• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತ್ರಿಪುರಾ ಫಲಿತಾಂಶ: ಕೇರಳ ಪಿಣರಾಯಿ ಸರಕಾರಕ್ಕೆ ಮೋದಿ ಎಚ್ಚರಿಕೆ?

|
   ಕೇರಳ ಪಿಣರಾಯಿ ವಿಜಯನ್ ಸರ್ಕಾರಕ್ಕೆ ಮೋದಿ ಕೊಟ್ಟ ವಾರ್ನಿಂಗ್ | Oneindia Kannada

   ತ್ರಿಪುರಾದಲ್ಲಿ ಪ್ರಾಮಾಣಿಕ ವ್ಯಕ್ತಿಯೆಂದೇ ಖ್ಯಾತಿ ಪಡೆದಿದ್ದ ಮಾಣಿಕ್ ಸರ್ಕಾರ್ ಪತನಗೊಂಡ ನಂತರ, ದೇಶದಲ್ಲಿ ಈಗ ಕಮ್ಯೂನಿಸ್ಟರ ಸರಕಾರ ಉಳಿದಿರುವುದು ದಕ್ಷಿಣದ ಕೇರಳದಲ್ಲಿ ಮಾತ್ರ. ತ್ರಿಪುರಾದಲ್ಲಿ ಬಿಜೆಪಿ, ಸಿಪಿಐ(ಎಂ) ಸರಕಾರದ ವಿರುದ್ದ ದಿಗ್ವಿಜಯ ಸಾಧಿಸಿತ್ತು.

   ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ, ದೆಹಲಿಯಲ್ಲಿ ನೂತನವಾಗಿ ನಿರ್ಮಿತವಾಗಿರುವ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಪರೋಕ್ಷವಾಗಿ ಕೇರಳದ ಪಿಣರಾಯಿ ವಿಜಯನ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

   ತ್ರಿಪುರಾ : ಯುವಜನತೆ ಬಿಜೆಪಿ ಜಯಭೇರಿಯ ರೂವಾರಿ

   ಕರ್ನಾಟಕ ನಮ್ಮ ಮುಂದಿನ ಟಾರ್ಗೆಟ್ ಎಂದು ನೇರವಾಗಿ ಹೇಳಿರುವ ನರೇಂದ್ರ ಮೋದಿ, ಕೇರಳದ ಕಮ್ಯೂನಿಸ್ಟ್ ಸರಕಾರದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಹತ್ಯೆಯಾಗುತ್ತಿರುವುದಕ್ಕೆ ಪರೋಕ್ಷವಾಗಿ ಅಲ್ಲಿನ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

   ತಮ್ಮ ಸಿದ್ದಾಂತಕ್ಕೆ ತದ್ವಿರುದ್ದವಾಗಿರುವ ಬಿಜೆಪಿಯ ತ್ರಿಪುರಾ ಜಯಭೇರಿಯ ನಂತರ, ದೇಶದಲ್ಲಿ ಕಮ್ಯೂನಿಸ್ಟರ ಅಸ್ತಿತ್ವವೇ ಅಲುಗಾಡಲಾರಂಭಿಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿರುವ ಈ ಹೊತ್ತಿನಲ್ಲಿ, 2021ರ ಆಸುಪಾಸಿನಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಈಗಿಂದಲೇ ತಯಾರಿ ಶುರುಮಾಡಿಕೊಂಡಿದೆ ಎನ್ನಲಾಗುತ್ತಿದೆ.

   ಈಶಾನ್ಯದಲ್ಲಿ ಬಿಜೆಪಿ ಯಶಸ್ಸಿಗೆ ನಾಲ್ವರು ತಂತ್ರಗಾರರೇ ಕಾರಣ

   ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ಮೋದಿ, ಈಶಾನ್ಯ ರಾಜ್ಯಗಳ ನಮ್ಮ ಪಕ್ಷದ ಗೆಲುವಿನ ಶಿಲ್ಪಿ ಅಮಿತ್ ಶಾಗೆ ಅಭಿನಂದನೆ ಸಲ್ಲಿಸುತ್ತೇನೆಂದು ಭಾಷಣ ಆರಂಭ ಮಾಡುತ್ತಿದ್ದಂತೇ, ಆಜಾನ್ ಆರಂಭವಾಯಿತು. ಆಜಾನ್ ಮುಗಿದ ನಂತರ ಭಾಷಣ ಮುಂದುವರಿಸಿದ ಮೋದಿ, ಸಂಘ ಪರಿವಾರದ ಕಾರ್ಯಕರ್ತರು ಹತ್ಯೆಯ ವಿರುದ್ದ ಕಿಡಿಕಾರಿದರು. ಮುಂದೆ ಓದಿ..

   ಎಡಪಂಥೀಯರು ನಮ್ಮ ಕಾರ್ಯಕರ್ತರ ಮೇಲೆ ಪ್ರಹಾರ ಮಾಡುತ್ತಿದ್ದಾರೆ

   ಎಡಪಂಥೀಯರು ನಮ್ಮ ಕಾರ್ಯಕರ್ತರ ಮೇಲೆ ಪ್ರಹಾರ ಮಾಡುತ್ತಿದ್ದಾರೆ

   ರಾಜಕೀಯ ಸಿದ್ದಾಂತಕ್ಕಾಗಿ ನಮ್ಮ ಕಾರ್ಯಕರ್ತರನ್ನು ಹತ್ಯೆಗೈಯಲಾಯಿತು. ಭಾಯಿ ಮತ್ತು ಬ್ರಹ್ಮ ಎನ್ನುವ ವಿಚಾರವನ್ನು ಇಟ್ಟುಕೊಂಡು ವಾಮೋವಾದಿಗಳು ಮತ್ತು ಎಡಪಂಥೀಯರು ನಮ್ಮ ಕಾರ್ಯಕರ್ತರ ಮೇಲೆ ಪ್ರಹಾರ ಮಾಡುತ್ತಿದ್ದಾರೆ. ಅನಕ್ಷರಸ್ಥ ವ್ಯಕ್ತಿಯೂ ಇದರ ಉತ್ತರವನ್ನು ವೋಟಿನ ಮೂಲಕ ನೀಡಿದ್ದಾನೆ, ಇದು ಲೋಕತಂತ್ರದ ಜಯ - ಮೋದಿ.

   ಸೋಲನ್ನು ಸ್ಪೂರ್ತಿಯಿಂದ ತೆಗೆದುಕೊಳ್ಳದ ಎಡಪಂಥೀಯರು

   ಸೋಲನ್ನು ಸ್ಪೂರ್ತಿಯಿಂದ ತೆಗೆದುಕೊಳ್ಳದ ಎಡಪಂಥೀಯರು

   ನಮ್ಮ ಕಾರ್ಯಕರ್ತರನ್ನು ಕಳೆದುಕೊಂಡ ನೋವು ನಮಗೆಷ್ಟಿತ್ತೋ ಅಷ್ಟೇ ನೋವು ಜನರಲ್ಲೂ ಇದೆ. ತ್ರಿಪುರಾದ ಗೆಲುವನ್ನು ಮೃತಪಟ್ಟ ನನ್ನ ಪಕ್ಷದ ಕಾರ್ಯಕರ್ತರಿಗೆ ಅರ್ಪಿಸುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು, ಗೆಲುವು ಸ್ವಾಭಾವಿಕ. ಆದರೆ ಸೋಲನ್ನು ಸ್ಪೂರ್ತಿಯಿಂದ ತೆಗೆದುಕೊಳ್ಳದ ಎಡಪಂಥೀಯರು ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಈ ದೇಶದ ಬುದ್ದಿಜೀವಿಗಳು ಇವರಿಗೆ ಬುದ್ದಿ ಹೇಳುವ ಕೆಲಸವನ್ನು ಮಾಡಲಿ ಎಂದು ಮೋದಿ ಹೇಳಿದ್ದಾರೆ.

   'ಪ್ರತ್ಯೇಕತಾವಾದಿಗಳ ಜತೆ ಕೈ ಜೋಡಿಸಿ ತ್ರಿಪುರಾದಲ್ಲಿ ಗೆದ್ದ ಬಿಜೆಪಿ'

   ಸಂಘಟನೆಯ ಕಾರ್ಯಕರ್ತರ ರಕ್ತ ಭೂಮಿಗೆ ಬಿದ್ದರೆ ನಾವು ಸುಮ್ಮನಿರುವುದಿಲ್ಲ

   ಸಂಘಟನೆಯ ಕಾರ್ಯಕರ್ತರ ರಕ್ತ ಭೂಮಿಗೆ ಬಿದ್ದರೆ ನಾವು ಸುಮ್ಮನಿರುವುದಿಲ್ಲ

   ಕರ್ನಾಟಕ, ಕೇರಳ ಸೇರಿದಂತೆ ನಮ್ಮ ಕಾರ್ಯಕರ್ತರನ್ನು ಬರ್ಭರವಾಗಿ ಹತ್ಯೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲದ ಇಂತವರು ನಮ್ಮ ಕಾರ್ಯಕರ್ತರ ರಕ್ತ ಹರಿಸುತ್ತಿದ್ದಾರೆ. ಪ್ರಮುಖವಾಗಿ ಕೇರಳ ಸೇರಿದಂತೆ, ದೇಶದ ಯಾವುದೇ ರಾಜ್ಯದಲ್ಲಾಗಲಿ ನಮ್ಮ ಸಂಘಟನೆಯ ಕಾರ್ಯಕರ್ತರ ರಕ್ತ ಈ ಭೂಮಿಗೆ ಬಿದ್ದರೆ ನಾವು ಸುಮ್ಮನಿರುವುದಿಲ್ಲ ಎನ್ನುವ ಮೂಲಕ ಮೋದಿ, ಕೇರಳ ಸರಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

   ಕಾರ್ಯಕರ್ತರ ಹತ್ಯೆ ಮತ್ತು ಎಡಪಕ್ಷಗಳ ವಿರುದ್ದ ಮೋದಿ ವಾಕ್ ಪ್ರಹಾರ

   ಕಾರ್ಯಕರ್ತರ ಹತ್ಯೆ ಮತ್ತು ಎಡಪಕ್ಷಗಳ ವಿರುದ್ದ ಮೋದಿ ವಾಕ್ ಪ್ರಹಾರ

   ತಮ್ಮ ಈಶಾನ್ಯ ರಾಜ್ಯದ ವಿಜಯದ ಭಾಷಣವನ್ನು ಅಕ್ಷರಸ: ಕಾರ್ಯಕರ್ತರ ಹತ್ಯೆ ಮತ್ತು ಎಡಪಕ್ಷಗಳ ವಿರುದ್ದ ಪ್ರಯೋಗಿಸಿದ ಮೋದಿ, ಇಷ್ಟುದಿನ ಎಡಪಕ್ಷದ ಸರಕಾರದ ಅವಧಿಯಲ್ಲಿ ಕಣ್ಣೆದೆರು ಮಾನವ ಸಮಾಜ ತಲೆತಗ್ಗಿಸುವ ಘಟನೆ ನಡೆಯುತ್ತಿದ್ದರೂ, ಸುಮ್ಮನಿದ್ದ ಜನ ಮತದಾನದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿದಿದ್ದಾರೆಂದು ಮೋದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

   ಕೇರಳದಲ್ಲಿನ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಹತ್ಯೆ

   ಕೇರಳದಲ್ಲಿನ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಹತ್ಯೆ

   ಪ್ರಮುಖವಾಗಿ ಕೇರಳದಲ್ಲಿನ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಹತ್ಯೆಯ ಬಗ್ಗೆ ಭಾಷಣದುದ್ದಕ್ಕೂ ಪ್ರಧಾನಿ ಮೋದಿ ಪ್ರಸ್ತಾವಿಸಿ, ಕೇರಳದ ಪಿಣರಾಯಿ ವಿಜಯನ್ ಸರಕಾರಕ್ಕೆ ಪರೋಕ್ಷವಾಗಿ ನೀಡಿದ ಎಚ್ಚರಿಕೆ ಇದು ಎಂದೇ ಮೋದಿ ಭಾಷಣವನ್ನು ವ್ಯಾಖ್ಯಾನಿಸಲಾಗುತ್ತಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Prime Minister Narendra Modi indirectly warned Kerala government over killing of party workers. While addressing Tripura mandate celebration at party office, Narendra Modi said, we can tolerate party workers killing in Kerala and Karnataka.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more