ಕೇದಾರನಾಥ ನಂತರ ಬದರಿನಾಥ ದೇಗುಲಕ್ಕೆ ಭೇಟಿ ಕೊಟ್ಟ ಮೋದಿ

ಬದರಿನಾಥ(ಉತ್ತರಾಖಂಡ್), ಮೇ 19: ಚಾರ್ ಧಾಮ್ ಗಳ ಪೈಕಿ ಪ್ರಮುಖ ಯಾತ್ರಾ ಸ್ಥಳ ಕೇದಾರನಾಥಕ್ಕೆ ಭೇಟಿ ಕೊಟ್ಟ ಬಳಿಕ, ಪ್ರಧಾನಿ ಮೋದಿ ಅವರು ಇಂದು ಬದರಿನಾಥ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

ಬದರಿನಾಥ್, ಕೇದಾರನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಇವು ಉತ್ತರಾಖಂಡ್ ರಾಜ್ಯದ ನಾಲ್ಕು ಪ್ರಸಿದ್ಧ ಭಕ್ತಿಧಾಮಗಳು. ಉಳಿದಂತೆ ರುದ್ರಪ್ರಯಾಗ್, ಜೋಶಿಮಠ ಹೃಷಿಕೇಶ, ಹೇಮಕುಂಡ ಸೇರಿದಂತೆ ಹಲವು ಪ್ರಕೃತಿ ವಿಸ್ಮಯ, ಭಕ್ತಿಧಾಮಗಳನ್ನು ಉತ್ತರಾಖಂಡ್ ರಾಜ್ಯ ಹೊಂದಿದೆ. 2013ರ ಮೇಘಸ್ಫೋಟ, ಹಿಮಪಾತ, ಪ್ರಕೃತಿ ವಿಕೋಪಕ್ಕೆ ಸಿಲುಕಿ ನಲುಗಿದ್ದ ಈ ರಾಜ್ಯ ಇನ್ನು ಸುಧಾರಿಸಿಕೊಳ್ಳುತ್ತಿದೆ.

ಎರಡು ದಿನಗಳ ಪ್ರವಾಸ ಬಳಿಕ ಮೋದಿ ಅವರು ಇಂದು ಸಂಜೆ ದೆಹಲಿಗೆ ಹಿಂತಿರುಗಲಿದ್ದಾರೆ. ಚಮೋಲಿ ಜಿಲ್ಲೆಯ ಗರ್ಹ್ ವಾಲ್ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಈ ದೇಗುಲಕ್ಕೂ
ಉತ್ತರಖಾಂಡದ ಸಾಂಪ್ರದಾಯಿಕ ಉಡುಗೆಯಲ್ಲಿಯೇ ಮೋದಿಯವರು ಭೇಟಿಯಿತ್ತಿದ್ದಾರೆ.

PM Modi offers prayers at Badrinath Temple

ಉತ್ತರಖಾಂಡದ ಚಾರ್ ಧಾಮ್ ಸೇರಿದಂತೆ ಪ್ರವಾಸ, ಯಾತ್ರೆ ಕೈಗೊಳ್ಳುವಂತೆ ಎಲ್ಲರಿಗೂ ಕರೆ ನೀಡಿರುವ ಮೋದಿ, ಕೇದಾರನಾಥ್​ದಲ್ಲಿ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು. ಚುನಾವಣೆ ವೇಳೆಯಲ್ಲಿ ಮಾಧ್ಯಮದವರ ಮೇಲೆ ಮಾನಸಿಕ ಹಾಗೂ ದೈಹಿಕ ಒತ್ತಡವಿರುತ್ತದೆ ಎಂದ ಮೋದಿಯವರು, ಚುನಾವಣಾ ಆಯೋಗಕ್ಕೂ ಧನ್ಯವಾದ ತಿಳಿಸಿದರು.

ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿರುವಾಗಲೇ ಪ್ರಧಾನಿ ಮೋದಿ ಅವರಿಗೆ ಕೇದಾರನಾಥ ಹಾಗೂ ಬದರಿನಾಥ ಯಾತ್ರೆ ಕೈಗೊಳ್ಳಲು ಅನುಮತಿ ನೀಡಿರುವುದನ್ನು ತೃಣಮೂಲ ಕಾಂಗ್ರೆಸ್ ಅಕ್ಷೇಪ ವ್ಯಕ್ತಪಡಿಸಿದೆ.

ಮೇ 19ರಂದು 7ನೇ ಹಾಗೂ ಕೊನೆ ಹಂತದ ಮತದಾನ ಪ್ರಕ್ರಿಯೆ ನಡೆದಿದೆ. 8 ರಾಜ್ಯಗಳ 59 ಮತ ಕ್ಷೇತ್ರಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ, ಮೋದಿ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+