ಬ್ಯಾಂಕ್ ಮುಂದೆ ಬಡವರ ಪರದಾಟ, ಸುಖ ನಿದ್ದೆಯಲ್ಲಿ ಮೋದಿ ಗೆಳೆಯರು!

Written By:
Subscribe to Oneindia Kannada

ನವದೆಹಲಿ, ನ 14: ನರೇಂದ್ರ ಮೋದಿ ಸರಕಾರದ ವಿರುದ್ದ ಹರಿಹಾಯುವ ಕೆಲಸವನ್ನು ಮುಂದುವರಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನೋಟು ನಿಷೇಧದ ನಂತರ ಬಡವರ ಬದುಕು ಹೈರಾಣವಾಗಿ ಹೋಗಿದೆ ಎಂದು ಕಿಡಿಕಾರಿದ್ದಾರೆ.

ಅತ್ತ ಬಡವರು ಬ್ಯಾಂಕು, ಎಟಿಎಂ ಮುಂದೆ ಪರದಾಡುತ್ತಿದ್ದರೆ ನಮ್ಮ ಪ್ರಧಾನಮಂತ್ರಿಗಳ ಸ್ನೇಹಿತರು ಸುಖನಿದ್ದೆಯಲ್ಲಿದ್ದಾರೆಂದು ಪರೋಕ್ಷವಾಗಿ ಅಂಬಾನಿ, ಅದಾನಿ ಹೆಸರು ಹೇಳದೇ ಕೇಜ್ರಿವಾಲ್ ಲೇವಡಿ ಮಾಡಿದ್ದಾರೆ. (6000 ಕೋಟಿ ನಗದಿನೊಂದಿಗೆ ಶರಣಾದ ಉದ್ಯಮಿ)

ನೋಟು ನಿಷೇದದ ಕಠಿಣ ಕ್ರಮದ ನಂತರ ಬಡವರು ಸುಖನಿದ್ದೆ ಮಾಡುತ್ತಿದ್ದಾರೆ, ಶ್ರೀಮಂತರು ನಿದ್ದೆ ಮಾತ್ರೆಯನ್ನು ತೆಗೆದುಕೊಂಡು ಮಲಗುವ ಸ್ಥಿತಿ ಬಂದಿದೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕೇಜ್ರಿವಾಲ್ ಈ ರೀತಿ ತಿರುಗೇಟು ನೀಡಿದ್ದಾರೆ.

500,1000 ನೋಟು ನಿಷೇಧ ಯಾವುದೇ ಪೂರ್ವತಯಾರಿ ಇಲ್ಲದೇ ತೆಗೆದುಕೊಂಡ ಕ್ರಮವಾಗಿದ್ದು, ಕೇಂದ್ರ ಸರಕಾರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಎರಡು ಸಾವಿರ ಮುಖಬೆಲೆಯ ನೋಟನ್ನು ಜಾರಿಗೆ ತಂದು ಅದು ಯಾವ ರೀತಿಯಲ್ಲಿ ಭ್ರಷ್ಟಾಚಾರವನ್ನು ನರೇಂದ್ರ ಮೋದಿ ನಿಯಂತ್ರಣಕ್ಕೆ ತರುತ್ತಾರೋ ಎನ್ನುವುದು ಅರ್ಥವಾಗದ ವಿಚಾರ ಎಂದು ದೆಹಲಿ ಮುಖ್ಯಮಂತ್ರಿಗಳು ಸಂಶಯ ವ್ಯಕ್ತ ಪಡಿಸಿದ್ದಾರೆ.

ವಿಶೇಷ ಅಧಿವೇಶನ ಕರೆದ ಅರವಿಂದ್ ಕೇಜ್ರಿವಾಲ್, ಕೆಲವೊಂದು ಟ್ವೀಟ್ ..ಮುಂದೆ ಓದಿ..

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

ಕರೆನ್ಸಿ ಅಭಾವದ ವಿಚಾರಕ್ಕಾಗಿ ವಿಶೇಷ ಅಧಿವೇಶನದ ಕರೆದ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ಮಂಗಳವಾರ (ನ 15) ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಲಿದ್ದಾರೆ.

ವ್ಯಾಪಾರಸ್ಥರು ಯಾವ ರೀತಿ ಕೆಲಸ ಮಾಡಬೇಕು

ವ್ಯಾಪಾರಸ್ಥರು ಯಾವ ರೀತಿ ಕೆಲಸ ಮಾಡಬೇಕು

ಐವತ್ತು ದಿನಗಳಲ್ಲಿ ಎಲ್ಲಾ ಸರಿಹೋಗಲಿದೆ ಎಂದು ಪ್ರಧಾನಿ ಹೇಳುತ್ತಾರೆ. ಈ ಐವತ್ತು ದಿನಗಳಲ್ಲಿ ವ್ಯಾಪಾರಸ್ಥರು ಯಾವ ರೀತಿ ಕೆಲಸ ಮಾಡಬೇಕು, ಬದುಕಬೇಕು ಎಂದು ವ್ಯಾಪರಸ್ಥರ ಪರವಾಗಿ ಮೋದಿಯವರನ್ನು ಕೇಳಲು ಬಯಸುತ್ತೇನೆ - ಕೇಜ್ರಿವಾಲ್.

ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದು

ಸರ್ಜಿಕಲ್ ಸ್ಟ್ರೈಕ್ ನಡೆದಾಗ ಪಾಕ್ ಪರವಾಗಿ ಮಾತನಾಡಿದ್ದ ಕೇಜ್ರಿವಾಲ್, ಈಗ ಫೇಕ್ ಕರೆನ್ಸಿ ವಿಚಾರದಲ್ಲೂ ಮೋದಿ ವಿರುದ್ದವಾಗಿ ನಿಂತಿದ್ದಾರೆ.

ಗಡಿ ಕಾಯುವ ಯೋಧರು

ಬಡವರ ಬಳಿ ಕಪ್ಪುಹಣವಿಲ್ಲ ಅವರು ಯಾಕೆ ತೊಂದರ ಅನುಭವಿಸಬೇಕು ಎನ್ನುವುದಾದರೆ, ಯೋಧರು ದೇಶ ಯಾಕೆ ಕಾಯಬೇಕು?

ನಿಜವಾದ ವಿರೋಧ ಪಕ್ಷದ ನಾಯಕ

ಕೇಜ್ರಿವಾಲ್ ಅವರನ್ನು ಪ್ರೀತಿಸುತ್ತೀರೋ, ದ್ವೇಷಿಸುತ್ತೀರೋ ಒಟ್ಟಿನಲ್ಲಿ ನಿಜವಾದ ವಿರೋಧ ನಾಯಕ ಅವರೇ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Delhi CM Arvind Kejriwal on Monday (Nov 14) attacked PM Narendra Modi over the currency spike, saying it had caused misery to the common man and Modi’s friends who are sleeping peacefully.
Please Wait while comments are loading...