ಮೋದಿ ಸರ್ಕಾರ್ ನಿಂದ ಚಿನ್ನದಂಥ ಮೂರು ಯೋಜನೆಗೆ ಚಾಲನೆ
ನವದೆಹಲಿ, ನ. 05: ಚಿನ್ನ ಆಮದು ಮೇಲೆ ನಿಯಂತ್ರಣ, ಭೌತಿಕ ಚಿನ್ನದ ಬೇಡಿಕೆ ಹಾಗೂ ಗೋಲ್ಡ್ ಬಾಂಡ್ ಯೋಜನೆಗಳನ್ನು ಪ್ರಧಾನಿ ನರೇಂದ್ರಮೋದಿ ಅವರು ಗುರುವಾರ ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಶೋಕ ಚಕ್ರವಿರುವ ವಿಶೇಷ ಚಿನ್ನದ ನಾಣ್ಯವನ್ನು ಕೂಡಾ ಬಿಡುಗಡೆ ಮಾಡಲಾಯಿತು.
ಚಿನ್ನದ ಯೋಜನೆಗಳ ಮುಖ್ಯ ಉದ್ದೇಶ ದೇಗುಲ, ಮನೆ ಹಾಗೂ ಇತರೆ ಶೇಖರಣಾ ಸ್ಥಳಗಳಲ್ಲಿ ಸ್ಥಾವರವಾಗಿರುವ ಸುಮಾರು 20,000 ಟನ್ ಗಳಷ್ಟು ಚಿನ್ನವನ್ನು ಹೊರ ತೆಗೆದು ಮಾರುಕಟ್ಟೆಯಲ್ಲಿ ಚಾಲನೆಗೆ ತರುವುದಾಗಿದೆ. ಈ ಮೂಲಕ ಚಿನ್ನದ ದರದಲ್ಲಿ ಆಗುವ ಅಸಮತೋಲನವನ್ನು ತೆಗೆದುಕೊಳ್ಳಲು ಯೋಜನೆ ರೂಪಿಸಲಾಗಿದೆ.[ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]

ನಗದೀಕರಣ ಯೋಜನೆ (Montetisation scheme)
* ದೇವಸ್ಥಾನಗಳು, ಮನೆ, ಸಂಸ್ಥೆಗಳಲ್ಲಿ ಬಳಸದೇ ಇರುವ ಚಿನ್ನವನ್ನು ಠೇವಣಿ ಇಟ್ಟು ಬಡ್ಡಿ ಪಡೆಯುವ ಅವಕಾಶ ನೀಡಲಾಗುತ್ತದೆ.
* ಚಿನ್ನದ ಮೇಲೆ ಶೇ. 2.50 ವರೆಗೆ ಬಡ್ಡಿ ನೀಡಲಾಗುತ್ತದೆ.
* ಮಧ್ಯಮ ಹಾಗೂ ದೀರ್ಘಾವಧಿ ಠೇವಣಿಗೆ ಶೇ. 2.25 ಮತ್ತು ಶೇ. 2.20 ಬಡ್ಡಿ ನಿಗದಿಸಲಾಗಿದೆ.[ಏನಿದು ಸವರನ್ ಗೋಲ್ಡ್ ಬಾಂಡ್? ಏನು ಪ್ರಯೋಜನ?]
Women usually don't own anything, house, car usually named after their husband or son, but Gold a matter of their strength: PM Modi
— ANI (@ANI_news) November 5, 2015 ಗೋಲ್ಡ್ ಬಾಂಡ್
* ಭೌತಿಕ ಚಿನ್ನ(Physical Gold)ದ ಬದಲಿಗೆ ಅದಕ್ಕೆ ಸಮಾನ ಮೊತ್ತದ ಬಾಂಡ್ಗಳನ್ನು ಖರೀದಿ ಮಾಡಬಹುದಾಗಿದೆ
* ಡಿಮ್ಯಾಟ್ ಹಾಗೂ ಕಾಗದದ ರೂಪದಲ್ಲಿ ಚಿನ್ನ ಲಭ್ಯವಿರುತ್ತದೆ. ಸರ್ಕಾರದ ಪರವಾಗಿ ಆರ್ಬಿಐ ಈ ಬಾಂಡ್ಗಳನ್ನು ವಿತರಿಸುತ್ತದೆ.ಪ್ರತಿ ವ್ಯಕ್ತಿ ಖರೀದಿಸಬಹುದಾದ ಬಾಂಡ್ನ ಮಿತಿ 500 ಗ್ರಾಂಗಳಾಗಿರುತ್ತವೆ.
* ಪ್ರತಿ ಗ್ರಾಂ. ಗೋಲ್ಡ್ ಬಾಂಡ್ಗೆ ರೂ.2684 ಬೆಲೆ ನಿಗದಿಗೊಳಿಸಲಾಗಿದೆ
* ನವೆಂಬರ್ 5ರಿಂದ 20ರವರೆಗೆ ಬಾಂಡ್ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ ಮತ್ತು ನವೆಂಬರ್ 26ರಂದು ಬಾಂಡ್ ವಿತರಿಸಲಾಗುತ್ತದೆ.[ನಿಮ್ಮ ನಗರದ ಚಿನ್ನದ ದರ ಒಂದೇ ಕ್ಲಿಕ್ ನಲ್ಲಿ]
PM Narendra Modi launches three mega gold related schemes in Delhi. pic.twitter.com/JPEQu7NAuD
— ANI (@ANI_news) November 5, 2015 ಚಿನ್ನದ ನಾಣ್ಯಗಳು
* ಅಶೋಕ ಚಕ್ರದ ಮುದ್ರೆ ಹೊಂದಿರುವ 5, 10 ಹಾಗೂ 20 ಗ್ರಾಂ ಚಿನ್ನದ ನಾಣ್ಯ ಬಿಡುಗಡೆಗೊಳ್ಳಲಿವೆ.
* 5 ಗ್ರಾಂನ 15 ಸಾವಿರ ನಾಣ್ಯಗಳು, 10 ಗ್ರಾಂನ 20 ಸಾವಿರ ಮತ್ತು 20 ಗ್ರಾಂನ 3750 ನಾಣ್ಯಗಳು ಮಳಿಗೆಗಳಲ್ಲಿ ಖರೀದಿಗೆ ಲಭ್ಯವಾಗಲಿವೆ.












Click it and Unblock the Notifications