ವಿಧಾನಸಭೆ ಚುನಾವಣೆ: ತ್ರಿಪುರದಲ್ಲಿ ಶುರು ಮೋದಿ ಹವಾ!
Recommended Video

ತ್ರಿಪುರದಲ್ಲಿ ಶುರು ಮೋದಿ ಹವಾ | Oneindia Kannada
ಅಗರ್ತಲ, ಫೆಬ್ರವರಿ 15: ಈಶಾನ್ಯ ರಾಜ್ಯವಾದ ತ್ರಿಪುರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಘಟಾನುಘಟಿ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಪ್ರಚಾರ ಕಾರ್ಯ ಆರಂಭಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದು(ಫೆ.15) ತ್ರಿಪುರದಲ್ಲಿ ಪ್ರಚಾರ ಕಾರ್ಯ ಆರಂಭಿಸಲಿದ್ದು, ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಜನರಲ್ಲಿ ಮನವಿ ಮಾಡಿಕೊಳ್ಳಲಿದ್ದಾರೆ.
ತ್ರಿಪುರದಲ್ಲಿ ಹಲವು ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿರುವ ಮೋದಿ, ನಂತರ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.

ಫೆ.8 ರಂದು ತ್ರಿಪುರದಲ್ಲಿ ಪ್ರಚಾರ ಸಭೆ ನಡೆಸಿದ್ದ ಮೋದಿ, ಹಾಲಿ ಮಾಣಿಕ್ ಸರ್ಕಾರ್ ಆಧಿಪತ್ಯಕ್ಕೆ ಅಂತ್ಯ ಹಾಡಲು ಕರೆ ನೀಡಿದ್ದರು.
ಒಟ್ಟು 60 ಸ್ಥಾನಗಳ ತ್ರಿಪುರ ವಿಧಾನಸಭೆ ಚುನಾವಣೆ ಇದೇ ತಿಂಗಳು(ಫೆಬ್ರವರಿ) 18 ರಂದು ನಡೆಯಲಿದ್ದು, ಮಾರ್ಚ್ 3 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications