ಕೊಚ್ಚಿ ಮೆಟ್ರೋ ಉದ್ಘಾಟನೆ ಸಮಯದಲ್ಲಿ ಮೋದಿ ಹತ್ಯೆಗೆ ಸಂಚು ರೂಪುಗೊಂಡಿತ್ತೆ?
ಕೊಚ್ಚಿ(ಕೇರಳ), ಜೂನ್ 21: ಇತ್ತೀಚೆಗಷ್ಟೆ ಅಂದರೆ ಜೂನ್ 17 ರಂದು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಕೇರಳದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆ ಪಡೆದ ಕೊಚ್ಚಿ ಮೆಟ್ರೋವನ್ನು ಉದ್ಘಾಟಿಸಿದ್ದು ನೆನೆಪಿರಬಹುದು. ಆಗ ಕೇರಳದ ಕೊಚ್ಚಿಯಲ್ಲಿದ್ದ ನರೇಂದ್ರ ಮೋದಿವರ ಹತ್ಯೆಗೆ ಭಯೋತ್ಪಾದಕ ತಂಡವೊಂದು ಸಕಲ ಸಿದ್ಧತೆ ನಡೆಸಿಕೊಂಡಿತ್ತು ಎಂಬ ಆಘಾತಕಾರಿ ಅಂಶವನ್ನು ಗುಪ್ತಚರ ದಳವೊಂದು ಬಯಲಿಗೆಳೆದಿದೆ.
ಈ ಮಾಹಿತಿಯನ್ನು ಕೇರಳ ಪೊಲೀಸರೂ ಖಚಿತ ಪಡಿಸಿದ್ದು, ಅಂದು ಮೋದಿಯಿದ್ದ ಸ್ಥಳದ ಬಳಿಯ ಪುದುವ್ಯಾಪೀನ್ ಎಂಬ ಸ್ಥಳದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯೊಂದನ್ನು ತಡೆಯುವಲ್ಲಿ ಅಲ್ಲಿನ ಪೊಲೀಸರು ಯಶಸ್ವಿಯಾಗಿದ್ದರು. ಈ ಪ್ರತಿಭಟನೆಯ ಗುಂಪಿನಲ್ಲೇ ಭಯೋತ್ಪಾದಕ ತಂಡವೊಂದೂ ಇತ್ತು ಎಂದು ಇಲ್ಲಿನ ಡೆಪ್ಯುಟಿ ಜನರಲ್ ಆಫ್ ಪೊಲೀಸ್ ಟಿ.ಪಿ.ಸೇನುಕುಮಾರ್ ತಿಳಿಸಿದ್ದು, ಇನ್ನೂ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಈ ಸಂಚಿನ ಹಿಂದೆ ಯಾವ ಭಯೋತ್ಪಾದಕ ಗುಂಪು ಕೆಲಸ ಮಾಡಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications