ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ ಸೇತು App ಡೌನ್ಲೋಡ್ ಮಾಡಿಕೊಳ್ಳಿ: ಮೋದಿ ಕೊಟ್ಟ ಟಾಸ್ಕ್

|
Google Oneindia Kannada News

ನವದೆಹಲಿ, ಏಪ್ರಿಲ್ 14: ಕೊರೊನಾವೈರಸ್ ವಿರುದ್ಧ ನಿರ್ಣಾಯಕ ಹೋರಾಟದಲ್ಲಿ ಸಾರ್ವಜನಿಕರ ಸಹಕಾರವನ್ನು ಮತ್ತೊಮ್ಮೆ ಕೇಂದ್ರ ಸರ್ಕಾರವು ಬಯಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಲಾಕ್ಡೌನ್ ವಿಸ್ತರಣೆ ಮಾಡಿ ಮಾತನಾಡುತ್ತಾ, ಆರೋಗ್ಯ ಸೇತು ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡು ಬಳಕೆ ಮಾಡಿ, ಇತರರಿಗೂ ತಿಳಿಸಿ ಎಂದು ಟಾಸ್ಕ್ ನೀಡಿದ್ದಾರೆ.

ಮಾರ್ಚ್ 23ರಿಂದ ಏಪ್ರಿಲ್ 14ರ ತನಕ ಮೊದಲ ಅವಧಿಯಲ್ಲಿ 21 ದಿನಗಳ ಲಾಕ್ಡೌನ್ ಅವಧಿಯನ್ನು ದೇಶ ಎದುರಿಸಿದೆ. ಈಗ ಮೇ 3ರ ತನಕ 19 ದಿನಗಳ ಲಾಕ್ಡೌನ್ ವಿಸ್ತರಣೆಯಾಗಿದೆ. ಆರ್ಥಿಕ ಪರಿಸ್ಥಿತಿಯಿಂದ ದೇಶದ ಜನರ ಪ್ರಾಣ ಮುಖ್ಯ ಎಂದು ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದರು. ಜೊತೆಗೆ ಏಳು ಸೂತ್ರಗಳನ್ನು ನೀಡಿ, ಇದನ್ನು ತಪ್ಪದೇ ಮೇ3 ರ ತನಕಪಾಲಿಸಿ, ರಾಷ್ಟ್ರವನ್ನು ಜಾಗೃತವಾಗಿಡಿ ಎಂದರು.

ಇ- ಪಾಸ್ ಆಗಿ ಆರೋಗ್ಯ ಸೇತು ಆಪ್ ಬಳಸಲು ಮೋದಿ ಕರೆಇ- ಪಾಸ್ ಆಗಿ ಆರೋಗ್ಯ ಸೇತು ಆಪ್ ಬಳಸಲು ಮೋದಿ ಕರೆ

ಏಳು ಸೂತ್ರಗಳಲ್ಲಿಕೊರೊನಾವೈರಸ್ ಸೋಂಕು ಹರಡದಂತೆ ತಡೆಯಲು ಹೊರ ತಂದಿರುವ ಆರೋಗ್ಯ ಸೇತು ಆಪ್ ಡೌನ್ಡೌಡ್ ಮಾಡಿ ಬಳಸಿ, ಇತರರಿಗೂ ತಿಳಿಸಿ ಎಂಬ ಅಂಶವು ಪ್ರಮುಖವಾಗಿದೆ. ಆರೋಗ್ಯ ಸೇತು ಆಪ್ಲಿಕೇಷನ್ ಬಳಸಿ ಒಂದು ಕಡೆಯಿಂದ ಇನ್ನೊಂದೆಡೆಗೆ ತೆರಳಬಹುದು. ಇದನ್ನು ಇ ಪಾಸ್ ನಂತೆ ಪರಿಗಣಿಸುವಂತೆ ಪ್ರಧಾನಿ ಸಚಿವಾಲಯವು ಸೂಚಿಸಿದೆ.

PM Modi wants you to download the Aarogya Setu App: How it works and where to download

ಕೊರೊನಾವೈರಸ್ ಸೋಂಕು, ಹೋಂ ಕ್ವಾರಂಟೈನ್ ಇರುವವರು ನಡೆದುಕೊಳ್ಳಬೇಕಾದ ರೀತಿ ನೀತಿ, ಲಾಕ್ಡೌನ್ ನಿಯಮದ ಬಗ್ಗೆ ಫೇಸ್ಬುಕ್, ವಾಟ್ಸಾಪ್, ಟೆಲಿಗ್ರಾಂ, ಇನ್ಸ್ಟಾಗ್ರಾಂ, ಟಿಕ್ ಟಾಕ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈಗ ಮತ್ತೊಂದು ಆಂಡ್ರಾಯ್ಡ್ ಆಪ್ ನಿಮ್ಮ ಮುಂದಿಡಲಾಗಿದೆ. ಈ ಮೂಲಕ ಸೋಂಕಿತ ವ್ಯಕ್ತಿಗಳನ್ನು ಟ್ರ್ಯಾಕ್ ಮಾಡಿ, ಆರೊಗ್ಯವಂತರಿಗೆ ರೋಗ ಹರಡದಂತೆ ತಡೆಗಟ್ಟಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಇ ಪಾಸ್ ಪಡೆಯುವುದು ಹೇಗೆ?ಲಾಕ್‌ಡೌನ್ ಸಂದರ್ಭದಲ್ಲಿ ಇ ಪಾಸ್ ಪಡೆಯುವುದು ಹೇಗೆ?

ವಾಟ್ಸಾಪ್ ಹಾಗೂ ಫೇಸ್ಬುಕ್ ಮೆಸೇಂಜರ್ ಆಪ್ ಮೂಲಕ ರಿಯಲ್ ಟೈಂನಲ್ಲಿ ಚಾಟ್ ಬಾಟ್ ಬಳಸಿ ಮಾಹಿತಿ ಪಡೆಯುವ ಸೌಲಭ್ಯ ಸದ್ಯ ಬಳಕೆಯಲ್ಲಿದೆ. ಆಂಡ್ರಾಯ್ಡ್ ಅಪ್ಲಿಕೇಷನ್ ನಲ್ಲಿ ಅಪೋಲೋ ಆಸ್ಪತ್ರೆಯ ಎಐ ಆಧಾರಿತ ಚಾಟ್ ಬಾಟ್ ಮಾದರಿಯಲ್ಲಿ ಕನ್ನಡ ಭಾಷೆಯಲ್ಲೇಮಾಹಿತಿ ಹಾಗೂ ನೆರವು ಪಡೆದುಕೊಳ್ಳಬಹುದು.

ಲಾಕ್ಡೌನ್: ಪ್ರಧಾನಿ ಮೋದಿ ನೀಡಿದ ಕಟ್ಟುನಿಟ್ಟಿನ ಸಪ್ತಸೂತ್ರಗಳುಲಾಕ್ಡೌನ್: ಪ್ರಧಾನಿ ಮೋದಿ ನೀಡಿದ ಕಟ್ಟುನಿಟ್ಟಿನ ಸಪ್ತಸೂತ್ರಗಳು

ಈ ಆಪ್ ಮೂಲಕ ಕೊವಿಡ್19 ಪಾಸಿಟಿವ್ ರೋಗಿಗಳ ಚಲನವಲನಗಳನ್ನು ರಿಯಲ್ ಟೈಮಲ್ಲಿ ಟ್ರ್ಯಾಕ್ ಮಾಡಬಹುದು. ಕೊರೊನಾ ಸೋಂಕಿತರು, ಹೋಂ ಕ್ವಾರಂಟೈನ್ ಆಗಿರುವವರು ಎಲ್ಲೆಲ್ಲಿದ್ದಾರೆ ಎಂದು ಗುರುತಿಸಬಹುದು. ಒಂದು ವೇಳೆ ಸೋಂಕಿತ ವ್ಯಕ್ತಿಯೇನಾದರೂ ಆರೋಗ್ಯವಂತರ ಬಳಿಗೆ(1 ಮೀಟರ್ ಅಂತರ) ಸುಳಿದರೆ ಅಲರ್ಟ್ ನೀಡಲಿದೆ. ಗೂಗಲ್ ಪ್ಲೇಸ್ಟೋರಿನಲ್ಲಿ NIC eGov Mobile AppsTools ಅಭಿವೃದ್ಧಿಪಡಿಸಿರುವ Aarogya Setu ಆಪ್ ಮಾತ್ರ ಡೌನ್ಲೋಡ್ ಮಾಡಿಕೊಳ್ಳಿ. 11 ಭಾಷೆಗಳಲ್ಲಿ ಈ ಆಪ್ ಲಭ್ಯವಿದೆ.

ಆಂಡ್ರಾಯ್ಡ್ ಫೋನ್ ಬಳಕೆದಾರರು ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್: ಗೂಗಲ್ ಪ್ಲೇಸ್ಟೋರ್ ಲಿಂಕ್ ಕ್ಲಿಕ್ ಮಾಡಿ

ಐಒಸ್ ಆಧಾರಿತ ಆಪಲ್ ಸಾಧನಗಳಲ್ಲಿ ಅನುಸ್ಥಾಪಿಸಲು ಐಸ್ಟೋರಿನಲ್ಲಿ ಲಿಂಕ್ ಕ್ಲಿಕ್ ಮಾಡಿ

English summary
Among the seven promises that the PM asked for, one of them was to download the Aarogya Setu application. The PM also asked everyone to even encourage friends and family to download the app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X