ಮೋದಿಯಿಂದ ಬುಡಕಟ್ಟು ಮಹಿಳೆಗೆ ಪಾದರಕ್ಷೆ ಉಡುಗೊರೆ
ಬಿಜಾಪುರ(ಛತ್ತೀಸ್ ಗಢ), ಏಪ್ರಿಲ್ 14: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 127 ನೇ ಜನ್ಮದಿನಾಚರಣೆಯ ನಿಮಿತ್ತ ನಕ್ಸಲ್ ಬಾಧಿತ ಛತ್ತೀಸ್ ಗಢದ ಬಿಜಾಪುರದಲ್ಲಿ ಆರೋಗ್ಯ ಕೇಂದ್ರವೊಂದನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ 'ಚರಣ ಪಾದುಕಾ' ಯೋಜನೆಯಡಿ ಬುಡಕಟ್ಟು ಸಮುದಾಯದ ಮಹಿಳೆಯರಿಗೆ ಪಾದರಕ್ಷೆಗಳನ್ನು ಅವರು ನೀಡಿದರು.
#WATCH PM Modi presented a pair of slippers to a tribal woman under the Charan-Paduka (footwear) Scheme. The scheme aims to provide footwear to Tendu leaves (tendupatta) collectors to facilitate smooth movement in the forest area pic.twitter.com/foExDYehoH
— ANI (@ANI) April 14, 2018
ನಕ್ಸಲ್ ಬಾಧಿತ ಪ್ರದೇಶವಾಗಿರುವದರಿಂದ ಇನ್ನೂ ಹಿಂದುಳಿದಿರುವ ಛತ್ತೀಸ್ ಗಢದ ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಅವರು ಉದ್ಘಾಟಿಸಿದರು. 40,000 ಕಿ.ಮೀ.ವ್ಯಾಪ್ತಿಗೆ ಅಂತರ್ಜಾಲ ಸೌಲಭ್ಯ, ಇಲ್ಲಿನ ಗುದುಮ್ ಮತ್ತು ಭಾನುಪ್ರತಾಪ್ ಪುರಗಳ ಮಧ್ಯೆ ಪ್ಯಾಸೆಂಜರ್ ರೈಲು ಯೋಜನೆಗಳನ್ನು ಅವರು ಉದ್ಘಾಟಿಸಿದರು.
ಬಿಜಾಪುರ(ಛತ್ತೀಸ್ ಗಢ) ಇನ್ನು 100 ದಿನಗಳಲ್ಲಿ ಅಭಿವೃದ್ಧಿ ಹೊಂದಿದ ಜಿಲ್ಲಾಯಾಗಲಿದೆ. ಈ ಜಿಲ್ಲೆಯನ್ನು ಹಿಂದುಳಿದ ಜಿಲ್ಲೆ ಎಂದು ಇನ್ನು ಮುಂದೆ ಕರೆಯುವ ಪ್ರಮೇಯ ಬರಲಾರದು ಎಂದು ಇದೇ ಸಂದರ್ಭದಲ್ಲಿ ಮೋದಿ ಹೇಳಿದರು. 'ಛತ್ತೀಸ್ ಗಢದಲ್ಲಿ ಮೂಲಸೌಕರ್ಯ ಕಲ್ಪಿಸಲು ಪ್ರಯತ್ನಿಸಿದ ಎಲ್ಲಾ ಭದ್ರತಾ ಪಡೆಯ ಸಿಬ್ಬಂದಿಗಳಿಗೂ ನನ್ನ ನಮನ' ಎಂದು ಅವರು ಅಭಿಮಾನದಿಂದ ಹೇಳಿದರು.












Click it and Unblock the Notifications