• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

47ನೇ ಜಿ7 ಶೃಂಗದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನ ಮಂತ್ರಿ ಮೋದಿ

|
Google Oneindia Kannada News

ನವದೆಹಲಿ, ಜೂನ್ 10: ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಆಹ್ವಾನದ ಮೇರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜೂನ್ 12 ಮತ್ತು 13 ರಂದು ವರ್ಚುವಲ್ ಮಾದರಿಯಲ್ಲಿ ನಡೆಯಲಿರುವ ಜಿ.7 ಶೃಂಗದ ಬಾಹ್ಯ (ಔಟ್ ರೀಚ್) ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ.

ಪ್ರಸ್ತುತ ಇಂಗ್ಲೆಂಡ್ ಜಿ.7 ರ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ ಮತ್ತು ಭಾರತ, ಆಸ್ಟ್ರೇಲಿಯಾ, ಕೊರಿಯಾ ಗಣತಂತ್ರ ಮತ್ತು ದಕ್ಷಿಣ ಆಫ್ರಿಕಾಗಳನ್ನು ಜಿ.7 ಶೃಂಗಕ್ಕೆ ಅತಿಥಿ ರಾಷ್ಟ್ರಗಳನ್ನಾಗಿ ಆಹ್ವಾನಿಸಿದೆ. ಹೈಬ್ರಿಡ್ ಮಾದರಿಯಲ್ಲಿ ಸಭೆ ನಡೆಯಲಿದೆ.

ಬ್ರಿಟನ್ ಜಿ7 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನಬ್ರಿಟನ್ ಜಿ7 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ

"ಉತ್ತಮವಾಗಿ ಮರು ನಿರ್ಮಾಣ ಮಾಡಿ" ಎಂಬುದು ಶೃಂಗದ ವಿಷಯ ಶೀರ್ಷಿಕೆಯಾಗಿದೆ ಮತ್ತು ಇಂಗ್ಲೆಂಡ್ ಅದರ ಅಧ್ಯಕ್ಷತೆಗೆ ನಾಲ್ಕು ಆದ್ಯತಾ ರಂಗಗಳನ್ನು ರೂಪಿಸಿದೆ. ಅವುಗಳೆಂದರೆ ಕೊರೊನಾದಿಂದ ಜಾಗತಿಕ ಪುನಶ್ಚೇತನ; ಭವಿಷ್ಯದ ಜಾಗತಿಕ ಸಾಂಕ್ರಾಮಿಕಗಳ ವಿರುದ್ಧ ಪುನಶ್ಚೇತನವನ್ನು ಬಲಪಡಿಸುವುದು; ಮುಕ್ತ ಮತ್ತು ನ್ಯಾಯೋಚಿತ ವ್ಯಾಪಾರವನ್ನು ಪ್ರಚುರಪಡಿಸುವ ಮೂಲಕ ಭವಿಷ್ಯದ ಸಮೃದ್ಧಿಗೆ ಉತ್ತೇಜನ; ವಾತಾವರಣ ಬದಲಾವಣೆಯನ್ನು ನಿಭಾಯಿಸುವುದು ಮತ್ತು ಭೂಗ್ರಹದ ಜೀವವೈವಿಧ್ಯವನ್ನು ಕಾಪಾಡುವುದು, ಹಂಚಿಕೊಂಡ ಮೌಲ್ಯಗಳು ಹಾಗು ಮುಕ್ತ ಸಮಾಜಗಳನ್ನು ಬೆಂಬಲಿಸುವುದು.

PM Modi to attend virtual G7 summit on June 12, 13

ಆರೋಗ್ಯ ಮತ್ತು ವಾತಾವರಣ ಬದಲಾವಣೆಗೆ ಗಮನ ನೀಡಿ ಜಾಗತಿಕ ಸಾಂಕ್ರಾಮಿಕದಿಂದ ಪುನಶ್ಚೇತನ ಕುರಿತಂತೆ ನಾಯಕರು ವಿಚಾರ ವಿನಿಮಯ ನಡೆಸುವ ನಿರೀಕ್ಷೆ ಇದೆ.

ಜಿ.7 ಸಭೆಯಲ್ಲಿ ಪ್ರಧಾನ ಮಂತ್ರಿ ಪಾಲ್ಗೊಳ್ಳುತ್ತಿರುವುದು ಇದು ಎರಡನೇ ಬಾರಿ. 2019 ರಲ್ಲಿ ಫ್ರೆಂಚ್ ಅಧ್ಯಕ್ಷತೆಯಲ್ಲಿ ನಡೆದ ಜಿ.7 ರ ಬಿರ್ರಿಟ್ಜ್ ಸಮಿತಿಯಲ್ಲಿ "ಸದ್ಭಾವನಾ ಪಾಲುದಾರ" ನಾಗಿ ಪಾಲ್ಗೊಳ್ಳಲು ಭಾರತಕ್ಕೆ ಆಹ್ವಾನ ನೀಡಲಾಗಿತ್ತು ಮತ್ತು ಪ್ರಧಾನ ಮಂತ್ರಿ ಅವರು "ವಾತಾವರಣ, ಜೀವ ವೈವಿಧ್ಯ ಮತ್ತು ಸಾಗರಗಳು" ಹಾಗು "ಡಿಜಿಟಲ್ ಪರಿವರ್ತನೆ" ಅಧಿವೇಶನಗಳಲ್ಲಿ ಭಾಗವಹಿಸಿದ್ದರು.

English summary
At the invitation of UK Prime Minister Boris Johnson, Prime Minister Narendra Modi will participate in the Outreach Sessions of the G7 Summit on 12 and 13 June in virtual format.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion