ಏನಿದು ಮೋದಿ ಕನಸಿನ ಸ್ಟ್ಯಾಂಡಪ್ ಇಂಡಿಯಾ ಯೋಜನೆ?

Subscribe to Oneindia Kannada

ನವದೆಹಲಿ, ಏಪ್ರಿಲ್, 06: ಪರಿಶಿಷ್ಟ ಜಾತಿ ಮತ್ತು ಪ೦ಗಡಗಳು ಹಾಗೂ ಮಹಿಳೆಯರಲ್ಲಿ ಉದ್ಯಮಶೀಲತೆ ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಸ್ಟ್ಯಾಂಡಪ್ ಇಂಡಿಯಾಕ್ಕೆ ಚಾಲನೆ ನೀಡಿದ್ದಾರೆ.

ಮಾಜಿ ಉಪಪ್ರಧಾನಿ ಜಗಜೀವನ್ ರಾಮ್ ಜನ್ಮದಿನಾಚರಣೆ ಸಂದರ್ಭದಲ್ಲಿ ಮೋದಿ ಯೋಜನೆಗೆ ನೋಯ್ಡಾದಲ್ಲಿ ಚಾಲನೆ ನೀಡಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕಾರ್ಯಕ್ರಮಕ್ಕೆ ಗೈರಾಗಿದ್ದರು.[ಪ್ರಧಾನಮಂತ್ರಿ ಜನಧನ ಯೋಜನೆ ಎಂದರೇನು?]

narendra modi

ಸ್ಟ್ಯಾಂಡಪ್ ಇಂಡಿಯಾ ಯೋಜನೆಯ ಹೈಲೈಟ್ಸ್
* ದಲಿತ್ ಇ೦ಡಿಯನ್ ಚೇ೦ಬರ್ ಆಫ್ ಕಾಮಸ್‍೯ ಆಂಡ್ ಇ೦ಡಸ್ಟ್ರಿ, ನಬಾಡ್‍೯ ಯೋಜನೆಗೆ ಪೂರಕವಾಗಿ ಕೆಲಸ ಮಾಡಲಿವೆ.
* ಪ್ರಧಾನಮ೦ತ್ರಿ ಮುದ್ರಾ ಯೋಜನೆ ಅಧೀನದ ಭಾರತೀಯ ಮ್ಯೆಕ್ರೋ ಕ್ರೆಡಿಟ್(ಬಿಎ೦ಸಿ) ಯೋಜನೆ ಪ್ರಕಾರ 5100 ಇ-ರಿಕ್ಷಾ ವಿತರಣೆ ಕಾಯ೯ಕ್ರಮವನ್ನೂ ಪ್ರಧಾನಿ ನೆರವೇರಿಸಿದರು.[ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]
* ಪ್ರಧಾನಮ೦ತ್ರಿ ಜನಧನ ಯೋಜನೆ, ಪ್ರಧಾನಮ೦ತ್ರಿ ಸುರಕ್ಷಾ ಯೋಜನೆ, ಪ್ರಧಾನಮ೦ತ್ರಿ ಜೀವನ್ ಜ್ಯೋತಿ ಯೋಜನೆ, ಅಟಲ್ ಪಿ೦ಚಣಿ ಯೋಜನೆಗಳಿಗೂ ಇದು ಪೂರಕವಾಗಿ ಕೆಲಸ ಮಾಡಲಿದೆ.
* ಹಿಂದುಳಿದ ಸಮುದಾಯದ 1.25 ಲಕ್ಷ ಯುವಜನರಿಗೆ ಸಾಲ ವಿತರಣೆ. ದಲಿತ ಮಹಿಳೆಯರಿಗೆ ಮೊದಲ ಆದ್ಯತೆ.
* ಸಾಲಗಾರರಿಗೆ ಸಾಲ ಮ೦ಜೂರಾತಿ ಪೂವ೯ ತರಬೇತಿ, ಸಾಲ ಸೌಲಭ್ಯ ಬಳಕೆ, ಮರುಪಾವತಿ, ಮಾರುಕಟ್ಟೆ ನಿವ೯ಹಣೆ ಸೇರಿದ೦ತೆ ಉದ್ಯಮಶೀಲತೆಯ ತರಬೇತಿ ಸೇರಿ ಪೂಣ೯ ಬೆ೦ಬಲ.

ಪ್ರಧಾನಿ ಮೋದಿ ಭಾಷಣದಲ್ಲಿ ಏನು ಹೇಳಿದರು?
* ಇ -ರಿಕ್ಷಾ ಚಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು
* ಈ ತಳ ವರ್ಗದವರ ಅಭಿವೃದ್ಧಿಯೇ ದೇಶದ ನಿಜವಾದ ಅಭಿವೃದ್ಧಿ
* ಅರ್ಧಕ್ಕೂ ಹೆಚ್ಚು ರಿಕ್ಷಾ ಚಾಲಕರು ತಮ್ಮ ದುಡಿಮೆಯನ್ನು ಬಾಡಿಗೆಗೆ ನೀಡುತ್ತಿದ್ದಾರೆ. ಇದು ಬದಲಾಗಬೇಕು.
* ಯಾರು ಕೆಲಸ ಹುಡುಕುತ್ತಿದ್ದಾರೆಯೋ ಅವರೆ ಬೇರೆಯವರಿಗೆ ಕೆಲಸ ನೀಡುವಂತೆ ಆಗಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi on Tuesday launched the government's Stand Up India initiative on the birth anniversary former deputy prime minister Babu Jagjivan Ram. Launching the initiative at Noida, PM Modi said Jagjivan Ram served the nation for years.
Please Wait while comments are loading...