ಜ.11ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮೋದಿ ಸಭೆ
ನವದೆಹಲಿ, ಜನವರಿ 08: ಕೊರೊನಾ ಲಸಿಕೆ ವಿತರಣೆ ಮುನ್ನ ಅಗತ್ಯ ಸಿದ್ಧತೆಗಳ ಕುರಿತು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಜನವರಿ 11ರಂದು ವರ್ಚುಯಲ್ ಸಭೆ ನಡೆಸಲಿದ್ದಾರೆ.
ಭಾರತದಲ್ಲಿ ಕೊರೊನಾ ವೈರಸ್ ಲಸಿಕೆ ವಿತರಣೆ ಕಾರ್ಯ ಕೆಲವೇ ದಿನಗಳಲ್ಲಿ ಆರಂಭಗೊಳ್ಳುವುದೆಂದು ಕೇಂದ್ರ ಸರ್ಕಾರ ತಿಳಿಸಿದ್ದು, ಈವರೆಗೂ ದೇಶಾದ್ಯಂತ ಎರಡು ಸುತ್ತುಗಳ ಡ್ರೈರನ್- ಲಸಿಕೆ ತಾಲೀಮು ನಡೆಸಲಾಗಿದೆ. ಶುಕ್ರವಾರ ದೇಶಾದ್ಯಂತ 736 ಜಿಲ್ಲೆಗಳಲ್ಲಿ ಎರಡನೇ ಡ್ರೈ ರನ್ ನಡೆಸಲಾಗಿದೆ.
ಶೀಘ್ರದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕೊರೊನಾ ಲಸಿಕೆ ದೊರೆಯಲಿದೆ: ಹರ್ಷವರ್ಧನ್
ಜನವರಿ 11ರಂದು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಿರುವ ಪ್ರಧಾನಿ, ಕೊರೊನಾ ಲಸಿಕೆ ಕಾರ್ಯಕ್ರಮಕ್ಕೆ ರಾಜ್ಯಗಳಲ್ಲಿನ ಸಿದ್ಧತೆ ಕುರಿತು ಪರಿಶೀಲಿಸಲಿದ್ದಾರೆ. ಈವರೆಗೂ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆಯಲಿದ್ದಾರೆ.
ಲಸಿಕೆ ನೀಡುವ ದಿನಾಂಕವನ್ನು ಸರ್ಕಾರ ಇನ್ನೂ ನಿಗದಿಪಡಿಸಿಲ್ಲ. ಆದರೆ ಕೆಲವೇ ದಿನಗಳಲ್ಲಿ ಲಸಿಕೆ ಲಭ್ಯವಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶುಕ್ರವಾರ ತಿಳಿಸಿದ್ದಾರೆ. ಲಸಿಕೆಯ ಪೂರ್ವಾಭ್ಯಾಸದ ಸಂದರ್ಭ ಲೋಪದೋಷಗಳನ್ನು ಗುರುತಿಸಿ, ಅಗತ್ಯ ಸೌಕರ್ಯವನ್ನು ಒದಗಿಸಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿಸುವ ಅತ್ಯುತ್ತಮ ಮಾರ್ಗಗಳನ್ನು ಕಂಡುಕೊಳ್ಳಲು ಡ್ರೈ ರನ್ ನಡೆಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಹಾಗೂ ಆಕ್ಸ್ ಫರ್ಡ್ ಆಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಭಾರತದಲ್ಲಿ ಅನುಮತಿ ದೊರೆತಿದೆ.
ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು
ಪ್ರಸ್ತುತ ಬ್ರಿಟನ್ ಕೊರೊನಾ ರೂಪಾಂತರ ಸೋಂಕಿನ ಪ್ರಕರಣಗಳು ಭಾರತದಲ್ಲಿಯೂ ಕಂಡುಬಂದಿದ್ದು, ಇದರ ವಿರುದ್ಧವೂ ಹೋರಾಡುವ ಹೊಸ ಸವಾಲು ಸರ್ಕಾರದ ಮುಂದಿದೆ. ಸದ್ಯಕ್ಕೆ ಭಾರತದಲ್ಲಿ ಬ್ರಿಟನ್ ಹೊಸ ರೂಪಾಂತರ ಸೋಂಕಿನ ಪ್ರಕರಣಗಳು 82ಕ್ಕೆ ಏರಿಕೆಯಾಗಿದೆ. ಭಾರತ-ಬ್ರಿಟನ್ ನಡುವಿನ ವಿಮಾನ ಯಾನವು ಇಂದಿನಿಂದ ಆರಂಭಗೊಂಡಿದ್ದು, ಬ್ರಿಟನ್ ನಿಂದ ಮರಳಿದವರಿಗೆ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ ವಿಧಿಸಲಾಗುತ್ತಿದೆ.