Narendra Modi: ಕ್ಷಮೆ ಕೇಳಿದ ಪ್ರಧಾನಿ ನರೇಂದ್ರ ಮೋದಿ

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿತಕ್ಕೆ ಸಂಬಂಧಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದು, ಕ್ಷಮೆ ಯಾಚಿಸಿದ್ದಾರೆ. ಛತ್ರಪತಿ ಶಿವಾಜಿ ಪ್ರತಿಮೆ ಕುಸಿತದಿಂದ ನೋವಾಗಿರುವ ಎಲ್ಲಾ ಜನತೆ ಬಳಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಒಂದು ವರ್ಷದ ಹಿಂದೆಯಷ್ಟೇ ಪ್ರಧಾನಿ ಮೋದಿ ಈ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದರು, ಭಾರಿ ಮಳೆ ಗಾಳಿಯಿಂದಾಗಿ ಕಂಚಿನ ಪ್ರತಿಮೆ ಕುಸಿದು ಬಿದ್ದಿದ್ದರಿಂದ ನಿರ್ಮಾಣ ಕಾಮಗಾರಿ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ನಾನು ಇಲ್ಲಿಗೆ ಬಂದಿಳಿದ ಕ್ಷಣದಲ್ಲಿ, ಪ್ರತಿಮೆ ಕುಸಿತದ ಬಗ್ಗೆ ನಾನು ಮೊದಲು ಶಿವಾಜಿಯ ಬಳಿ ಕ್ಷಮೆಯಾಚಿಸಿದೆ. ಪ್ರತಿಮೆ ಕುಸಿತದಿಂದ ಯಾರ ಮನಸ್ಸಿಗೆ ನೋವಾಗಿದೆಯೋ ಅವರೆಲ್ಲರ ಬಳಿ ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದ್ದಾರೆ.

PM Narendra Modi Apologises for Shivaji Statue Collapse at Rajkot Fort

"ಛತ್ರಪತಿ ಶಿವಾಜಿ ಮಹಾರಾಜರನ್ನು ತಮ್ಮ ಆರಾಧ್ಯ ದೈವ ಎಂದು ಪರಿಗಣಿಸುವವರು ಮತ್ತು ಘಟನೆಯಿಂದ ನೋವಾದವರಿಗೆ ನಾನು ತಲೆಬಾಗಿ ಕ್ಷಮೆ ಯಾಚಿಸುತ್ತೇಣೆ. ನಮ್ಮ ಮೌಲ್ಯಗಳು ವಿಭಿನ್ನವಾಗಿದೆ." ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನೌಕಾಪಡೆಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು. ಈ ಪ್ರತಿಮೆಯು ಮರಾಠಾ ನೌಕಾಪಡೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕಡಲ ರಕ್ಷಣೆ ಮತ್ತು ಭದ್ರತೆಯ ಪರಂಪರೆಯನ್ನು ಗೌರವಿಸುವ ಗುರಿಯನ್ನು ಹೊಂದಲಾಗಿತ್ತು, ಆಧುನಿಕ ಭಾರತೀಯ ನೌಕಾಪಡೆಯೊಂದಿಗೆ ಐತಿಹಾಸಿಕ ಸಂಬಂಧವನ್ನು ಸಾರಿ ಹೇಳುವ ಉದ್ದೇಶದಿಂದ ನಿರ್ಮಾಣ ಮಾಡಲಾಗಿತ್ತು.

ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟವು ಪ್ರತಿಮೆ ಕುಸಿತಕ್ಕೆ ಆಡಳಿತಾರೂಢ ಸರ್ಕಾರದ ಭ್ರಷ್ಟಾಚಾರವೇ ಕಾರಣ ಎಂದು ಆರೋಪಿಸಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದೆ.

ಪ್ರತಿಮೆ ಕುಸಿತದ ಘಟನೆಯನ್ನು ತನಿಖೆ ಮಾಡಲು ಭಾರತೀಯ ನೌಕಾಪಡೆಯ ನೇತೃತ್ವದ ಜಂಟಿ ತಾಂತ್ರಿಕ ಸಮಿತಿಯನ್ನು ಮಹಾರಾಷ್ಟ್ರ ಸರ್ಕಾರ ಮತ್ತು ತಾಂತ್ರಿಕ ತಜ್ಞರ ಪ್ರತಿನಿಧಿಗಳೊಂದಿಗೆ ತಂಡವನ್ನು ರಚನೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+