ವಿಶ್ವಗುರು ಬಸವಣ್ಣರ ನೆನಪು, ನೂತನ ಸಂಸತ್ ಭವನದಲ್ಲಿ ಮೋದಿ ಮೊದಲ ಮಾತು!

ನವದೆಹಲಿ: ಭಾರತೀಯ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಈ ದಿನ ಎಂದೆಗೂ ಮರೆಯಲು ಆಗದ ಕ್ಷಣವಾಗಿದೆ. ಹೊಸ ಸಂಸತ್ ಭವನ ರಾಷ್ಟ್ರ ರಾಜಧಾನಿಯಲ್ಲಿ ಭರ್ಜರಿಯಾಗಿ ಉದ್ಘಾಟನೆ ಆಗಿದೆ. ಈ ಕ್ಷಣಕ್ಕೆ ಶತಕೋಟಿ ಭಾರತೀಯರು ಸಾಕ್ಷಿಯಾಗಿದ್ದು, ಪ್ರಧಾನಿ ಮೋದಿ ನೂತನ ಸಂಸತ್ ಭವನದಲ್ಲಿ ತಮ್ಮ ಮೊದಲನೇ ಭಾಷಣ ಮಾಡುತ್ತಾ ವಿಶ್ವಗುರು ಬಸವಣ್ಣ ಅವರ ಅನುಭವ ಮಂಟಪ ನೆನಪು ಮಾಡಿಕೊಂಡಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಅಸಂಖ್ಯಾತ ಜನರ ತ್ಯಾಗ ಮತ್ತು ಬಲಿದಾನದಿಂದ ಸಿಕ್ಕಿದೆ. ಭಾರತದ ಪ್ರಗತಿಗೆ ಅಸಂಖ್ಯಾತ ಮಹನೀಯರು ಶ್ರಮಿಸಿದ್ದಾರೆ. ಭಾರತದ ವಿಕಾಸ ಯಾತ್ರೆಗೆ ಹೊಸ ಸಂಸತ್​ ಭವನ ಸಾಕ್ಷಿಯಾಗಿದೆ. ಸರ್ವ ಧರ್ಮ ಪ್ರಾರ್ಥನೆಯಿಂದ ಸಂಸತ್​ ಭವನ ನಿರ್ಮಾಣವಾಗಿದೆ. ನೂತನ ಸಂಸತ್​ ಭವನ ಪ್ರಜಾಪ್ರಭುತ್ವದ ಮಂದಿರವಾಗಿದೆ ಎಂದು ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜೊತೆಗೆ ಕನ್ನಡ ನಾಡಿನ ಹೆಮ್ಮೆಯ ಪುತ್ರ ಬಸವಣ್ಣರ ಅನುಭವ ಮಂಟಪದ ನೆನಪು ಮಾಡಿಕೊಂಡಿದ್ದಾರೆ ಪ್ರಧಾನಿ.

PM Modi first speech in new parliament

ಒಂದು ಭಾರತ.. ಶ್ರೇಷ್ಠ ಭಾರತ..!

ಹೌದು ಪ್ರಧಾನಿ ಮೋದಿ ನೂತನ ಸಂಸತ್ ಭವನದಲ್ಲಿ ತಮ್ಮ ಮೊದಲ ಭಾಷಣದ ಸಂದರ್ಭದಲ್ಲಿ ಭಾರತದ ಏಕತೆಯನ್ನ ಪ್ರತಿಪಾದಿಸಿದರು. ಹೊಸ ಸಂಸತ್ ಭವನ ಕಟ್ಟಲು ವಸ್ತುಗಳನ್ನ ಎಲ್ಲೆಲ್ಲಿಂದ ತಂದಿದ್ದೇವೆ ಎಂಬ ವಿಚಾರವನ್ನ ತಿಳಿಸಿದ ಪ್ರಧಾನಿ ಮೋದಿ, ದೇಶದ ವಿವಿಧ ರಾಜ್ಯಗಳಿಂದ ದೇಶದ ಸಂಸತ್ ಭವನ ನಿರ್ಮಾಣಕ್ಕೆ ಸಿಕ್ಕ ಕೊಡುಗೆ ನೆನಪು ಮಾಡಿಕೊಂಡರು. ಹಾಗೇ ಇದೇ ಸಂದರ್ಭದಲ್ಲಿ ಒಂದು ಭಾರತ.. ಶ್ರೇಷ್ಠ ಭಾರತ..! ಎನ್ನುವ ಮೂಲಕ ಭಾರತದ ಏಕತೆಯನ್ನ ಪ್ರತಿಪಾದಿಸಿದರು.

ಸೆಂಗೋಲ್ ಕರ್ತವ್ಯ ಪ್ರಜ್ಞೆಯ ಪ್ರತೀಕ

ಹಾಗೇ ನೂತನ ಸಂಸತ್ ಭವನದಲ್ಲಿ ಸೆಂಗೋಲ್ ಸ್ಥಾಪನೆ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯ ಮಾತು ಆಡಿದರು. ಆತ್ಮ ನಿರ್ಭರ್​ ಭಾರತ್​ ಯೋಜನೆಗೆ ಇದು ಸಾಕ್ಷಿ. ಭಾರತೀಯರ ಸಂಕಲ್ಪದ ಪ್ರತೀಕವಾಗಿ ಈ ಸಂಸತ್​ ಭವನ ನಿರ್ಮಾಣವಾಗಿದೆ. ಭಾರತೀಯರ ಗೌರವ ಮತ್ತಷ್ಟು ಹೆಚ್ಚಲಿದೆ. ಬ್ರಿಟೀಷರು ದೇಶಕ್ಕೆ ಸ್ವಾತಂತ್ರ್ಯ ನೀಡಿದರು. ಅಧಿಕಾರ ಹಸ್ತಾಂತರಕ್ಕೆ ಸಾಕ್ಷಿಯಾಗಿ ಸೆಂಗೋಲ್​ ನೀಡಿದ್ದರು. ಸೆಂಗೋಲ್​​ ನಾವು ಮಾಡಬೇಕಾದ ಕರ್ತವ್ಯ ನೆನಪಿಸುತ್ತೆ. ಸೆಂಗೋಲ್​ ನಮ್ಮೆಲ್ಲರಿಗೂ ಪ್ರೇರಣೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

PM Modi first speech in new parliament

ದೇಶದ ಅಭಿವೃದ್ಧಿಯೇ ಜನರ ಅಭಿವೃದ್ಧಿ

ನೂತನ ಸಂಸತ್ ಭವನ ನಿರ್ಮಾಣದ ಹಿಂದೆ ಸಾಕಷ್ಟು ಕಾರ್ಮಿಕರ ಪರಿಶ್ರಮವಿದೆ. 9 ವರ್ಷಗಳಲ್ಲಿ 9 ಹೊಸ ನಿರ್ಮಾಣದ ಕಲ್ಯಾಣವಾಗಿದೆ. 9 ವರ್ಷಗಳಲ್ಲಿ ಬಡವರಿಗಾಗಿ 4 ಕೋಟಿ ಮನೆ ನಿರ್ಮಾಣವಾಗಿವೆ. 13 ಕೋಟಿ ಶೌಚಾಲಯ ನಿರ್ಮಾಣವಾಗಿದೆ ಹಾಗೂ ನೀರು ಸಂರಕ್ಷಣೆಗೆ 50 ಸಾವಿರಕ್ಕೂ ಹೆಚ್ಚು ಅಮೃತ ಸರೋವರ ನಿರ್ಮಾಣ ಮಾಡಿರುವುದು ಬಹಳ ಸಂಸತ ತಂದಿದೆ. ದೇಶದ ಅಭಿವೃದ್ಧಿಯೇ ಈ ದೇಶದ ಜನರ ಅಭಿವೃದ್ಧಿ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿ ಕಾರ್ಯಕ್ಕೆ ಪ್ರಧಾನಿ ನಮನ

ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಾ ಗಾಂಧಿಯವರ ಸಯೋಗ ಆಂದೋಲನ ಪ್ರತಿ ಭಾರತಿರನ್ನೂ ಒಗ್ಗೂಡಿಸಿತ್ತು. ಇದರ ಪ್ರತಿಫಲವಾಗಿ 1947ರಲ್ಲಿ ಸ್ವಾತಂತ್ರ್ಯ ದೊರೆಯಿತು. ಮುಂದಿನ ದಿನಗಳಲ್ಲಿ ಭಾರತವು ಹೊಸ ಮಾರ್ಗದಲ್ಲಿ ಸಾಗಲಿದೆ. ಭಾರತದ ರೀತಿ ವಿವಿಧತೆಯಿಂದ ಕೂಡಿದ ದೇಶ ವಿಶ್ವಾಸದಿಂದ ಮುನ್ನಡೆಯುತ್ತದೆ ಮತ್ತು ಇದು ಬೇರೆ ದೇಶಗಳಿಗೂ ಪ್ರೇರಣೆಯಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಲೋಕ ಕಲ್ಯಾಣ ಜೀವನದ ಮಂತ್ರವಾಗಿರಬೇಕು ಎಂದು ಸಂಸ್ಕೃತ ಮಂತ್ರ ಪಠಿಸುವ ಮೂಲಕ ನಾಯಕರಿಗೆ ಕಿವಿ ಮಾತು ಹೇಳಿದರು ಪ್ರಧಾನಿ ಮೋದಿ.

PM Modi first speech in new parliament

ಇಲ್ಲಿನ ನಿರ್ಣಯ ಭವಿಷ್ಯ ನಿರ್ಧರಿಸುತ್ತೆ!

ಸಂಸತ್ ಭವನದಲ್ಲಿ ತೆಗೆದುಕೊಳ್ಳುವ ಪ್ರತಿ ನಿರ್ಣಯ ಭವಿಷ್ಯಕ್ಕೆ ಮಹತ್ವದ್ದು. ಇಲ್ಲಿನ ಪ್ರತಿ ನಿರ್ಣಯ ಉಜ್ವಲ ಭವಿಷ್ಯಕ್ಕೆ ಆಧಾರ. ಇಲ್ಲಿನ ನಿರ್ಣಯ ಬಡವರ ಪಾಲಿನ ಆಶಾ ಕಿರಣ ಹಾಗೂ ಸಂಸತ್​ ಬಡವರ ಕಲ್ಯಾಣಕ್ಕಾಗಿ ಸಮರ್ಪಿತ. ಇಲ್ಲಿ ನಿರ್ಮಿಸಲಿರುವ ಕಾನೂನುಗಳು ಬಡವರ & ಯುವಕರ ಅಭಿವೃದ್ಧಿಗೆ ಅನುಕೂಲವಾಗಲಿವೆ. ನಾನು ದೇಶದ ಜನರಿಗೆ ಹೊಸ ಸಂಸತ್​ ನಿರ್ಮಾಣದ ಶುಭಾಶಯ ತಿಳಿಸುತ್ತೇನೆ ಎಂದು ಹೇಳುವ ಮೂಲಕ ನೂತನ ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ತಮ್ಮ ಮೊದಲ ಮಾತು ಮುಗಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+