿ 2.23 ಕೋಟಿ

|
Google Oneindia Kannada News

ನವದೆಹಲಿ, ಆಗಸ್ಟ್ 09: ಪ್ರಧಾನಿ ನರೇಂದ್ರ ಮೋದಿ ಅವರ ಒಟ್ಟು ಆಸ್ತಿ 2.23 ಕೋಟಿ ರೂಪಾಯಿಯಾಗಿದೆ. ಇದರಲ್ಲಿ ಬಹುತೇಕ ಬ್ಯಾಂಕ್ ಠೇವಣಿಗಳಾಗಿವೆ. ಅವರು ಯಾವುದೇ ಸ್ಥಿರಾಸ್ತಿಯನ್ನು ಹೊಂದಿಲ್ಲ ಎಂದು ಪ್ರಧಾನ ಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.

ನರೇಂದ್ರ ಮೋದಿ ಅವರು 2.23 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ. ಆದರೆ ಅವರು ಗಾಂಧಿನಗರದ ಒಂದು ತುಂಡು ಭೂಮಿಯಲ್ಲಿ ತಮ್ಮ ಪಾಲನ್ನು ದಾನ ಮಾಡಿರುವುದರಿಂದ ಯಾವುದೇ ಸ್ಥಿರಾಸ್ತಿಯನ್ನು ಹೊಂದಿಲ್ಲ ಎಂದು ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಆಸ್ತಿ ವಿವರ ಹೇಳಿದೆ.

ಅವರು ಯಾವುದೇ ಬಾಂಡ್, ಷೇರು ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಯಾವುದೇ ಹೂಡಿಕೆಯನ್ನು ಹೊಂದಿಲ್ಲ. ಯಾವುದೇ ವಾಹನವನ್ನು ಹೊಂದಿಲ್ಲ, ಆದರೆ 1.73 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ.

PM Narendra Modi owns assets worth over 2.23 crore

ಮೋದಿಯವರ ಚರಾಸ್ತಿಯು ಒಂದು ವರ್ಷದ ಹಿಂದೆ 26.13 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಆದರೆ ವರ್ಷದ ಹಿಂದೆ ಮಾರ್ಚ್ 31, 2021 ರ ಮಾಹಿತಿಯಂತೆ ಅವರ ಬಳಿ 1.1 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದರು. ಅದು ಈಗ ಇಲ್ಲ.

ಪ್ರಧಾನ ಮಂತ್ರಿಗಳ ಕಚೇರಿ (PMO) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ವಿವರಗಳ ಪ್ರಕಾರ, ಮಾರ್ಚ್ 31, 2022 ರಂತೆ ಮೋದಿಯವರ ಒಟ್ಟು ಆಸ್ತಿ 2,23,82,504 ರೂಪಾಯಿಯಾಗಿದೆ.

ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಕ್ಟೋಬರ್ 2002 ಒಂದು ಫ್ಲಾಟ್‌ ಖರೀದಿಸಿದ್ದರು. ಇದಕ್ಕೆ ಮೂವರು ಮಾಲೀಕರಿದ್ದರು. ಇತ್ತೀಚೆಗೆ ಅದರ ಮಾಲೀಕತ್ವವನ್ನು ಮೋದಿ ದಾನ ಮಾಡಿದ್ದಾರೆ.

ಮಾರ್ಚ್ 31, 2022 ರಂತೆ ಪ್ರಧಾನ ಮಂತ್ರಿಯವರ ಕೈಯಲ್ಲಿದ್ದ ನಗದು 35,250 ಮತ್ತು ಅಂಚೆ ಕಚೇರಿಯಲ್ಲಿ ಅವರ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು 9,05,105 ಮೌಲ್ಯದವು. 1,89,305 ಮೌಲ್ಯದ ಜೀವ ವಿಮಾ ಪಾಲಿಸಿಗಳನ್ನು ಹೊಂದಿದ್ದಾರೆ.

ತಮ್ಮ ಆಸ್ತಿಯನ್ನು ಘೋಷಿಸಿರುವ ಪ್ರಧಾನಿಯವರ ಸಂಪುಟ ಸಹೋದ್ಯೋಗಿಗಳ ಪೈಕಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾರ್ಚ್ 31, 2022 ರಂತೆ 2.54 ಕೋಟಿ ಮೌಲ್ಯದ ಚರ ಮತ್ತು 2.97 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ.

English summary
Prime Minister Narendra Modi owns assets worth over 2.23 crore. He has donated his share in a piece of land in Gandhinagar. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X