ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ವಿರುದ್ಧ ಹೋರಾಟಕ್ಕೆ 150 ದೇಶಗಳಿಗೆ ಭಾರತ ನೆರವು

|
Google Oneindia Kannada News

ನವದೆಹಲಿ, ಜುಲೈ 17: ಕೊವಿಡ್ 19 ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತವು ಪ್ರಮುಖ ಪಾತ್ರವಹಿಸಿದ್ದು, ಭಾರತವು 150ಕ್ಕೂ ಹೆಚ್ಚು ದೇಶಗಳಿಗೆ ನೆರವು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Recommended Video

B Srimalu ಆರೋಗ್ಯ ಸಚಿವರಾಗಿ ಹೀಗೆ ಹೇಳಬಾರದಿತ್ತಾ ? | Oneindia Kannada

ಕೊವಿಡ್ ವಿರುದ್ಧದ ಹೋರಾಟದ ಸಂದರ್ಭದಲ್ಲಿ 150ಕ್ಕೂ ಅಧಿಕ ದೇಶಗಳಿಗೆ ವೈದ್ಯಕೀಯ ಮತ್ತು ಇತರೆ ಸಹಕಾರ ನೀಡಲಾಗಿದೆ, ಹಾಗೆಯೇ ಭಾರತದಲ್ಲಿಯೂ ಸಾಕಷ್ಟು ತುರ್ತು ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ ಎಂದು ವಿಶ್ವ ಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ಮಂಡಳಿಯನ್ನುದ್ದೇಶಿಸಿ ಪ್ರಧಾನಿ ಹೇಳಿದ್ದಾರೆ.

PM Modi Says India Have Extended Medical And Other Assistance To Over 150 Countries

ಭಾರತವು ವಿಶ್ವದ ಒಂದನೇ ಆರರಷ್ಟು ಜನಸಂಖ್ಯೆಯನ್ನು ಹೊಂದಿದೆ. ಹೀಗಾಗಿ ನಮ್ಮ ಜವಾಬ್ದಾರಿಯನ್ನು ನಾವು ಅರಿತಿದ್ದೇವೆ. ಕೊರೊನಾದ ಕಾರದಿಂದ ವಿಶ್ವದೆಲ್ಲೆಡೆ ಆರ್ಥಿಕ ಅಸ್ಥಿರತೆ ನಿರ್ಮಾಣವಾಗಿದೆ. ಪರಿಸ್ಥಿತಿ ಬದಲಾಗುತ್ತಿದೆ. ಇದೊಂದು ಅವಕಾಶವೆಂದು ತಿಳಿದುಕೊಂಡು, ಆರ್ಥಿಕ ಪುನರ್ ನಿರ್ಮಾಣದತ್ತ ಹೆಜ್ಜೆ ಹಾಕಬೇಕಿದೆ. ಭಾರತ ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮೋದಿ ಹೇಳಿದ್ದಿಷ್ಟು
-ಭೂಕಂಪವೇ ಇರಲಿ ಚಂಡಮಾರುತವೇ ಇರಲಿ ಅಥವಾ ಎಬೋಲಾ ರೀತಿಯ ಅನಾರೋಗ್ಯದ ಸಮಸ್ಯೆಗಳೇ ಇರಲಿ, ಅದು ನೈಸರ್ಗಿಕ ಅಥವಾ ಮಾನವ ನಿರ್ಮಿತವಾಗಿದ್ದರೂ ಭಾರತ ತ್ವರಿತವಾಗಿ ಜಗತ್ತಿಗೆ ಸ್ಪಂದಿಸಿದೆ.
-ಎಲ್ಲರ ನಂಬಿಕೆ ಗಳಿಸಿ ಎಲ್ಲರೊಂದಿಗೆ ಸಾಗುವುದು ಭಾರತದ ಮಂತ್ರವಾಗಿದೆ, ಅದಕ್ಕಾಗಿಯೇ ನಾವು ಸಬ್‌ ಕಾ ಸಾಥ್, ಸಬ್ ಕಾ ವಿಕಾಸ್, ಸಬ್‌ ಕಾ ವಿಶ್ವಾಸ್ ನಮ್ಮ ಆಡಳಿತ ಉದ್ದೇಶವಾಗಿದೆ.
-ಎರಡನೇ ವಿಶ್ವ ಮಹಾಯುದ್ಧದ ಬಳಿಕ ವಿಶ್ವ ಸಂಸ್ಥೆ ಹುಟ್ಟಿಕೊಂಡಿತು, ಈಗ ಕೊರೊನಾದ ಬಳಿಕ ವಿಶ್ವ ಸಂಸ್ಥೆಯ ಮರುಹುಟ್ಟು ಹಾಗೂ ಸುಧಾರಣೆಗೆ ಸೂಕ್ತ ಸಮಯವಾಗಿದೆ, ಅವಕಾಶವನ್ನು ಕೈ ಚೆಲ್ಲಬಾರದು.
-ವಿಶ್ವ ಸಂಸ್ಥೆಯ 193 ರಾಷ್ಟ್ರಗಳು ಸಾಕಷ್ಟು ನಿರೀಕ್ಷೆ ಹೊಂದಿದ್ದು, ವಿಶ್ವ ಸಂಸ್ಥೆಯ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ.
-ಕೊರೊನಾದ ಬಳಿಕ ಭಾರತದಲ್ಲಿ ಸಾಕಷ್ಟು ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ
-ಬಡವರಿಗೆ ಉಚಿತ ಆಹಾರ ವಿತರಣೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

English summary
Prime minister Narendra Modi Participated In UN Economic and Social Council session. He Said that India Have extended medical and other assistance to over 150 Countiries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X